ನಿಮ್ಮ ಶಾಲೆಯ ಸಹವಾಸ ಸಾಕು ಎಂದು ಬ್ಯಾಗ್ ಹಿಡಿದುಕೊಂಡು ಓಡಿದ ಪುಟ್ಟ ಬಾಲಕ, ಮನವೊಲಿಸಲು ಶಿಕ್ಷಕರು ಮಾಡಿದ್ದೇನು?
ಮಕ್ಕಳು ದೇವರ ಸಮಾನ, ಅವರಲ್ಲಿ ಯಾವುದೇ ದ್ವೇಷ ಹಾಗೂ ಕೆಟ್ಟ ಭಾವನೆಗಳು ಇರುವುದಿಲ್ಲ, ಅವರನ್ನು ಮನವೊಲಿಸುವ ಕಲೆ ಗೊತ್ತಿರುವುದು ತಾಯಿ ಮತ್ತು ಶಿಕ್ಷಕರಿಗೆ. ಈ ಮಕ್ಕಳು ಕೂಡ ಅಷ್ಟ ತಾಯಿ ಮತ್ತು ಶಿಕ್ಷಕರ ಮಾತನ್ನು ಮಾತ್ರ ಕೇಳುವುದು, ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ಹೌದು ಹೇಳುತ್ತೀರಾ, ಒಬ್ಬ ಶಿಕ್ಷಕ ಶಾಲೆಯಿಂದ ಓಡಿ ಹೋದ ಬಾಲಕನ್ನು ಮತ್ತೆ ಶಾಲೆ ಕರೆದುಕೊಂಡು ಬರಲು ಯಾವೆಲ್ಲ ತಂತ್ರಗಳನ್ನು ಉಪಯೋಗಿಸಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಮನೆಯಲ್ಲಿ ಅಮ್ಮ ಗುರು, ಶಾಲೆಯಲ್ಲಿ ಗುರು ಅಮ್ಮ, ಇಬ್ಬರು ಮಕ್ಕಳನ್ನು ನಿಭಾಯಿಸಲು ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ಮಾಡುತ್ತಾ ಇರುತ್ತಾರೆ. ಪುಟಾಣಿ ಮಕ್ಕಳು ಶಾಲೆಗಿಂತ ಆಟವನ್ನು ಹೆಚ್ಚು ಇಷ್ಟಪಡುತ್ತಾರೆ. ಶಾಲೆಗೆ ಹೋದ್ರೆ ಶಿಕ್ಷಕರ ಕಾಟ ಯಾರಿಗೆ ಆಗಬಹುದು ಎಂಬ ಯೋಚನೆ. ಇದು ಹಿಂದಿನ ಕಾಲದ ಕಥೆ, ಈಗಿನ ಮಕ್ಕಳಿಗೆ ಮನೆಗಿಂತ ಶಾಲೆಯೇ ಖುಷಿ ನೀಡುತ್ತದೆ. ಆದರೆ ಇಲ್ಲೊಂದು ಪುಟ್ಟ ಬಾಲಕ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಶಾಲೆಯಿಂದ ಓಡಿ ಹೋಗಿದ್ದಾನೆ. ಆತನನ್ನು ಮರಳಿ ಶಾಲೆ ಕರೆದುಕೊಂಡು ಬರಲು ಶಿಕ್ಷಕರು ಹರಸಾಹಸ ಪಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ. ಈ ಘಟನೆ ಅರುಣಾಚಲ ಪ್ರದೇಶದ (Arunachal Pradesh ) ಶಾಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನನಗೆ ನೀವು ಬೇಡ ನಿಮ್ಮ ಶಾಲೆಯೂ ಬೇಡ ಎಂದು ಓಡುತ್ತಿರುವುದನ್ನು ಕಾಣಬಹುದು. ಪುಟ್ಟ ಬಾಲಕನ್ನು ಹಿಡಿಯಲು ಶಿಕ್ಷಕರು ಆತನ ಹಿಂದೆ ಓಡಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ಪುಟ್ಟ ಬಾಲಕನ ಹೆಸರು ಸೋನಮ್ ಜಂಗ್ಮು. ಈ ಹುಡುಗ ನಾನು ಶಾಲೆಗೆ ಬರುವುದಿಲ್ಲ, ಶಾಲೆಗೆ ಬರಲು ಇಷ್ಟವಿಲ್ಲ ಎಂದು ಓಡಲು ಶುರು ಮಾಡಿದ್ದಾನೆ. ಆತನ ಹಿಂದೆ ಶಿಕ್ಷಕರು ಕೂಡ ಓಡಿ, ತರಗತಿಗೆ ಬರುವಂತೆ ಹೇಳಿದ್ದಾರೆ. ಆದರೆ ಆತ ಅಳುತ್ತಾ ನಾನು ಬರುವುದಿಲ್ಲ, ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾನೆ. ರಸ್ತೆಯಲ್ಲಿ ಗೋಳಾಡಿ, ಕೂಗಾಡಿದ್ದಾನೆ. ಎಷ್ಟು ಕೇಳಿಕೊಂಡರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಆ ಹುಡುಗನಲ್ಲಿ ಇರಲಿಲ್ಲ. ಆತನ ಮನವೊಲಿಸಲು ಶಿಕ್ಷಕರು, ಕೇಕಿನ ಪ್ಯಾಕೆಟ್, ಹಾಗೂ ಊಟದ ಡಬ್ಬವನ್ನು ನೀಡಿದ್ದಾರೆ. ಇವೆರಡನ್ನುನ್ನು ತೆಗೆದುಕೊಂಡು ಮತ್ತೆ ಅಳಲು ಶುರು ಮಾಡಿದ್ದಾನೆ. ನೀವು ಏನೇ ಮಾಡಿದ್ರು ನಾನು ಶಾಲೆಗೆ ಬರುವುದಿಲ್ಲ ಎಂದು ರಸ್ತೆಯಲ್ಲೇ ಕೂತು ಗೋಳಾಡಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಪುಟ್ಟ ಬಾಲಕನ ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಇತನ ಮುದ್ದಾದ ಹಠಕ್ಕೆ ಮನಸೋತಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಶಾಲೆಯಿಂದ ಓಡುವಾಗ ಬ್ಯಾಗ್ ಒಂದು ಮರೆತಿಲ್ಲ ನೋಡಿ. ಇನ್ನೊಬ್ಬ ಬಳಕೆದಾರ ಈ ಪುಟಾಣಿಯ ಬಟ್ಟೆ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಬಿಟ್ಟುಬಿಡಿ ಅವನಿಗೆ ಶಾಲೆಗೆ ಬಂಕ್ ಮಾಡಲು ಇಷ್ಟ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕಾಕ್ಕಿಂತ ಇಂಡಿಯಾನೇ ಬೆಸ್ಟ್ : ಈ ವಿದೇಶಿ ಮಹಿಳೆ ಕೊಟ್ಟ ಕಾರಣ ನೋಡಿ
ಇನ್ನು ಈ ವಿಡಿಯೋ ನೋಡಿದ್ರೆ ಶಾಲೆಯಲ್ಲಿ ಶಿಕ್ಷಕರು ಎಷ್ಟು ಕಷ್ಟಪಡುತ್ತಾರೆ. ಮಕ್ಕಳನ್ನು ಹೇಗೆಲ್ಲ ನಿಭಾಯಿಸುತ್ತಾರೆ ಎಂಬುದನ್ನು ನೋಡಬಹುದು. ಮಕ್ಕಳೊಂದಿಗೆ ಕೆಲಸ ಮಾಡುವುದು ದೈಹಿಕವಾಗಿ ಕಷ್ಟಕರವಾಗಿರುತ್ತದೆ, ಶಿಕ್ಷಕರು ತಾಳ್ಮೆ ಮತ್ತು ಹೊಂದಿಕೊಳ್ಳುವ ಸ್ವಭಾವವನ್ನು ಹೊಂದಿರಬೇಕು. ಮಕ್ಕಳು ಶಾಲೆಗೆ ಬರಲು ತುಂಬಾ ಹಠ ಮಾಡುತ್ತಾರೆ. ಶಿಕ್ಷಕರು ಮಕ್ಕಳು ಪ್ರತಿದಿನ ಶಾಲೆಗೆ ಬರುವಂತೆ ಮನವೊಲಿಸಲು ಈ ಎಲ್ಲ ತಂತ್ರಗಳನ್ನು ಮಾಡುತ್ತಾರೆ ಎಂದು ಈ ವಿಡಿಯೋ ಹೇಳುತ್ತದೆ. ಮಕ್ಕಳಿಗೆ ಹೊಡೆಯುವುದು, ಬೈಯುವ ಬದಲು ಈ ರೀತಿಯ ಭಾವನಾತ್ಮಕವಾಗಿ ಅವರನ್ನು ಒಲಿಸಿಕೊಳ್ಳುವುದು ಒಳ್ಳೆಯದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








