Video : ರಸ್ತೆಬದಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಹೀಗೆ
ಈಗಿನ ಕಾಲದಲ್ಲಿ ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವ ಜನರಿದ್ದಾರೆ. ತನ್ನ ಜೊತೆಗಿರುವ ವ್ಯಕ್ತಿಗೆ ನೋವು ಉಂಟು ಮಾಡಿದರೂ ಕ್ಷಮೆ ಕೇಳುವ ಕನಿಷ್ಠ ಪ್ರಜ್ಞೆಯೂ ಎಷ್ಟೋ ಜನರಿಗೆ ಇರುವುದಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಬೀದಿ ಬದಿಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿ, ಈತ ಮಾಡಿದ ಕೆಲಸ ನೋಡಿದ್ರೆ, ಈ ಕಾಲದಲ್ಲಿಯೂ ಇಂತಹ ಜನರು ಇರ್ತಾರಾ ಎಂದು ನಿಮಗೂ ಅನಿಸಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಇವನದ್ದು ತುಂಬಾ ಒಳ್ಳೆಯ ಮನಸ್ಸು ಎಂದು ಕಾಮೆಂಟ್ ಮಾಡಿದ್ದಾರೆ.

ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಮನುಷ್ಯನಲ್ಲಿ ಮಾನವೀಯತೆ (humanity), ಮನುಷ್ಯತ್ವ ಮರೆಯಾಗಿದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಈ ಜಗತ್ತಿನಲ್ಲಿ ಬುದ್ಧಿವಂತಯೆನಿಸಿಕೊಂಡಿರುವ ಮನುಷ್ಯನು ಕೂಡ ಮೃಗನಾಗುತ್ತಾನೆ. ಹೌದು, ಬೀದಿನಾಯಿಗಳ(Stray dogs) ಮೇಲೆ ಬೇಕಂತಲೇ ಕಾರು ಹತ್ತಿಸಿ ಮೃಗೀಯ ವರ್ತನೆ ತೋರಿದ ಘಟನೆಗಳು ಈ ಹಿಂದೆ ಕೂಡ ನಡೆದಿದೆ. ಆದರೆ ಇದೀಗ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದ್ದು, ಕಾರುಚಾಲಕನೊಬ್ಬನು ಅರಿವಿಲ್ಲದೇ, ರಸ್ತೆಯ ಬದಿ ಮಲಗಿದ್ದ ಬೀದಿನಾಯಿ ಮೇಲೆ ಕಾರು ಹತ್ತಿಸಿ, ಕೊನೆಗೆ ಈ ವಿಚಾರವು ತಿಳಿದು ಶ್ವಾನದ ಬಳಿ ಕ್ಷಮೆಯಾಚಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದೆ.
@thewittywriter ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಾರು ಚಾಲಕನೊಬ್ಬನು ಅರಿವಿಲ್ಲದೇನೆ ರಸ್ತೆ ಬದಿಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ್ದಾನೆ. ಆ ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ಶ್ವಾನದ ಮುಂದೆ ಕ್ಷಮೆಯಾಚಿಸುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಶ್ವಾನದ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ, ಆ ಶ್ವಾನವನ್ನು ಎತ್ತಿಕೊಂಡು ಹೋಗುವುದನ್ನು ನೋಡಬಹುದು.
ಇದನ್ನೂ ಓದಿ: Video : ರೀಲ್ಸ್ ತಂದ ಪಜೀತಿ; ಮನೆಯಂಗಳದಲ್ಲಿ ರೀಲ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವಾರು ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯೂ ಕರ್ಮವನ್ನು ನಂಬುವಂತೆ ತೋರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಕಾರು ಚಾಲಕ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿರಬೇಕು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