Video :ಚೀನಾದ ಬೀದಿಯಲ್ಲಿ ಕ್ಷೌರ ಮಾಡಿಸಿಕೊಂಡ ಭಾರತೀಯ, ಅನುಭವ ಹೇಗಿತ್ತು ನೋಡಿ
ಸಾಮಾನ್ಯವಾಗಿ ಬೇರೆ ಬೇರೆ ಊರುಗಳಿಗೆ ಅಥವಾ ದೇಶಗಳಿಗೆ ಹೋದರೆ ಸೆಲ್ಯೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಲು ಹಿಂದೇಟು ಹಾಕುವುದೇ ಹೆಚ್ಚು. ಹೆಚ್ಚುವರಿ ಹಣ ವಸೂಲಿ ಮಾಡುತ್ತಾರೋ ಎನ್ನುವ ಭಯ ಒಂದೆಡೆಯಾದರೆ ಹೇಗೆ ಕೂದಲನ್ನು ಕತ್ತರಿಸುತ್ತಾನೋ, ಶೇಪ್ ಹಾಳಾದರೆ ಎನ್ನುವ ಆತಂಕ ಇದ್ದೆ ಇರುತ್ತದೆ. ಆದರೆ ಭಾರತೀಯ ಯೂಟ್ಯೂಬರ್ ಒಬ್ಬರು ಚೀನಾದ ರಸ್ತೆಬದಿಯಲ್ಲಿ ಕೂದಲನ್ನು ಕತ್ತರಿಸಲು ಮುಂದಾಗಿದ್ದಾರೆ. ಮೊದಲಿಗೆ ಕ್ಷೌರಿಕನನ್ನು ಕಂಡು ಅನುಮಾನ ವ್ಯಕ್ತಪಡಿಸಿದರೂ ಆ ಬಳಿಕ ಆದದ್ದು ನೋಡಿದ್ರೆ ನಿಮಗೂ ಶಾಕ್ ಆಗುತ್ತೆ.

ವಿದೇಶಕ್ಕೆ (foreign) ತೆರಳುವ ಭಾರತೀಯರು ಅಲ್ಲಿ ಏನಾದ್ರೂ ವಿಶೇಷತೆ ಕಂಡರೆ ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗುತ್ತಾರೆ. ಆದರೆ ಇಲ್ಲೊಬ್ಬರು ಭಾರತೀಯ ಯೂಟ್ಯೂಬರ್ ಚೀನಾದ ರಸ್ತೆಯಲ್ಲಿ ಕ್ಷೌರಿಕನನ್ನು ಕಂಡು ಅಚ್ಚರಿಗೊಂಡಿದ್ದು, ಆ ಬಳಿಕ ಕೂದಲನ್ನು ಕತ್ತರಿಸಲು ನಿರ್ಧಾರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (social media) ವಿದೇಶದಲ್ಲಿ ಕೂದಲಿಗೆ ಕತ್ತರಿಸಿಕೊಂಡ ಅನುಭವವನ್ನು ಹಂಚಿಕೊಂಡಿದ್ದು, ಆಮೇಲೆ ಏನಾಯ್ತು ಗೊತ್ತಾ? ಈ ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಕೊಂಡ ಬಳಿಕ ಬಂದ ರಿಸಲ್ಟ್ ನೋಡಿ ಅವರಿಗೆ ಶಾಕ್ ಆಗಿದೆ. ಈ ವಿಡಿಯೋಗೆ ಬಳಕೆದಾರರಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.
