Video : ಮೊದಲ ಬಾರಿಗೆ ಚೀನಾದ ಮದುವೆಯಲ್ಲಿ ಭಾಗಿಯಾದ ಭಾರತೀಯ ಮಹಿಳೆ, ಎಲ್ಲಾ ಇಲ್ಲಿ ವಿಚಿತ್ರ
ಭಾರತದ ಮಹಿಳೆಯೊಬ್ಬರು ಚೀನಾದ ಮದುವೆಗೆ ಹೋಗಿದ್ದಾರೆ. ಅಲ್ಲಿನ ಮದುವೆಯ ಬಗ್ಗೆ ಕೆಲವೊಂದು ಸಂಗತಿಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಚೀನಾದಲ್ಲಿ ಮದುವೆ ಹೇಗಿರುತ್ತದೆ. ಅಲ್ಲಿ ಆಹಾರಗಳು ಹೇಗೆ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಚೀನಾದ ಮದುವೆಗೆ ಅನೇಕರು ಕಾಮೆಂಟ್ ಮಾಡಿ, ಭಾರತ ಹಾಗೂ ಚೀನಾದ ಮದುವೆಗೂ ಇರುವ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ಈ ಬಗೆಗಿನ ವಿಡಿಯೋ ಇಲ್ಲಿದೆ ನೋಡಿ.

ಭಾರತದ ಮಹಿಳೆಯೊಬ್ಬರು ಚೀನಾದ ಮದುವೆಯಲ್ಲಿ ಮೊದಲ ಬಾರಿ ಭಾಗವಹಿಸಿರುವ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದಲ್ಲಿ ಮದುವೆ ಹೇಗಿರುತ್ತದೆ. ಹಾಗೂ ಅಲ್ಲಿನ ಮದುವೆ ಊಟ ಹೇಗಿರುತ್ತದೆ ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಚೀನಾದ ಸ್ಥಳೀಯ ಮದುವೆಗಳು ಹೇಗೆ ನಡೆಯುತ್ತದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಅನೇಕರಿಗೆ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ. ಭಾರತೀಯ ದಂಪತಿಗಳು ನಡೆಸುತ್ತಿರುವ “ಪಾರ್ಟ್ ಟೈಮ್ ಟ್ರಾವೆಲರ್ ಚೀನಾ” ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ “ನಿಮಗೆ ಚೀನಾದ ಈ ಬದಿಯನ್ನು ತೋರಿಸುವುದಿಲ್ಲ” ಎಂಬ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋದಲ್ಲಿ ಮಹಿಳೆ ಚೀನಾದ ಮದುವೆ ಬಗ್ಗೆ ಹೀಗೆ ಹೇಳಿದ್ದಾರೆ, ನಾನು ಚೀನಾಕ್ಕೆ ಬಂದ ಮೇಲೆ ಮೊದಲ ಚೀನೀ ಮದುವೆಗೆ ಹಾಜರಾದ ಅನುಭವವನ್ನು ನಾನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ, ನನ್ನ ಮಗನ ಜತೆಗೆ ಈ ಮದುವೆಗೆ ಹೋಗಿದ್ದೆ. ಅಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಒಬ್ಬರು ಮದುವೆಗೆ ಬಂದಿದ್ದರು. ಮತ್ತೆ ಯಾರು ಕೂಡ ಪರಿಚಯ ಇರಲಿಲ್ಲ. ಇನ್ನು ಅಲ್ಲಿ ಮದುವೆ ಮಂಟಪ ಹುಡುಕುವುದು ಕೂಡ ಕಷ್ಟವಾಗಿತ್ತು. ಅಷ್ಟು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಮದುವೆ ಸಭಾಂಗಣವನ್ನು ಹೇಗೆಲ್ಲ ಅಲಂಕಾರ ಮಾಡಿದ್ದಾರೆ. ಹೇಗಿದೆ ಅಲ್ಲಿನ ಆಚರಣೆ ಹೇಗೆ ಎಂಬುದನ್ನು ವಿವರಿಸಿದ್ದಾರೆ. ನನ್ನ ಮಗ ಇಲ್ಲಿ ಆಹಾರದ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾನೆ. ಅಷ್ಟೊಂದು ಬೇರೆ ಬೇರೆ ರೀತಿ ಆಹಾರಗಳು ಇಲ್ಲಿತ್ತು.
ಇದನ್ನೂ ಓದಿ: ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ, ಏನಿದು ವಿಶಿಷ್ಟ ಆಚರಣೆ?
ವೈರಲ್ ವಿಡಿಯೋ ಇಲ್ಲಿದೆ ನೋಡಿ :
ಇನ್ನು ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು ಜನ ಕಾಮೆಂಟ್ ಮಾಡಿದ್ದಾರೆ. ಅನೇಕರು ಚೀನೀ ವಿವಾಹವನ್ನು ನೋಡಿ ಆಶ್ಚರ್ಯಚಕಿತರಾದರೆ, ಇನ್ನು ಕೆಲವರು ಚೀನಾದ ಮದುವೆಯ ಬಗ್ಗೆ ಆಸಕ್ತಿಯಿಂದ ಪ್ರಶ್ನೆ ಮಾಡಿದ್ದಾರೆ. ಕೆಲವರು ಆಧುನಿಕ ವಿವಾಹದ ಬದಲು ಸಾಂಪ್ರದಾಯಿಕ ಚೀನೀ ವಿವಾಹದಂತಿರಬೇಕು ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ಹಿಂದಿನ ಕಾಲದಂತೆ ಕುಳಿತುಕೊಂಡು ಊಟ ಮಾಡುವ ವಿಚಾರಗಳು ಮಾಯಾವಾಗಿದೆ. ಈ ವಿಡಿಯೋ ನಮಗೆ ನಿಜವಾದ ಜನಾಂಗೀಯ ವಿವಾಹವನ್ನು ತೋರಿಸಿದೆ. ಹಳ್ಳಿಗಾಡಿನ ಶೈಲಿ, ಸಂಪ್ರದಾಯ ಕಳೆದುಹೋಗುತ್ತಿದೆ. ಇದರ ನಡುವೆ ದುಃಖಕರವಾದ ವಿಷಯವೆಂದರೆ ಆಧುನಿಕ ಜೀವನಶೈಲಿಯಂತೆ, ಮಕ್ಕಳು ‘ಹಳೆಯ’ ಆಚರಣೆಯ ವಿಧಾನವನ್ನು ಅಳವಡಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಇಲ್ಲಿ ನೋಡಿ ಯಾರು ಕೂಡ ಅದ್ಧೂರಿಯಾಗಿ ಡ್ರೆಸ್ ಮಾಡಿಕೊಂಡು ಬಂದಿಲ್ಲ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Thu, 3 July 25








