Video : ಮಕ್ಕಳಿಗೆ ಊಟ ಮಾಡಲು ತಾಯಂದಿರು ತರಬೇತಿ ನೀಡುವುದು ಹೀಗೆ, ಟೀಕೆಗೆ ಕಾರಣವಾಯ್ತು ಪೌಷ್ಟಿಕ ತಜ್ಞೆಯ ವಿಡಿಯೋ
ಈಗ ಕಾಲ ಬದಲಾಗಿದೆ ಬಿಡಿ, ಒಂದೋ ಎರಡೋ ಮಕ್ಕಳಿರುವ ಕಾರಣ ಹೆತ್ತವರು ಮಕ್ಕಳನ್ನು ಹೆಚ್ಚು ಮುದ್ದು ಮಾಡಿಯೇ ಸಾಕುತ್ತಾರೆ. ಮಕ್ಕಳು ಎಷ್ಟೇ ದೊಡ್ಡವರು ಆಗಲಿ ತಾವೇ ಊಟ ಮಾಡಿಸುತ್ತಾರೆ. ಆದರೆ ಇದೀಗ ಪೌಷ್ಟಿಕ ತಜ್ಞೆಯೊಬ್ಬರು ತಮ್ಮ ಮನೆಕೆಲಸದಾಕೆಯ ಮಗು ನೆಲದ ಮೇಲೆ ಕುಳಿತುಕೊಂಡು ಊಟ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಹೆತ್ತವರು ಮಕ್ಕಳಿಗೆ ತಾವೇ ಊಟ ಮಾಡಲು ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದ್ದು, ಆದರೆ ಈ ವಿಡಿಯೋವೊಂದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅಷ್ಟಕ್ಕೂ ನೆಟ್ಟಿಗರು ಈ ವಿಡಿಯೋ ಕಂಡು ಗರಂ ಆಗಿದ್ದು ಯಾಕೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಒಂದು ಗಂಟೆಯಿಂದ ಊಟದ ಬಟ್ಟಲು ಕೈಯಲ್ಲಿ ಹಿಡಿದುಕೊಂಡು ಮಗುವಿನ ಅಕ್ಕ ಪಕ್ಕ ತಿರುಗಿದರೂ ಮಗು ಊಟ ಮಾಡುತ್ತಿಲ್ಲವಲ್ಲ ಎಂದು ಎಷ್ಟೋ ತಾಯಂದಿರು ಹೇಳುವುದನ್ನು ಕೇಳುತ್ತೇವೆ. ಆದರೆ ಮಗು ಬೆಳೆಯುತ್ತ ಹೋದಂತೆ ತಾನೇ ಊಟ ಮಾಡಲು ಕಲಿತು ಬಿಡುತ್ತದೆ. ತಾಯಿಯಾದವಳು ಮಗುವಿನ ಊಟ ತಿಂಡಿ ಮಾಡುವುದು ಹೇಗೆ, ಬಟ್ಟೆ ಧರಿಸುವುದು ಹೇಗೆ ಹೀಗೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ತರಬೇತಿ (training) ನೀಡುತ್ತಾಳೆ. ಆದರೆ ಬೆಂಗಳೂರಿನ ಪೌಷ್ಟಿಕ ತಜ್ಞೆ ಸೋನಾಕ್ಷಿ ಶರ್ಮಾರವರು (Bengaluru nutritionist Sonakshi Sharma) ಭಾರತದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಶತಮಾನಗಳಿಂದ ತಾವೇ ಊಟ ಮಾಡಲು ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿವರಿಸಲು ತನ್ನ ಮನೆಯ ಕೆಲಸದಾಕೆಯ ಮಗುವು ಊಟ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ (social media) ಹಂಚಿಕೊಂಡಿದ್ದಾರೆ. ಬಳಕೆದಾರರು ಇವರ ವಿರುದ್ಧ ಗರಂ ಆಗಿದ್ದು ತಾರತಮ್ಯ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.