Devaang sethi ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಯೂಟ್ಯೂಬರ್ ಚೀನಾಕ್ಕೆ ಹೋದ ವೇಳೆಯಲ್ಲಿ ರಸ್ತೆಬದಿಯಲ್ಲಿ ಕ್ಷೌರಿಕನನ್ನು ಕಾಣುತ್ತಾರೆ. ಕ್ಷೌರಿಕನನ್ನು ಕಂಡ ತಕ್ಷಣ ಕೂದಲನ್ನು ಕತ್ತರಿಸಲು ನಿರ್ಧರಿಸುತ್ತಾರೆ. ಕೊನೆಗೆ ಫೋನ್‌ನಲ್ಲಿರುವ ಎಐನಿಂದ ನನ್ನ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ಎಂದು ಇಂಗ್ಲಿಷ್‌ನಿಂದ ಚೈನೀಸ್‌ಗೆ ಅನುವಾದಿಸಿ, ವ್ಯಕ್ತಿಗೆ ತೋರಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡ ಈ ಕ್ಷೌರಿಕನು ಕೂದಲನ್ನು ಕತ್ತರಿಸಲು ಮುಂದಾಗುತ್ತಾನೆ. ಆದರೆ ಈ ಕ್ಷೌರಿಕನ ಬಳಿ ಯಾವುದೇ ವ್ಯವಸ್ಥೆ ಇರಲಿಲ್ಲ. ಕನ್ನಡಿಯೂ ಇರಲಿಲ್ಲ. ಬೇಕಾದ ಎಲ್ಲಾ ಸಾಧನಗಳನ್ನು ಸಣ್ಣ ಚೀಲದೊಳಗೆ ಇಟ್ಟುಕೊಂಡಿದ್ದು, ಗ್ರಾಹಕರಿಗೆ ಕೂರಲು ಕುರ್ಚಿ ಮಾತ್ರ ಇರುವುದನ್ನು ಇಲ್ಲಿ ಗಮನಿಸಬಹುದು.
ಇದನ್ನೂ ಓದಿ : ಮಹಿಳೆಯರನ್ನು ಮೆಚ್ಚಿಸಲು ಈ ಪುರುಷರು ಮಾಡ್ತಾರೆ ವಿಶೇಷ ನೃತ್ಯ, ಏನಿದು ವಿಶಿಷ್ಟ ಆಚರಣೆ?
ಕೂದಲು ಕತ್ತರಿಸಿಕೊಳ್ಳುತ್ತಿರುವ ಭಾರತೀಯ ವ್ಯಕ್ತಿ ‘100 ರೂಪಾಯಿಗಳಿಗೆ ಚೀನಾದ ಬೀದಿಯಲ್ಲಿ ಕೂದಲು ಕತ್ತರಿಸಿಕೊಳ್ಳುತ್ತಿದ್ದೇನೆ, ಭಾರತದಲ್ಲಿ ಕನಿಷ್ಠ ಒಂದು ಕನ್ನಡಿ ಇದೆ, ಇಲ್ಲಿ ಅದು ಇಲ್ಲ ಎಂದು ಹೇಳುವುದನ್ನು ನೋಡಬಹುದು. ಪ್ರಾರಂಭದಲ್ಲಿ ಭಾರತೀಯನಿಗೆ ಈ ಕ್ಷೌರಿಕನ ಬಗ್ಗೆ ಅನುಮಾನ ಬಂದರೂ ಕೂಡ, ಕೂದಲನ್ನು ಕತ್ತರಿಸಿದ ಬಳಿಕ ತಾನು ಚೆನ್ನಾಗಿ ಕಾಣುತ್ತಿರುವುದನ್ನು ಕಂಡು ಖುಷಿಯಾಗುತ್ತದೆ. ಭಾರತದ ಯುಪಿಐ ಪಾವತಿ ವ್ಯವಸ್ಥೆಯನ್ನು ಹೋಲುವ ಸೇವೆಯನ್ನು ಬಳಸಿಕೊಂಡು ಹಣ ಪಾವತಿಸಿ ಹೋಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋ ಈವರೆಗೆ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ನೀವು ಸುಂದರವಾಗಿ ಕಾಣುತ್ತೀರಿ ಎಂದಿದ್ದಾರೆ. ಮತ್ತೊಬ್ಬರು, ಚೀನಾದ ಕ್ಷೌರಿಕನಿಗೆ ಥ್ಯಾಂಕ್ಸ್ ಹೇಳಿ, ನೀವು ವಯಸ್ಸು ಐದು ವರ್ಷ ಕಡಿಮೆ ಕಾಣುವಂತೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಂತಹ ಅನುಭವಗಳನ್ನು ಜೀವನದಲ್ಲಿ ಪಡೆಯಲೇಬೇಕು ಎಂದಿದ್ದಾರೆ. ಕೆಲವರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುವ ಹಾರ್ಟ್ ಸಿಂಬಲ್ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Thu, 3 July 25








