AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋನಲ್ಲಿರುವ ಮಹಿಳೆಯರು ಬೇರೆ-ಬೇರೆ: ಇನ್ಸ್​ಪೆಕ್ಟರ್​​ ಸಂದೇಶ ಕೇಸಿನ ತನಿಖಾ ವರದಿಯಲ್ಲಿ ಬಹಿರಂಗ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವ ವೈರಲ್ ಆಡಿಯೋ ತುಣುಕಿನ ಆಧಾರದ ಮೇಲೆ ಮಂಗಳೂರು ಪೊಲೀಸ್ ಆಯುಕ್ತರು ಈ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಆದ್ರೆ, ವಿಡಿಯೋನಲ್ಲಿರುವ ಮಹಿಳೆಯರು ಬೇರೆ, ದೂರು ನೀಡಿರುವ ಸಂತ್ರಸ್ತೆ ಬೇರೆ ಎನ್ನುವುದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಹಾಗಾದ್ರೆ, ತನಿಖಾ ವರದಿಯಲ್ಲಿ ಏನೇನಿದೆ ಎನ್ನುವುದು ಈ ಕೆಳಗಿನಂತಿದೆ.

ವಿಡಿಯೋನಲ್ಲಿರುವ ಮಹಿಳೆಯರು ಬೇರೆ-ಬೇರೆ: ಇನ್ಸ್​ಪೆಕ್ಟರ್​​ ಸಂದೇಶ ಕೇಸಿನ ತನಿಖಾ ವರದಿಯಲ್ಲಿ ಬಹಿರಂಗ
ಸಂತ್ರಸ್ತೆ, ಇನ್ಸ್​​ಪೆಕ್ಟರ್ ಸಂದೇಶ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Mar 17, 2026 | 8:29 PM

Share

ಮಂಗಳೂರು (ಮಾರ್ಚ್ 17): ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆದು ಲೈಂಗಿಕ ಕಿರುಕುಳ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ (Moodbidri inspector Sandesh case) ನನ್ನು ಅಮಾನತು ಮಾಡಲಾಗಿದೆ. ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ (ACP) ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದ್ರೆ, ತನಿಖಾ ವರದಿಯ ಪ್ರಕಾರ, ವಿಡಿಯೋನಲ್ಲಿರುವ ಮಹಿಳೆ ಬೇರೆ, ಆರೋಪ ಮಾಡಿದ ಸಂತ್ರಸ್ತೆ ಬೇರೆ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ ಸಂತ್ರಸ್ತೆ ವಿರುದ್ಧವೂ ಸಹ ಕೇಸ್​ ದಾಖಲಾಗಿರುವ ಅಂಶ ಬೆಳಕಿಗೆ ಬಂದಿದೆ.

ಇನ್ನು ಸಂತ್ರಸ್ತೆ ಮಾಡಿದ ಸಾಲು ಸಾಲು ಆರೋಪ ಬೆನ್ನಲ್ಲೇ ಇನ್ಸ್​ಪೆಕ್ಟರ್ ಸಂದೇಶ ವಿರುದ್ಧದ ಪ್ರಕರಣದ ತನಿಖೆಯನ್ನು ಎಸಿಪಿ ಶ್ರೀಕಾಂತ್‌ಗೆ ವಹಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಎಸಿಪಿ ಶ್ರೀಕಾಂತ್‌ ಅವರು ಇಂದು (ಮಾರ್ಚ್ 17) ಇನ್ಸ್​ಪೆಕ್ಟರ್ ಸಂದೇಶ ಅವರನ್ನು ವಿಚಾರಣೆ ನಡೆಸಿ ತನಿಖಾ ವರದಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದು, ಈ ವರದಿ ಆಧರಿಸಿ ಸಂದೇಶ ಅವರನ್ನ ಸಸ್ಪೆಂಡ್ ಮಾಡಲಾಗಿದೆ. ಆದ್ರೆ, ವರದಿಯಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲ. ಅಲ್ಲದೇ ವಿಡಿಯೋನಲ್ಲಿರುವ ಮಹಿಳೆ ಬೇರೆ ಆರೋಪ ಮಾಡಿದ ಸಂತ್ರಸ್ತೆ ಬೇರೆ ಎನ್ನುವ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. ಹಾಗಾದ್ರೆ, ವರದಿಯಲ್ಲಿ ಏನಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಕಾಮಕಾಂಡ ಪ್ರಕರಣ: ಮೂಡುಬಿದಿರೆ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್​​ಗೆ ಬಿಗ್ ಶಾಕ್

