AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ಸಾವಿನ ದುಃಖ ಮಾಸುವ ಮುನ್ನವೇ ಮತ್ತೆ ಹಸೆಮಣೆಯೇರಿದ ಪತ್ನಿ; ಪತಿಯ ಸಾವಿಗೆ ಪತ್ನಿಯೇ ಕಾರಣಾನಾ?

ತುಮಕೂರಿನಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿದ್ದು, ಸಹೋದರಿಯ ದೂರಿನ ಹಿನ್ನೆಲೆಯಲ್ಲಿ 23 ದಿನಗಳ ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಮೇಲಿದ್ದ ಗಾಯದ ಗುರುತುಗಳು ಮತ್ತು ಪತ್ನಿಯ ಮರು ಮದುವೆ ಈ ಸಾವಿನ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ. ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಪತಿಯ ಸಾವಿನ ದುಃಖ ಮಾಸುವ ಮುನ್ನವೇ ಮತ್ತೆ ಹಸೆಮಣೆಯೇರಿದ ಪತ್ನಿ; ಪತಿಯ ಸಾವಿಗೆ ಪತ್ನಿಯೇ ಕಾರಣಾನಾ?
ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೆ ಮದುವೆಯಾದ ಪತ್ನಿ; 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!
ಜಗದೀಶ ಬಿ.
| Edited By: |

Updated on:Feb 27, 2026 | 12:09 PM

Share

ತುಮಕೂರು, ಫೆಬ್ರವರಿ 27: ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಮೃತನ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತನ ಸಹೋದರಿಯಿಂದ ಪೊಲೀಸ್ ಠಾಣೆಗೆ ದೂರು!

ದಾಸರಹಳ್ಳಿ ನಿವಾಸಿ ಪರಮೇಶ್ (50) ಜನವರಿ 31ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ದಿನ ಅಂತ್ಯಕ್ರಿಯೆ ನಡೆಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ ಪರಮೇಶ್ ಮೃತಪಟ್ಟ ಕೆಲವೇ ದಿನಗಳಲ್ಲಿ, ಅಂದರೆ ಫೆಬ್ರುವರಿ 19ರಂದು ಅವರ ಪತ್ನಿ ಮತ್ತೊಂದು ಮದುವೆಯಾಗಿರುವುದು ಸಂಬಂಧಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮೃತನ ಸಹೋದರಿ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಸಹೋದರನ ಸಾವು ಸಹಜವಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪರಮೇಶ್ ಮೃತಪಟ್ಟ ಸಂದರ್ಭದಲ್ಲಿ ಅವರ ಮೂಗಿನ ಪಕ್ಕದಲ್ಲಿ ಗಾಯದ ಗುರುತು ಇದ್ದದ್ದು ಹಾಗೂ ಗುಪ್ತಾಂಗ ಊದಿಕೊಂಡಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಅವರು ಅಣ್ಣನ ಸಾವು ಸಹಜವಲ್ಲವೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅಂಶಗಳು ಸಾವಿನ ಕುರಿತು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಮಕ್ಕಳ ಆರೋಗ್ಯ ಸಮಸ್ಯೆ ಹಿನ್ನೆಲೆ ಮತ್ತೊಮ್ಮೆ ಮದುವೆ

ಈ ಹಿಂದೆಯೂ ಗಂಡನನ್ನು ಕಳೆದುಕೊಂಡಿದ್ದ ಮಹಿಳೆ, ನಂತರ ಪರಮೇಶ್ವರನನ್ನು ಮದುವೆ ಆಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದು, ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಒಬ್ಬಳೇ ನೋಡಿಕೊಳ್ಳಲು ಕಷ್ಟ ಎಂದು ಮತ್ತೆ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಒಂದು ವಾರದ ಬಳಿಕ ಬಯಲಾಗುತ್ತೆ ರಹಸ್ಯ

ದೂರು ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಹಸೀಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ವರದಿ ಆಧಾರವಾಗಿ ಪರಮೇಶ್ ಅವರ ಸಾವಿನ ನಿಜವಾದ ಕಾರಣ ಬಹಿರಂಗವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:17 am, Fri, 27 February 26

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