AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಆಫ್ರಿಕನ್​​ ಅಲ್ಲ, ಭಾರತೀಯ: ಜನಾಂಗೀಯವಾಗಿ ನಿಂದಿಸಿದವರಿಗೆ ಕ್ರೀಡಾ ಸಾಧನೆ ಮೂಲಕ ಉತ್ತರ ನೀಡಿದ ಮಜ್ಗುಲ್

ಜನಾಂಗೀಯ ನಿಂದನೆ ಮತ್ತು ಬಡತನ ಮೆಟ್ಟಿ ನಿಂತ ಜೂಡೋ ಪಟು ರೋಹಿತ್ ಮಜ್ಗುಲ್ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಗುಜರಾತ್‌ನ ಸಿದ್ಧಿ ಸಮುದಾಯದ ರೋಹಿತ್, ತಮ್ಮ ಹೋರಾಟದಿಂದ ಅಸ್ಮಿತೆ ಸ್ಥಾಪಿಸಿ, ಸಮುದಾಯದ ಧ್ವನಿಯಾಗಿದ್ದಾರೆ. ತಂದೆಯ ಸಾಂಪ್ರದಾಯಿಕ ನೃತ್ಯದ ಆದಾಯದ ನಡುವೆಯೂ, ಕ್ರೀಡೆಯ ಮೂಲಕ ರೋಹಿತ್ ಸವಾಲುಗಳನ್ನು ಮೀರಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.

ನಾನು ಆಫ್ರಿಕನ್​​ ಅಲ್ಲ, ಭಾರತೀಯ: ಜನಾಂಗೀಯವಾಗಿ ನಿಂದಿಸಿದವರಿಗೆ ಕ್ರೀಡಾ ಸಾಧನೆ ಮೂಲಕ ಉತ್ತರ ನೀಡಿದ ಮಜ್ಗುಲ್
ರೋಹಿತ್ ಮಜ್ಗುಲ್
ಅಕ್ಷಯ್​ ಪಲ್ಲಮಜಲು​​
|

Updated on:Feb 27, 2026 | 10:24 AM

Share

ಅಹಮದಾಬಾದ್: “ನನ್ನ ಗುಂಗುರು ಕೂದಲು ಮತ್ತು ರೂಪ ನೋಡಿ ಜನ ನನ್ನನ್ನು ಆಫ್ರಿಕನ್ ಎಂದು ಕರೆಯುತ್ತಾರೆ, ಜನಾಂಗೀಯವಾಗಿ ನಿಂದಿಸುತ್ತಾರೆ. ಆದರೆ ಒಂದು ದಿನ ಬರಲಿದೆ, ಅಂದು ಇದೇ ಜನ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಸಾಲು ನಿಲ್ಲುತ್ತಾರೆ” – ಇದು 21 ವರ್ಷದ ಜೂಡೋ ಪಟು ರೋಹಿತ್ ಮಜ್ಗುಲ್ (Rohit Majgul) ಏಳು ವರ್ಷಗಳ ಹಿಂದೆ ತನಗೇ ತಾನು ಮಾಡಿಕೊಂಡಿದ್ದ ಶಪಥ. ಇಂದು ಆ ಮಾತು ನಿಜವಾಗಿದೆ. ರೋಹಿತ್ ಮಜ್ಗುಲ್ ಗುಜರಾತ್‌ನ ಜಂಬೂರ್ ಎಂಬ ಪುಟ್ಟ ಹಳ್ಳಿಯವರು. ಈ ಗ್ರಾಮವನ್ನು ‘ಮಿನಿ ಆಫ್ರಿಕಾ’ ಎಂದು ಕರೆಯಲಾಗುತ್ತದೆ. 2019ರಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯ ವೇಳೆ ರೋಹಿತ್ ಅವರನ್ನು ನೋಡಿ ಕೆಲವರು ‘ಆಫ್ರಿಕನ್’ ಎಂದು ಗೇಲಿ ಮಾಡಿದ್ದರು. ಇದರಿಂದ ಮನನೊಂದಿದ್ದ ರೋಹಿತ್, ಕ್ರೀಡೆಯ ಮೂಲಕವೇ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಲು ನಿರ್ಧರಿಸಿದರು.

ಕಳೆದ ವಾರ ನವದೆಹಲಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಹರಿಯಾಣದ ಗರ್ವಿತ್ ಹೂಡಾ ಅವರನ್ನು ಸೋಲಿಸುವ ಮೂಲಕ -66 ಕೆಜಿ ವಿಭಾಗದಲ್ಲಿ ರೋಹಿತ್ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ರೋಹಿತ್ ತಂದೆ ಬಶೀರ್ ಅವರು ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿ ಕುಟುಂಬವನ್ನು ಸಾಕುತ್ತಿದ್ದರು. ಮನೆಯಲ್ಲಿ ಸರಿಯಾದ ಕುಡಿಯುವ ನೀರು ಅಥವಾ ಮಲಗಲು ಮಂಚವೂ ಇಲ್ಲದ ಕಡು ಬಡತನದಲ್ಲಿ ರೋಹಿತ್ ಬೆಳೆದಿದ್ದಾರೆ.

ಇದನ್ನೂ ಓದಿ: ‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ

ಸಿದ್ಧಿ ಸಮುದಾಯದವರು ಸುಮಾರು 300 ವರ್ಷಗಳ ಹಿಂದೆ ಆಫ್ರಿಕಾದಿಂದ ಭಾರತಕ್ಕೆ ಬಂದು ನೆಲೆಸಿದವರು. ಈ ಸಮುದಾಯದ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಹಮ್ಮಿಕೊಂಡಿದ್ದ ಯೋಜನೆಗೆ ಈಗ ರೋಹಿತ್ ರೂಪದಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಸದ್ಯ ರೋಹಿತ್ ಮಜ್ಗುಲ್ ಜಾರ್ಜಿಯಾದ ತಿಬಿಲಿಸಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. “ನಾನು ಕೇವಲ ಪದಕಕ್ಕಾಗಿ ಹೋರಾಡುತ್ತಿಲ್ಲ, ನನ್ನ ಸಮುದಾಯ ಮತ್ತು ಜನರ ಬಗ್ಗೆ ಜಾಗೃತಿ ಮೂಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತೇನೆ” ಎನ್ನುತ್ತಾರೆ ಈ ಯುವ ಸಾಧಕ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Fri, 27 February 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!