ಒಂದು ತಿಂಗಳಿನಿಂದ ಜೀವಂತ ಹುಳುಗಳನ್ನು ವಾಂತಿ ಮಾಡುತ್ತಿರುವ ಬಾಲಕಿ, ಇದಕ್ಕೆ ಕಾರಣ ಒಳಚರಂಡಿ
ಜಗತ್ತಿನಲ್ಲಿ ಏನೆಲ್ಲ ರೋಗಗಳು ಬರುತ್ತದೆ ನೋಡಿ, ಚೀನಾದಲ್ಲಿ ಒಂದು ಹೊಸ ರೋಗ ಪತ್ತೆಯಾಗಿದ್ದು, 8 ವರ್ಷದ ಬಾಲಕಿಯೊಬ್ಬಳು ಜೀವಂತ ಹುಳಗಳನ್ನು ವಾಂತಿ ಮಾಡಿದ್ದಾಳೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. ಇದಕ್ಕೆ ಪ್ರಮುಖ ಕಾರಣ ಆಕೆಯ ಮನೆಯ ಒಳಚರಂಡಿ, ಅಷ್ಟಕ್ಕೂ ಒಳಚರಂಡಿಗೂ ಆಕೆ ಜೀವಂತ ಹುಳಗಳನ್ನು ವಾಂತಿ ಮಾಡಲು ಸಂಬಂಧವೇನು? ಎಂದು ನೀವು ಪ್ರಶ್ನೆ ಮಾಡಬಹುದು, ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಈ ಜಗತ್ತಿನಲ್ಲಿ ವಿಚಿತ್ರ ಕಾಯಿಲೆಗಳು ದಿನದಿಂದ ದಿನಕ್ಕೆ ಪತ್ತೆಯಾಗುತ್ತಿದೆ. ಮನುಷ್ಯನಲ್ಲಿ ಕಂಡುಬರುತ್ತಿರುವ ವಿಚಿತ್ರ ಕಾಯಿಲೆ ವೈದ್ಯರನ್ನು ಗೊಂದಲಕ್ಕೆ ಸಿಲುಕಿಸಿವೆ. ಇದೀಗ ಇಂತಹದೇ ಒಂದು ಕಾಯಿಲೆಗೆ ಚೀನಾ (Yangzhou City) ವೈದ್ಯರು ಬೆಚ್ಚಿಬಿದ್ದಿದ್ದರೆ. ಪೂರ್ವ ಚೀನಾದ (Chinese) ಜಿಯಾಂಗ್ಸು ಪ್ರಾಂತ್ಯದ ಯಾಂಗ್ಝೌ ನಗರದಲ್ಲಿ 8 ವರ್ಷದ ಬಾಲಕಿ ಸುಮಾರು ಒಂದು ತಿಂಗಳಿಂದ ಜೀವಂತ ಹುಳುಗಳನ್ನು ವಾಂತಿ ಮಾಡುತ್ತಿದ್ದಾಳೆ. ಈ ಬಗ್ಗೆ ಆಕೆಯ ಮನೆಯವರು ಕೂಡ ಅಚ್ಚರಿಕೆಗೊಂಡಿದ್ದಾರೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.
ಈ ಕಾಯಿಲೆ ಆಕೆ ಕುಟುಂಬದ ಯಾರಲ್ಲೂ ಕಂಡು ಬಂದಿಲ್ಲ. ಆದರೆ ಈ ಹುಡುಗಿ ಪ್ರತಿ ಬಾರಿಯೂ “ಒಂದು ಸೆಂಟಿಮೀಟರ್ ಉದ್ದದ ಒಂದು ಕೈಬೆರಳೆಣಿಕೆಯಷ್ಟು ಹುಳುಗಳನ್ನು ವಾಂತಿ ಮಾಡುತ್ತಿದ್ದಾಳೆ” ಎಂದು ಆಕೆಯ ತಂದೆ ವಿವರಿಸಿದ್ದಾರೆ. ನನ್ನ ಮಗಳು ಪದೇ ಪದೇ ವಾಂತಿ ಮಾಡುತ್ತಿದ್ದಳು, ಸ್ಥಳೀಯ ವೈದ್ಯರ ಬಳಿ ಹೋಗಿ ತೋರಿಸಿದ್ದೇವೆ. ಆದರೆ ಅವರಿಗೆ ಇದು ಯಾವ ಕಾಯಿಲೆಯೆಂದು ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಅವರು ಕೂಡ ಗೊಂದಲಗೊಂಡಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ. ಕೊನೆಗೆ ಜಿಯಾಂಗ್ಸುವಿನ ಸೂಚೋ ವಿಶ್ವವಿದ್ಯಾಲಯದ ಮಕ್ಕಳ ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ನಂತರವೇ ಮಕ್ಕಳ ತಜ್ಞ ಡಾ. ಜಾಂಗ್ ಬಿಂಗ್‌ಬಿಂಗ್ ಈ ಬಗ್ಗೆ ಅಘಾತಕಾರಿ ಮಾಹಿತಿಯೊಂದನ್ನು ನೀಡಿದ್ದಾರೆ. ಸ್ಥಳೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಕ್ಕೆ (ಸಿಡಿಸಿ) ಹುಳುವಿನ ಮಾದರಿಯನ್ನು ನೀಡುವಂತೆ ಆಕೆ ಪೋಷಕರಿಗೆ ಹೇಳಲಾಗಿತ್ತು.