ಎಸಿಪಿ ತನಿಖಾ ವರದಿಯ ಪ್ರಮುಖ ಅಂಶಗಳು

  • ಸಂತ್ರಸ್ತೆಯ ಪರಿಚಯಸ್ಥೆ ಮಹಿಳೆ ದೂರು ಹಾಗೂ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಅವರ ಮತ್ತು ಅವರ ಸಹೋದರಿಯ ನಡುವೆ ಕುಟುಂಬ ಸಮಸ್ಯೆಗಳು ಇದ್ದು, ಸಂತ್ರಸ್ತೆಯ ಪರಿಚಯಸ್ಥೆ ಮಹಿಳೆ ವಿರುದ್ಧ ಎರಡು ಪ್ರಕರಣಗಳು ಮತ್ತು ಅವರ ಸಹೋದರಿಯ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಒಂದು ಪ್ರಕರಣ ತನಿಖೆಯಲ್ಲಿದ್ದು, ಉಳಿದವು ಹೈಕೋರ್ಟ್‌ನಲ್ಲಿ ಸ್ಥಗಿತಗೊಂಡಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿದೆ.
  • ಸಂತ್ರಸ್ತೆ ಇನ್ಸ್‌ಪೆಕ್ಟರ್ ವಿರುದ್ಧ ಮಾಧ್ಯಮದಲ್ಲಿ ಹೇಳಿಕೆ ನೀಡಿದ ಮತ್ತೊಬ್ಬ ಮಹಿಳೆ.  ಅವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಂದರಲ್ಲಿ ಅವರು ಖುಲಾಸೆಯಾಗಿದ್ದಾರೆ. ಒಂದು ಪ್ರಕರಣದಲ್ಲಿ, ಅವರು ಮತ್ತು ಅವರ ಪತಿ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ.
  • ಸಾಕ್ಷ್ಯ ಸಂಗ್ರಹದ ನಂತರ, ಇವರಿಬ್ಬರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇವರ ಮೇಲೆ ಯಾವುದೇ ಕಿರುಕುಳದ ಸಾಕ್ಷ್ಯ ದೊರಕಿಲ್ಲ. ಅವರು ಇನ್ಸ್‌ಪೆಕ್ಟರ್ ಹಣ ಕೇಳಿದರು ಹಾಗೂ ಕಿರುಕುಳ ನೀಡಿದರು ಎಂದು ಹೇಳಿದ ಸ್ಥಳದಲ್ಲಿ ಸಿಸಿಟಿವಿ ಇದ್ದು, ಅಲ್ಲಿದ್ದ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
  •  ಮಾಧ್ಯಮದಲ್ಲಿ ಹೇಳಿಕೆ ನೀಡಿದ ಮಹಿಳೆಯರು ಮತ್ತು ವಿಡಿಯೋ/ಆಡಿಯೋದಲ್ಲಿ ಕಾಣುವ ಮಹಿಳೆಯರು ಬೇರೆಬೇರೆ ವ್ಯಕ್ತಿಗಳಾಗಿದ್ದಾರೆ.
  • ಆದರೆ ವಿಡಿಯೋ ಮತ್ತು ಆಡಿಯೋದಲ್ಲಿ ಇನ್ಸ್‌ಪೆಕ್ಟರ್ ಅಸಭ್ಯ ವರ್ತನೆ ತೋರಿದಂತೆ ಹಾಗೂ ಫೋನ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದಂತೆ ಕಾಣುತ್ತದೆ.
  •  ವಿಡಿಯೋ/ಆಡಿಯೋದಲ್ಲಿ ಕಾಣುವ ಇಬ್ಬರು ಮಹಿಳೆಯರು ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ. ಅವರಿಗೆ ನಂತರವೂ ಹೇಳಿಕೆ ನೀಡಬಹುದೆಂದು ತಿಳಿಸಲಾಗಿದೆ. ಇದರಿಂದ, ಆಡಿಯೋ ಮತ್ತು ವಿಡಿಯೋ ಆಧಾರದ ಮೇಲೆ ಇನ್ಸ್‌ಪೆಕ್ಟರ್ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಗೋಚರಿಸುತ್ತಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತು (suspension) ಮಾಡಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಯಲಿದೆ.
  • ಮಲಗಬೇಕು ಅಥವಾ 25 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುವ ಸಂತ್ರಸ್ತೆಯ ಆರೋಪಕ್ಕೆ ಸಾಕ್ಷ್ಯ ಇಲ್ಲ. ಸಂತ್ರಸ್ತೆ ಮೇಲೆ ಕೂಡ ಒಂದು ಪ್ರಕರಣ ದಾಖಲಾಗಿದೆ. ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣ ದುರುಪಯೋಗ ಕೇಸ್ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!