AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಚಾರ್ಲಿಯೊಂದಿಗೆ ಭಾರತದಾದ್ಯಂತ ಸುತ್ತಾಟ, 12,000 ಕಿಮೀ ಸೈಕಲ್ ತುಳಿದುಕೊಂಡೇ ಯುವಕನ ಪ್ರಯಾಣ

ಎಲ್ಲರಿಗೂ ಕೂಡ ಒಮ್ಮೆಯಾದ್ರೂ ತಮ್ಮ ಜೀವನದಲ್ಲಿ ಇಡೀ ಭಾರತವನ್ನು ಸುತ್ತಬೇಕು ಎನ್ನುವುದಿರುತ್ತದೆ. ಈ ಕನಸನ್ನು ನನಸು ಮಾಡಿಕೊಳ್ಳುವವರು ಕೆಲವೇ ಕೆಲವು ಮಂದಿ ಮಾತ್ರ. ಆದರೆ ಇಲ್ಲೊಬ್ಬ ಯುವಕನು ದೇಶವನ್ನು ಸುತ್ತುತ್ತಿದ್ದು, ಇವನ ಪ್ರಯಾಣಕ್ಕೆ ಜೊತೆಯಾಗಿದ್ದು ಇವನ ಪ್ರೀತಿಯ ಚಾರ್ಲಿಯಂತೆ. ಬಿಹಾರದ ಯುವಕನು ತನ್ನ ಮುದ್ದಿನ ಶ್ವಾನದೊಂದಿಗೆ ಭಾರತವನ್ನು ಸುತ್ತುತ್ತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ.

Video : ಚಾರ್ಲಿಯೊಂದಿಗೆ ಭಾರತದಾದ್ಯಂತ ಸುತ್ತಾಟ, 12,000 ಕಿಮೀ ಸೈಕಲ್ ತುಳಿದುಕೊಂಡೇ ಯುವಕನ ಪ್ರಯಾಣ
ಚಾರ್ಲಿಯೊಂದಿಗೆ ದೇಶ ಸುತ್ತುತ್ತಿರುವ ಯುವಕImage Credit source: Instagram
ಸಾಯಿನಂದಾ
|

Updated on: Jun 30, 2025 | 11:28 AM

Share

ಟ್ರಿಪ್ ಎಂದರೆ ಯಾರಿಗೇ ತಾನೇ ಇಷ್ಟ ಹೇಳಿ, ಕೆಲವರು ಸೋಲೋ ಟ್ರಿಪ್ (Trip) ಪ್ಲ್ಯಾನ್ ಮಾಡಿಕೊಂಡ್ರೆ, ಇನ್ನು ಕೆಲವರು ಫ್ಯಾಮಿಲಿ ಸ್ನೇಹಿತರ ಜೊತೆಗೆ ಸುತ್ತಾಡಲು ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವಕನು ತನ್ನ ಪ್ರೀತಿಯ ಶ್ವಾನದೊಂದಿಗೆ ಸೈಕಲ್‌ನಲ್ಲಿ ಭಾರತವನ್ನು (India) ಸುತ್ತುವ ಮೂಲಕ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾನೆ. ಈ ಬಿಹಾರದ ಯುವಕನ ಹೆಸರು ಸೋನು (Sonu). ಇಲ್ಲಿಯವರೆಗೆ ಸರಿಸುಮಾರು 12,000 ಕಿಮೀಗೂ ಹೆಚ್ಚು ಸೈಕಲ್ ತುಳಿದುಕೊಂಡೇ ಸುತ್ತಾಟ ನಡೆಸಿದ್ದಾನೆ. ತನ್ನ ಚಾರ್ಲಿಯೊಂದಿಗೆ ಈತನ ಸುತ್ತಾಟದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

safarmeinrahi ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಈ ಯುವಕನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದು ಈ ವೇಳೆಯಲ್ಲಿ ತನ್ನ ಚಾರ್ಲಿಯೊಂದಿಗೆ ಸೈಕಲ್‌ನಲ್ಲಿ ಭಾರತ ಸುತ್ತುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋದ ಪ್ರಾರಂಭದಲ್ಲಿ ನನ್ನ ಹೆಸರು ಸೋನು, ನಾನು ಬಿಹಾರದವನು, ನಾನು ಇಲ್ಲಿಯವರೆಗೆ 12000 ಕಿಮೀಗೂ ಹೆಚ್ಚು ಸೈಕಲ್‌ನಲ್ಲಿಯೇ ಸವಾರಿ ಮಾಡಿದ್ದೇನೆ. ಕಳೆದ 11 ತಿಂಗಳಿನಿಂದ ಮನೆಯಿಂದ ಸಂಪೂರ್ಣವಾಗಿ ದೂರವಿದ್ದೇನೆ. ನನ್ನ ಈ ಪ್ರಯಾಣದಲ್ಲಿ ಜೊತೆಯಾಗಿರುವುದು ನನ್ನ ಚಾರ್ಲಿ. ಅವನು ಎಂದಿಗೂ ನನ್ನನ್ನು ಬಿಡುವುದಿಲ್ಲ. ನಾನು ಸೈಕಲ್‌ನಲ್ಲಿ ಹೊರಟು ನಿಂತಾಗ ನನ್ನನ್ನು ಹಿಂಬಾಲಿಸುತ್ತಾನೆ ಎಂದಿದ್ದಾನೆ.

