Video: ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ವಧುವಿನ ಒಪ್ಪಿಗೆ ಕೇಳಿದ ವರ; ಮದುಮಗಳ ರಿಯಾಕ್ಷನ್ ಹೇಗಿತ್ತು ನೋಡಿ
ಮದುವೆ ಶಾಸ್ತ್ರ, ಸಂಪ್ರದಾಯಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ತಾಳಿ ಕಟ್ಟುವ ವೇಳೆ ವಧು ಕಣ್ಣೀರು ಹಾಕುವ, ವರ ವಧುವಿನ ಕಾಲಿಗೆ ಬೀಳುವ ಹೀಗೆ ವಿಶೇಷವಾಗಿರುವ ದೃಶ್ಯ ವೈರಲ್ ಆಗುತ್ತಿರುತ್ತವೆ. ಅಂತಹದ್ದೇ ಸುಂದರ ದೃಶ್ಯ ಇದೀಗ ವೈರಲ್ ಆಗಿದ್ದು, ವರ ತಾಳಿ ಕಟ್ಟುವ ಶುಭ ವೇಳೆಯಲ್ಲಿ ವಧುವಿನ ಒಪ್ಪಿಗೆ ಪಡೆದೇ ಆಕೆಗೆ ತಾಳಿ ಕಟ್ಟಿದ್ದಾನೆ. ವರನ ಈ ನಡೆ ಎಲ್ಲರ ಮನ ಗೆದ್ದಿದೆ.

ಮಂತ್ರಘೋಷ, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ವರ (Groom) ವಧುವಿನ ಕೊರಳಿಗೆ ಕಟ್ಟಲು ಸಿದ್ಧನಾದಾಗ ನನಗೆ ಈ ಮದುವೆ ಬೇಡ ಎಂದು ಮದುಮಗಳು ಮದುವೆಯನ್ನೇ ನಿರಾಕರಿಸಿದ ಘಟನೆ ಇತ್ತೀಚಿಗಷ್ಟೆ ಹಾಸನದಲ್ಲಿ ನಡೆದಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ತಮಿಳುನಾಡಿನಲ್ಲಿ (Tamil Nadu) ನಡೆದಿದ್ದು, ತಾಳಿ ಕಟ್ಟುವ ಶುಭ ವೇಳೆಯಲ್ಲಿ ವರ ಕೈಯಲ್ಲಿ ಮಂಗಳಸೂತ್ರ ಹಿಡಿದು ತಾಳಿ ಕಟ್ಲಾ ಎಂದು ವಧುವಿನ (groom take bride permission) ಒಪ್ಪಿಗೆ ಪಡೆದು ಆಕೆಗೆ ತಾಳಿ ಕಟ್ಟಿದ್ದಾನೆ. ಈ ಸುಂದರ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದ್ದು, ನೋಡುಗರು ಎಂಥಾ ಒಳ್ಳೆ ಸಂಸ್ಕಾರವಂತ ಹುಡುಗ ಎಂದು ವರನನ್ನು ಹಾಡಿ ಹೊಗಳಿದ್ದಾರೆ.
ವಧುವಿನ ಒಪ್ಪಿಗೆ ಪಡೆದು ತಾಳಿ ಕಟ್ಟಿದ ವರ:
ಇತ್ತೀಚಿಗಷ್ಟೆ ತಮಿಳುನಾಡಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರ ಸುಂದರ ದೃಶ್ಯ ಇದಾಗಿದ್ದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವರ ಮಂಗಳ ಸೂತ್ರವನ್ನು ಕೈಯಲ್ಲಿ ಹಿಡಿದು ʼತಾಳಿ ಕಟ್ಲಾʼ ಎಂದು ಮದುಮಗಳ ಒಪ್ಪಿಗೆ ಕೇಳಿದ್ದಾನೆ. ವಧು ಒಪ್ಪಿಗೆ ಕೊಟ್ಟ ಬಳಿಕವೇ ಆತ ತಾಳಿ ಕಟ್ಟಿದ್ದು, ಈ ದೃಶ್ಯ ಭಾರೀ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Just before tying the mangalsutra, this groom paused, looked at his bride, and asked for her consent. The gesture moved her to tears as she said yes. The couple, who got engaged on January 19, tied the knot in Chennai with a moment that stood out for all the right reasons. pic.twitter.com/YmzXx9kZri
— Brut India (@BrutIndia) June 20, 2025
ಈ ವಿಡಿಯೋವನ್ನು Brut India ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೈಯಲ್ಲಿ ಮಂಗಳಸೂತ್ರವನ್ನು ಹಿಡಿದ ಕುಳಿತಿರುವ ವರ ವಧುವಿನ ಒಪ್ಪಿಗೆ ಕೇಳುತ್ತಿರುವ ಅದ್ಭುತ ದೃಶ್ಯವನ್ನು ಕಾಣಬಹುದು. ವಧು ಒಪ್ಪಿಗೆ ಕೊಟ್ಟ ಬಳಿಕವೇ ವರ ತಾಳಿ ಕಟ್ಟಿದ್ದು, ಈ ಕ್ಷಣದಲ್ಲಿ ಮದುಮಗಳು ಭಾವುಕಳಾಗಿದ್ದಾಳೆ.
ಇದನ್ನೂ ಓದಿ: ಸಿಂಧೂರ ಹಚ್ಚುವಾಗ ನಡುಗಿತು ವರನ ಕೈ, ಈ ಮದುವೆ ಬೇಡ ಎಂದು ಹಠ ಹಿಡಿದು ಕುಳಿತ ವಧು
ಜೂನ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಮ್ಮ ಸನಾತನ ಧರ್ಮದ ಸೊಬಗುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಎಲ್ಲಾ ಹುಡುಗ್ರು ಮದುವೆ ಎಂದ್ರೆ ಭಯಪಟ್ಟುಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಆತ ಒಪ್ಪಿಗೆ ಕೇಳಿದ್ದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಕೊನೆಯ ಹಂತದ ಸುರಕ್ಷತಾ ಪರಿಶೀಲನೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ʼಈ ದೃಶ್ಯ ನನ್ನ ಹೃದಯವನ್ನು ಮುಟ್ಟಿತುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Sat, 21 June 25