ಇನ್ನು ಈ ಬಗ್ಗೆ ಮಾದರಿ ತೆಗೆದುಕೊಂಡು ಸಂಶೋಧನೆ ನಡೆಸಿದ ಸಿಡಿಸಿ ಕೇಂದ್ರ, ಇದು ಮಾತ್ ಫ್ಲೈ ಎಂದೂ ಕರೆಯಲ್ಪಡುವ ಡ್ರೈನ್ ಫ್ಲೈನ ಲಾರ್ವಾ ರೋಗ ಎಂದು ಪತ್ತೆ ಮಾಡಿದೆ. ಈ ಕೀಟಗಳು ಹೆಚ್ಚಾಗಿ ಮನೆಯ ಚರಂಡಿಗಳು, ಸ್ನಾನಗೃಹಗಳು ಮತ್ತು ಅಡುಗೆಮನೆಗಳಂತಹ ತೇವ, ಕತ್ತಲೆಯಾದ ಸ್ಥಳಗಳಲ್ಲಿ ಕಂಡುಬರುತ್ತವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಚೀನಾದ ದಕ್ಷಿಣ ಪ್ರದೇಶಗಳಲ್ಲಿ ಇವುಗಳು ಕಂಡು ಬರುತ್ತದೆ. ಈ ಬಗ್ಗೆ ವೈದ್ಯರು ಆಕೆ ಹೆತ್ತವರಲ್ಲಿ ಹೇಳಿದಾಗ, ಅವರು ಈ ಸಣ್ಣ ಸಣ್ಣ ಹುಳಗಳನ್ನು ಮನೆಯಲ್ಲಿ ನೋಡಿರುವ ಬಗ್ಗೆ ಹೇಳಿದ್ದಾರೆ. ಆದರೆ ಅವು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಆದರೆ ಈ ಹುಳಗಳು ಹುಡುಗಿಯ ದೇಹಕ್ಕೆ ಹೇಗೆ ಪ್ರವೇಶ ಮಾಡಿದೆ ಎಂದು ನೋಡಿದಾಗ ಯಾಂಗ್ಝೌ ಸಿಡಿಸಿಯ ವಿಭಾಗದ ಮುಖ್ಯಸ್ಥರಾದ ಕ್ಸು ಯುಹುಯಿ, ಕಲುಷಿತ ನೀರಿನ ಮೂಲಕ ಹುಳುಗಳು ಹುಡುಗಿಯ ದೇಹವನ್ನು ಪ್ರವೇಶಿಸಿರಬಹುದು. ಈ ಬಾಲಕಿ ಹಲ್ಲುಜ್ಜಿದಾಗ ಅಥವಾ ಶೌಚಾಲಯವನ್ನು ಫ್ಲಶ್ ಮಾಡಿದಾಗ, ನೀರಿನ ಸಿಂಪಡಣೆಯ ಮೂಲಕ ಹುಳುಗಳು ಅವಳ ದೇಹವನ್ನು ಪ್ರವೇಶಿಸಬಹುದು ಎಂದು ಹೇಳಿದ್ದಾರೆ. ಈ ಲಾರ್ವಾಗಳು ರಕ್ತದ ಮೂಲಕ ರೋಗವನ್ನು ಹರಡುತ್ತವೆ.
ಇದನ್ನೂ ಓದಿ: ಒಂದು ದೇಶದ ಪಾಸ್ಪೋರ್ಟ್ಗೆ ಎಷ್ಟು ಬೆಲೆಯಿದೆ ನೋಡಿ, ಭಾರತದ ಪಾಸ್‌ಪೋರ್ಟ್ ನೋಡಿ ಚಿಕ್ಕ ರೂಮ್ ನೀಡಿದ ವಿಮಾನ ಸಂಸ್ಥೆ
SCMP ವರದಿಯ ಪ್ರಕಾರ, ಬರಿ ಕೈಗಳಿಂದ ಚರಂಡಿ ಹುಳಗಳನ್ನು ಮುಟ್ಟಬಾರದು, ಏಕೆಂದರೆ ಅವು ಹೊಂದಿರುವ ಬ್ಯಾಕ್ಟೀರಿಯಾಗಳು ಕಣ್ಣುಗಳು ಅಥವಾ ಬಾಯಿಯ ಸಂಪರ್ಕದ ಮೂಲಕ ಮನುಷ್ಯರ ದೇಹ ಸೇರಬಹುದು. ಬದಲಾಗಿ, ಉಪ್ಪು ಮತ್ತು ಅಡಿಗೆ ಸೋಡಾ ಬೆರೆಸಿದ ಬಿಸಿ ಬಿಸಿ ನೀರನ್ನು ಪೀಡಿತ ಚರಂಡಿಗಳ ಮೇಲೆ ಸುರಿಯುವ ಮೂಲಕ ಲಾರ್ವಾಗಳನ್ನು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








