- Kannada News Photo gallery Cricket photos Kavya Maran Different type of expression Goes viral After SRH Defeat against LSG Cricket News in Kannada
ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ನೋಡಿ
ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್’ ತಂಡದ ಮಾಲಕಿ. ನಿನ್ನೆ (ಮಾರ್ಚ್ 27) ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಲಖನೋ ತಂಡ ಸೋಲು ಉಣಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ಗಮನ ಸೆಳೆಯಿತು.
Updated on:Mar 28, 2025 | 10:43 AM

ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್ಆರ್ಎಚ್ vs ಎಲ್ಎಸ್ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

ಪಂದ್ಯ ಗೆಲ್ಲುತ್ತಿದೆ, ಎಸ್ಆರ್ಎಚ್ ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ. ಅವರ ಮುಖದಲ್ಲಿ ನಗು ಚೆಲ್ಲುತ್ತಾ ಇರುತ್ತದೆ. ಆದರೆ, ಸೋಲುವಾಗ ಅವರ ಎಕ್ಸ್ಪ್ರೆಷನ್ ಬೇರೆಯೇ ಆಗಿರುತ್ತದೆ.

ಮಾರ್ಚ್ 27ರ ಪಂದ್ಯದಲ್ಲಿ ಹೈದರಾಬಾದ್ ತಂಡದ ಘಟಾನುಘಟಿ ಆಟಗಾರರು ಔಟ್ಆಗುತ್ತಾ ಬಂದರು. 300 ರನ್ ಟಾರ್ಗೆಟ್ ರೀಚ್ ಆಗಬೇಕು ಎಂದು ಕನಸು ಕಂಡಿದ್ದ ಆಟಗಾರರು ಕೇವಲ 190 ರನ್ ಗಳಿಸಲಷ್ಟೇ ಶಕ್ಯರಾದರು. ಇದು ಕಾವ್ಯಾ ಬೇಸರಕ್ಕೆ ಕಾರಣ ಆಗಿದೆ.

ಕಾವ್ಯಾ ಮಾರನ್ ಅವರ ವಿವಿಧ ಎಕ್ಸ್ಪ್ರೆಷನ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (0) ನಿತೀಶ್ ರೆಡ್ಡಿ (32) ಔಟ್ ಆಗುವಾಗ ಕಾವ್ಯಾ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

ಇನ್ನು ಲಖನೋ ತಂಡದ ಪೂರನ್ ಅವರು ಹಿಗ್ಗಾ ಮುಗ್ಗಾ ಬಾರಿಸುವಾಗಲೂ ಕಾವ್ಯಾ ಅವರ ಮುಖದಲ್ಲಿ ಇದ್ದ ನಗು ಮಾಯ ಆಗಿತ್ತು. ಅವರ ಮುಖದ ಬೇಸರ ನೋಡಿಯೇ ಅನೇಕರಿಗೆ ಬೇಸರ ಆಗಿದೆ!
Published On - 10:42 am, Fri, 28 March 25



















