AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಸಿಲಿಂಡರ್​​ ಸೀಜ್​​​

ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯ ಲಾಭ ಪಡೆದು ಕೆಲವರು ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬೀದರ್, ದಾವಣಗೆರೆ, ಯಾದಗಿರಿ, ಕೋಲಾರ ಸೇರಿದಂತೆ ಹಲವೆಡೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನೂರಾರು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ದಂಧೆಕೋರರನ್ನು ಬಂಧಿಸಿದ್ದಾರೆ.

ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಸಿಲಿಂಡರ್​​ ಸೀಜ್​​​
ಅಕ್ರಮ ಗ್ಯಾಸ್ ಸಿಲಿಂಡರ್​​ ವಶಕ್ಕೆ ಪಡೆದ ಪೊಲೀಸರುImage Credit source: tv9 kannada
ಅಮೀನ್​ ಸಾಬ್​
| Edited By: |

Updated on: Mar 17, 2026 | 8:24 PM

Share

ಬೆಂಗಳೂರು, ಮಾರ್ಚ್​ 17: ರಾಜ್ಯದಲ್ಲಿ ಗ್ಯಾಸ್‌ಗಾಗಿ ದೊಡ್ಡ ಸಂಕಷ್ಟವೇ ಎದುರಾಗಿದ್ದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಗೃಹಬಳಕೆ ಗ್ಯಾಸ್‌ ಸಿಲಿಂಡರ್‌ಗಳನ್ನ (Gas cylinder) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಕಳ್ಳಾಟ ಆಡುತ್ತಿದ್ದವರಿಗೆ ಇದೀಗ ಪೊಲೀರು ಬಿಸಿಮುಟ್ಟಿಸಿದ್ದು ಜೊತೆಗೆ ನೂರಾರು ಗ್ಯಾಸ್‌ ಸಿಲಿಂಡರ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೀದರ್‌ನಲ್ಲಿ 105 ಗ್ಯಾಸ್‌ ಸಿಲಿಂಡರ್‌ ವಶಕ್ಕೆ

ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧದಿಂದ ಭಾರತದಲ್ಲಿ ಅಡುಗೆ ಅನಿಲ ಸಮಸ್ಯೆ ತಲೆದೋರಿದ್ದು, ಕರುನಾಡಿನಲ್ಲೂ ಸಂಕಷ್ಟ ಇದೆ. ಇಂಥಾ ಹೊತ್ತಲ್ಲೇ ಬೀದರ್‌ನಲ್ಲಿ ಅಕ್ರಮವಾಗಿ ಗ್ಯಾಸ್‌ ದಂಧೆ ನಡೆದಿತ್ತು. ಬೀದರ್ ತಾಲೂಕಿನ ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಸ್‌ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು 23 ತುಂಬಿದ ಹಾಗೂ 82 ಖಾಲಿ ಸಿಲಿಂಡರ್ ಸೇರಿದಂತೆ 105 ಗೃಹಬಳಕೆ ಸಿಲಿಂಡರ್ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರ: ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ ವಶಕ್ಕೆ

ಅಕ್ರಮವಾಗಿ ಗ್ಯಾಸ್‌ ಸಿಲಿಂಡರ್‌ ಸಂಗ್ರಹಿಸಿಟ್ಟದ್ದ ದಂಧೆಕೋರರು, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ.

ದಾವಣಗೆರೆ, ಯಾದಗಿರಿಯಲ್ಲೂ ಸಿಲಿಂಡರ್ ವಶಕ್ಕೆ!

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಅಕ್ರಮವಾಗಿ ಗ್ಯಾಸ್‌ ಸಿಲಿಂಡರ್ ಸಂಗ್ರಹಿಸಿಡಲಾಗಿತ್ತು. ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 20 ಸಿಲಿಂಡರ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಯಾದಗಿರಿ ಜಿಲ್ಲೆಯ ಶಹಾಪುರದ ಹೊಟೇಲ್ ಹಾಗೂ ರೆಸ್ಟೋರೆಂಟ್ ಗೃಹಬಳಕೆ ಸಿಲಿಂಡರ್‌ಗಳು ಪತ್ತೆ ಆಗಿವೆ. ಶಹಾಪುರ ಹಾಗೂ ಭೀಮರಾಯನಗುಡಿಯಲ್ಲಿ 19 ಗೃಹಬಳಕೆ ಸಿಲಿಂಡರ್‌ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್: ರಿಟ್​​ ಅರ್ಜಿ ಸಲ್ಲಿಕೆ

ಹೋಟೆಲ್​ಗಳಲ್ಲಿ ಗೃಹಬಳಕೆ ಸಿಲಿಂಡರ್​ ಬಳಕೆ ಹಿನ್ನೆಲೆ ಕೆಜಿಎಫ್​ ತಹಶೀಲ್ದಾರ್ ಭರತ್ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ರಾಬರ್ಟ್​ಸನ್​ಪೇಟೆ, ಆ್ಯಂಡರ್​ಸನ್​ಪೇಟೆಯಲ್ಲಿ ದಾಳಿ ಮಾಡಿದ್ದು, 3 ಗೃಹಬಳಕೆ ಸಿಲಿಂಡರ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಗರಸಭೆ ಆಹಾರ ನಿರೀಕ್ಷಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಕೊಪ್ಪಳ, ಗದಗದಲ್ಲಿ ನೋ ಸ್ಟಾಕ್‌

ಗದಗ ಜಿಲ್ಲೆಯ ನರಗುಂದದಲ್ಲಿರುವ ಇಂಡಿಯನ್ ಗ್ಯಾಸ್‌ ಏಜೆನ್ಸಿ ನೋ ಸ್ಟಾಕ್ ಬೋರ್ಡ್‌ ಹಾಕಿದೆ. ಗ್ರಾಮೀಣ ಭಾಗದಿಂದ ಖಾಲಿ ಸಿಲಿಂಡರ್‌ ಹೊತ್ತು ಬಂದಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಪ್ಪಳದಲ್ಲೂ ಸಿಲಿಂಡರ್ ಸಿಗದಿದ್ದಕ್ಕೆ ಏಜೆನ್ಸಿ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕೊಪ್ಪಳದ ಗುರುಪ್ರಸಾದ್ ಗ್ಯಾಸ್ ಏಜೆನ್ಸಿ ಮುಂದೆ ವಾಗ್ವಾದ ನಡೆಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Ameen Sab
Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!