Video : ಹುಟ್ಟುಹಬ್ಬದ ದಿನ ಫುಡ್ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಕಾದಿತ್ತು ಸರ್ಪ್ರೈಸ್, ಏನದು ಗೊತ್ತಾ?
ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಾನು ಖುಷಿಯಾಗಿದ್ದರೆ ಸಾಕು ಎಂದು ಬಯಸುವವರೇ ಹೆಚ್ಚು. ಬೇರೆಯವರು ಖುಷಿಯಾಗಿರಲಿ, ಸಂತೋಷವಾಗಿರಲಿ ಎಂದು ಬಯಸುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಡ್ ಆರ್ಡರ್ ಮಾಡಿದ್ದ ಮನೆಮಂದಿ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡುವ ಮೂಲಕ ಖುಷಿಪಡಿಸಿ, ಆತನ ಮುಖದಲ್ಲಿ ನಗುತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಒಳ್ಳೆಯ ಮನಸ್ಸಿನ ವ್ಯಕ್ತಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಟ್ಟುಹಬ್ಬ (birthday) ಬಂತೆಂದರೆ ಎಲ್ಲರೂ ಕೂಡ ಆತ್ಮೀಯರು ಏನಾದ್ರೂ ಸರ್ಪ್ರೈಸ್ ಉಡುಗೊರೆಗಳನ್ನು ನೀಡುತ್ತಾರಾ ಎಂದು ಕಾಯುತ್ತೇವೆ. ಯಾರಾದ್ರೂ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರೆ ಆ ಖುಷಿಯನ್ನು ಹೇಳಲು ಪದಗಳೇ ಸಾಲಲ್ಲ. ಇನ್ನು ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡುವುದು ಕಾಮನ್. ಆದರೆ ಇಲ್ಲೊಂದು ಮನೆ ಮಂದಿ ಗುರುತು ಪರಿಚಯವಿಲ್ಲದ ಜೊಮಾಟೊ ಡೆಲಿವರಿ ಬಾಯ್‌ಗೆ (Zomato delivery boy) ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಫುಡ್ ಡೆಲಿವರಿ ಬಾಯ್ ಕಣ್ಣೀರು ಸುರಿಸಿದ್ದಾನೆ. ಈ ವಿಡಿಯೋ ಸಾಮಾಜಿಕತಾಣಗಳಲ್ಲಿ(social media) ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫುಡ್ ಡೆಲಿವರಿ ಬಾಯ್‌ಗೆ ಸರ್ಪ್ರೈಸ್ ನೀಡಿದ ಮನೆಮಂದಿ
krsnaratnanii ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಫುಡ್ ಡೆಲಿವರಿ ಬಾಯ್, ಆರ್ಡರ್ ಮಾಡಿದ ಫುಡ್ ತಲುಪಿಸಲು ಮನೆಯೊಂದಕ್ಕೆ ಹೋಗಿದ್ದಾನೆ. ಆ ವೇಳೆ ಆ ಮನೆಯ ಸದಸ್ಯರಲ್ಲಿ ಒಬ್ಬರು ಆತನ ಕಣ್ಣನ್ನು ಮುಚ್ಚಿ ಒಳಗೆ ಕರೆದುಕೊಂಡು ಹೋಗಿ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಪ್ರಾರಂಭದಲ್ಲಿ ಆತನಿಗೆ ಈ ಬಗ್ಗೆ ಯಾವುದೇ ಐಡಿಯಾ ಕೂಡ ಇರಲಿಲ್ಲ. ಮನೆಯೊಳಗೆ ಹೋದ ಬಳಿಕ ಅಲ್ಲಿದ್ದವರೆಲ್ಲರೂ ಜೋರಾಗಿ ಹುಟ್ಟುಹಬ್ಬದ ಶುಭಾಶಯಗಳು ಎನ್ನುತ್ತಾ ವಿಶ್ ಮಾಡಿದ್ದಾರೆ. ಬಳಿಕ ಸಿಹಿ ತಿನ್ನಿಸಿ ಆತನನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ್ದು, ಈ ಪರಿಶುದ್ಧ ಪ್ರೀತಿಯನ್ನು ಕಂಡು ಡೆಲಿವರಿ ಬಾಯ್ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ.
ಇದನ್ನೂ ಓದಿ :Video : ರಸ್ತೆಬದಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಹೀಗೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರೊಬ್ಬರು, ಈ ವಿಡಿಯೋ ಅದ್ಭುತವಾಗಿದೆ, ಡೆಲಿವರಿ ಬಾಯ್ ಡಿಟೇಲ್ಸ್ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಈ ಪ್ರಪಂಚದಲ್ಲಿರುವ ಜನರಿಂದ ನಾನು ಬಯಸುವುದು ಇದನ್ನೇ, ಇಂತಹ ಬದಲಾವಣೆಗಳಾಗಬೇಕು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಆಹಾರದ ರುಚಿ ಕೆಲವು ಸಮಯದವರೆಗೆ ಇರುತ್ತದೆ. ಆದರೆ ಈ ರೀತಿಯ ಪ್ರೀತಿಯೂ ಕೊನೆಯವರೆಗೂ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








