AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ‘ಪಂಚ್’ ಕೋತಿಯನ್ನು ಬಳಸಿಕೊಂಡ ಮುಂಬೈ ಪೊಲೀಸರು

ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.

ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ‘ಪಂಚ್’ ಕೋತಿಯನ್ನು ಬಳಸಿಕೊಂಡ ಮುಂಬೈ ಪೊಲೀಸರು
ಕೋತಿ
ನಯನಾ ರಾಜೀವ್
|

Updated on: Feb 27, 2026 | 11:06 AM

Share

ಮುಂಬೈ, ಫೆಬ್ರವರಿ 27: ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.

ಅದು ಹುಟ್ಟುವಾಗ 600 ಗ್ರಾಂ ಇದ್ದ ಕಾರಣ ಅದರ ತಾಯಿ ಅದನ್ನು ಸಾಕಲಾಗದೆ ಬಿಟ್ಟು ಹೋಗಿತ್ತು. ಅದಾದ ಬಳಿಕ ಅದು ಒಬ್ಬಂಟಿಯಾಗಿತ್ತು. ಅದು ಪಟ್ಟ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಇದೇ ಬೆಸ್ಟ್ ಎಂದುಕೊಂಡಿದ್ದಾರೆ.

ಪೊಲೀಸರು ಇತ್ತೀಚಿನ ಇನ್​ಸ್ಟಾಗ್ರಾಂ ಅಭಿಯಾನದಲ್ಲಿ ಕೆಟ್ಟದ್ದನ್ನು, ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎನ್ನುವ ಮೂರು ಮಂಗಗಳ ದೃಶ್ಯಗಳನ್ನು ಹಂಚಿಕೊಂಡಿದ್ದರು. ಈಗ 112 ಸಹಾಯವಾಣಿಗೆ ಪಂಚ್ ಕೋತಿಯನ್ನು ಬಳಸಿಕೊಂಡಿದ್ದಾರೆ. ಅದಕ್ಕೆ ಕೆಟ್ಟದನ್ನು ಮಾಡಬೇಡಿ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ. ಈ ಪೋಸ್ಟ್​ ನಾಗರಿಕರಿಗೆ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕರೆ ನೀಡುತ್ತದೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಪಂಚ್​​ ಇತರೆ ಮಂಗಗಳು ಬೆದರಿಸುವಾಗ ತೊಂದರೆಯನ್ನು ಎದುರಿಸಿತ್ತು. ಆದರೆ ಆರೈಕೆದಾರರು ಇದನ್ನು ಅದರ ನೈಸರ್ಗಿಕ ಸಾಮಾಜಿಕ ಕಲಿಕೆಯ ಭಾಗವೆಂದು ಬಣ್ಣಿಸಿದ್ದಾರೆ. ಪಂಚ್ ಕ್ರಮೇಣ ಹೊಂದಿಕೊಳ್ಳುತ್ತಿದೆ ಮತ್ತು ಸ್ವತಂತ್ರವಾಗುತ್ತಿದೆ ಎಂದು ಹೇಳಿದ್ದಾರೆ.

ಮುಂಬೈ ಪೊಲೀಸರು ತುರ್ತು ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಲು ಜಪಾನ್ ಕೋತಿ ‘ಪಂಚ್’ (Punch)ಅನ್ನು ಬಳಸಿಕೊಂಡಿದ್ದಾರೆ. ಪಂಚ್ ಕೋತಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇದು ಈಗ ವಿಶ್ವದಲ್ಲೇ ಫೇಮಸ್. ಜಪಾನಿನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಕೋತಿ ಅಲ್ಲಿನ ಉಳಿದ ಕೋತಿಗಳಿಂದ ಚಿತ್ರಹಿಂಸೆ ಅನುಭವಿಸಿತ್ತು. ಅದು ಸದಾ ಗೊಂಬೆಯೊಂದರ ಜತೆಯೇ ಇರುತ್ತಿತ್ತು.

ದೆಹಲಿ ಪೊಲೀಸರು ಸಾರ್ವಜನಿಕ ಜಾಗೃತಿ ಮೂಡಿಸಲು ಪಂಚ್‌ನ ಚಿತ್ರವನ್ನು ಬಳಸಿಕೊಂಡಿದ್ದರು. ಪೋಸ್ಟ್​ನಲ್ಲಿ ಸಮವಸ್ತ್ರ ಧರಿಸಿದ ಅಧಿಕಾರಿಯೊಬ್ಬರು ಯುವ ಕೋತಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಬಹುದು.

112 ಸಹಾಯವಾಣಿ ಭಾರತದ ಏಕೈಕ ತುರ್ತು ಪ್ರತಿಕ್ರಿಯೆ ಸಂಖ್ಯೆಯಾಗಿದ್ದು, ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸಲು ರಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ
ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಹೆಚ್​​ಡಿಕೆ
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಹೆಚ್​​ಡಿಕೆ