ಇದನ್ನೂ ಓದಿ
Image
ಏನ್ ಹಣೆಬರಹ ಅಂತೀರಾ, ರಜೆ ತಕೊಂಡ್ರು ನೆಮ್ಮದಿಯಾಗೋಕೆ ಬಿಡಲ್ಲ ಬಾಸ್
Image
ಚಲಿಸುವ ಬೈಕ್‌ನಲ್ಲೇ ಯುವಕ ಯುವತಿಯ ರೊಮ್ಯಾನ್ಸ್
Image
ಇಲ್ಲಿ ದಿನನಿತ್ಯ ಒದ್ದಾಟ, ಹೋರಾಟ : ಭಾರತೀಯ ಹೀಗೆನ್ನುತ್ತಿರುವುದು ಏಕೆ?
Image
ಈ ಬ್ರಿಟಿಷ್ ಪ್ರಜೆ ಧೈರ್ಯ ಮೆಚ್ಚಲೇಬೇಕು, ಪಾಕ್​​​ನಲ್ಲಿ ಭಾರತದ ಹಾವ

ಇದನ್ನೂ ಓದಿ : Viral : ರಜೆ ದಿನ ಕೂಡ ನೆಮ್ಮದಿಯಾಗಿ ಇರೋಕೆ ಬಿಡಲ್ಲ ನಮ್ಮ ಬಾಸ್ : ಈ ಮಹಿಳೆಗೆ ಬಾಸ್ ಇಟ್ಟ ಬೇಡಿಕೆ ನೋಡಿ

ಸೋನು ಈ ಚಾರ್ಲಿಯನ್ನು ಮೊದಲು ಭೇಟಿಯಾದದ್ದು ಉತ್ತರ ಪ್ರದೇಶದಲ್ಲಿಯಂತೆ. ಈ ಶ್ವಾನವು ಅಪಘಾತದಲ್ಲಿ ಗಾಯಗೊಂಡಿತ್ತು. ಆ ವೇಳೆಯಲ್ಲಿ ಈತನೇ ಶ್ವಾನಕ್ಕೆ ಚಿಕಿತ್ಸೆ ಕೊಡಿಸಿದ್ದು, ಇವರಿಬ್ಬರ ಸ್ನೇಹವು ಅಲ್ಲಿಂದ ಶುರುವಾಯಿತು. ಇಲ್ಲಿಯವರೆಗೆ ಇಬ್ಬರೂ ಜೊತೆಯಾಗಿ ರಾಮೇಶ್ವರಂ, ಕೇದಾರನಾಥ ಹಾಗೂ ಬದರಿನಾಥಕ್ಕೆ ಭೇಟಿ ನೀಡಿದ್ದಾರಂತೆ. ಇದೀಗ ಇಬ್ಬರೂ ಜೊತೆಯಾಗಿ ಪ್ರಯಾಗ್ ರಾಜ್ ಕಡೆಗೆ ಪ್ರಯಾಣ ಬೆಳೆಸಿದ್ದು ಈ ಬಗ್ಗೆ ಯುವಕನು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈವರೆಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ದೇವರು ನಿಮ್ಮಿಬ್ಬರನ್ನು ಆಶೀರ್ವಾದಿಸಲಿ ಎಂದಿದ್ದಾರೆ. ಇನ್ನೊಬ್ಬರು, ಈ ಜಗತ್ತಿನಲ್ಲಿ ಈ ಯುವಕನಂತಹವರು ಇದ್ದರೆ ಯಾವುದೇ ಪ್ರಾಣಿಗಳು ಒಂಟಿಯಾಗಿರುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು, ನಿಜ ಜೀವನದ ಚಾರ್ಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿಷ್ಕಲ್ಮಶ ಪ್ರೀತಿಯನ್ನು ಈ ಮುಗ್ಧ ಪ್ರಾಣಿಗಳಿಂದ ನಿರೀಕ್ಷಿಸಲು ಮಾತ್ರ ಸಾಧ್ಯ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