fitnaari.india ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೆಂಗಳೂರಿನ ಪೌಷ್ಟಿಕ ತಜ್ಞೆ ಸೋನಾಕ್ಷಿ ಶರ್ಮಾ ಅವರು ಸೋಫಾದ ಮೇಲೆ ಕುಳಿತು ಊಟ ಮಾಡುತ್ತಿದ್ದರೆ, ಅವರ ಮಗು ಕುರ್ಚಿ ಮೇಲೆ ಕುಳಿತುಕೊಂಡು ಆಹಾರವನ್ನು ಸೇವಿಸುತ್ತಿದೆ. ಇತ್ತ ಮನೆಕೆಲಸದಾಕೆಯ ಮಗು ನೆಲದ ಮೇಲೆ ಕುಳಿತು ತಟ್ಟೆಯಲ್ಲಿದ್ದ ರೊಟ್ಟಿಯನ್ನು ತಿನ್ನುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಸೋನಾಕ್ಷಿಯವರು ತಾಯಂದಿರು ತಾವೇ ಊಟ ಮಾಡಲು ತರಬೇತಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಈ ವಿಡಿಯೋವನ್ನು ಟೀಕಿಸುವ ಅಗತ್ಯವಿಲ್ಲ. ಮಗು ನೆಲದ ಮೇಲೆ ಕುಳಿತು ಊಟ ಮಾಡಲು ಇಷ್ಟ ಪಡುತ್ತದೆ. ಇದು ಆ ಮಗುವಿನ ದಿನನಿತ್ಯದ ಅಭ್ಯಾಸ. ಮನೆಕೆಲಸದಲ್ಲಿ ನಿರತರಾಗಿದ್ದ ನಮ್ಮ ತಾಯಂದಿರು ಕೂಡ ನಮ್ಮನ್ನು ಹೀಗೆಯೇ ಊಟ ಮಾಡಲು ಬಿಡುತ್ತಿದ್ದರು. ನಾವು ಇದೇ ರೀತಿಯೇ ಊಟ ಮಾಡಲು ಕಲಿತೆವು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Video : ಚಾರ್ಲಿಯೊಂದಿಗೆ ಭಾರತದಾದ್ಯಂತ ಸುತ್ತಾಟ, 12,000 ಕಿಮೀ ಸೈಕಲ್ ತುಳಿದುಕೊಂಡೇ ಯುವಕನ ಪ್ರಯಾಣ
ಈ ವಿಡಿಯೋವೊಂದು ಸೋಶಿಯಲ್ 33 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ವಿಡಿಯೋಗೆ ಟೀಕೆ ವ್ಯಕ್ತವಾಗಿದೆ. ಬಳಕೆದಾರರೊಬ್ಬರು ಇಬ್ಬರೂ ಮಕ್ಕಳ ನಡುವೆ ಈ ರೀತಿ ತಾರತಮ್ಯ ಮಾಡುವುದು ಎಷ್ಟು ಸರಿ . ನೀವು ಹೇಳುವುದು ಸರಿಯೇ. ಅದು ಮಗುವಿನ ಆಯ್ಕೆಯಾಗಿದೆ ನಿಜ. ನೀವು ಸೋಫಾದ ಮೇಲೆ ಕುಳಿತು ತಿನ್ನುವಾಗ ಮಗುವನ್ನು ನೆಲದ ಮೇಲೆ ಕುಳಿತುಕೊಳ್ಳಲು ಬಿಡಬಾರದು ಇತ್ತು ಎಂದಿದ್ದಾರೆ. ಇದು ಎರಡು ದಿನಗಳಲ್ಲಿ ತೆಗೆದ ಬೇರೆ ಬೇರೆ ವಿಡಿಯೋ, ಮಗುವು ನೆಲದ ಮೇಲೆ ಕುಳಿತುಕೊಂಡು ಆಹಾರ ಸೇವಿಸಲು ಇಷ್ಟ ಪಡುತ್ತದೆ. ಅದು ಆ ಮಗುವಿನ ಆಯ್ಕೆ, ನಿಮ್ಮ ಸಹಾನುಭೂತಿ ಅಗತ್ಯವಿಲ್ಲ ಎಂದು ಪೌಷ್ಟಿಕ ತಜ್ಞೆ ಪ್ರತಿಕ್ರಿಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಮತ್ತೊಬ್ಬ ಬಳಕೆದಾರರು, ಈ ಬಗ್ಗೆ ಹೇಳಲು ಈ ರೀತಿ ವಿಡಿಯೋ ಮಾಡುವ ಅಗತ್ಯವಿರಲಿಲ್ಲ. ವಿಷಯವನ್ನು ನೇರವಾಗಿ ಹೇಳಬಹುದಿತ್ತು ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳು ಸಣ್ಣ ಪುಟ್ಟ ವಿಷಯಗಳನ್ನು ಕಲಿಯುವುದು ಬಾಲ್ಯದಲ್ಲಿ, ಹೀಗಾಗಿ ತಾಯಿಯಾದವಳು ಮಗುವಿನ ಬೆಳವಣಿಗೆಯಲ್ಲಿ ಜೊತೆಯಾಗಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Mon, 30 June 25








