AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಗ ಮಧ್ಯೆಯೇ ಕೆಟ್ಟುನಿಂತ ಸ್ಲೀಪರ್​​ ಬಸ್​​: ಪರಿಹಾರವಾಗಿ ವಿದ್ಯಾರ್ಥಿನಿಗೆ 33,700 ರೂ. ನೀಡುವಂತೆ ಡಿಸಿಡಿಆರ್​​ಸಿ ಆದೇಶ

ಮಾರ್ಗಮಧ್ಯೆ ಸ್ಲೀಪರ್ ಬಸ್ ಕೆಟ್ಟುನಿಂತು ಪ್ರಯಾಣಿಕರಿಗೆ ತೊಂದರೆ ಆದರೂ ಪರ್ಯಾಯ ವ್ಯವಸ್ಥೆ ಮಾಡದ ಕೆಕೆಆರ್‌ಟಿಸಿ ವಿರುದ್ಧ ವಿದ್ಯಾರ್ಥಿನಿ ನೀಡಿದ್ದ ದೂರಿನ ಅನ್ವಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ಮಾಡಿದೆ. ಸಂಕಷ್ಟಕ್ಕೀಡಾದ ವಿದ್ಯಾರ್ಥಿನಿಗೆ ಬಾಡಿಗೆ ಕಾರಿನ ವೆಚ್ಚವನ್ನು ಶೇ.6ರ ಬಡ್ಡಿದರದೊಂದಿಗೆ ನೀಡುವಂತೆ ಆದೇಶಿಸಿದೆ. ಮಾನಸಿಕ ವೇದನೆ ಹಾಗೂ ಸೇವಾ ಕೊರತೆಯ ಪರಿಹಾರ ಸೇರಿ ವ್ಯಾಜ್ಯ ವೆಚ್ಚವನ್ನೂ ನೀಡುವಂತೆ ಸೂಚಿಸಿದೆ.

ಮಾರ್ಗ ಮಧ್ಯೆಯೇ ಕೆಟ್ಟುನಿಂತ ಸ್ಲೀಪರ್​​ ಬಸ್​​: ಪರಿಹಾರವಾಗಿ ವಿದ್ಯಾರ್ಥಿನಿಗೆ 33,700 ರೂ. ನೀಡುವಂತೆ ಡಿಸಿಡಿಆರ್​​ಸಿ ಆದೇಶ
ಸಾಂದರ್ಭಿಕ ಚಿತ್ರImage Credit source: the lightning asteroid instagram page
ಪ್ರಸನ್ನ ಹೆಗಡೆ
|

Updated on: Oct 02, 2026 | 3:57 PM

Share

ಕಲಬುರಗಿ, ಅಕ್ಟೋಬರ್​​ 02: ಸ್ಲೀಪರ್ ಬಸ್ ಮಾರ್ಗಮಧ್ಯೆ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾದ ಸೇವಾ ಕೊರತೆಗಾಗಿ 33,700 ರೂ.  ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (District Consumer Disputes Redressal Commission) ಕೆಕೆಆರ್‌ಟಿಸಿಗೆ ಆದೇಶಿಸಿದೆ. ಬಸ್​​ ಕೆಟ್ಟು ನಿಂತರೂ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆ ಉಂಟಾದ ತೊಂದರೆ ಬಗ್ಗೆ ಉಲ್ಲೇಖಿಸಿ ವಿದ್ಯಾರ್ಥಿನಿಯೋರ್ವರು ದೂರು ನೀಡಿದ್ದರು. ಇದರ ಅನ್ವಯ ಆಯೋಗವೀಗ ಮಹತ್ವದ ಆದೇಶ ಮಾಡಿದೆ.

ಪರ್ಯಾಯ ವ್ಯವಸ್ಥೆಯನ್ನೂ ಮಾಡಿರದ ಅಧಿಕಾರಿಗಳು

ಬೀದರ್‌ನ ವಿದ್ಯಾರ್ಥಿನಿ ತೇಜಸ್ವಿನಿ ಬಸವರಾಜ ಅವರು 2025ರ ನವೆಂಬರ್ 16ರಂದು ಬೀದರ್‌ನಿಂದ ದಾವಣಗೆರೆಗೆ ಪ್ರಯಾಣಿಸಲು ಕೆಕೆಆರ್‌ಟಿಸಿಯ ಸ್ಲೀಪರ್ ಬಸ್‌ನಲ್ಲಿ ಸೀಟ್ ಕಾಯ್ದಿರಿಸಿದ್ದರು. ಈ ಬಸ್ ಸಂಜೆ 6 ಗಂಟೆಗೆ ಬೀದರ್‌ನಿಂದ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ದಾವಣಗೆರೆ ತಲುಪಬೇಕಿತ್ತು. ನಿಗದಿತ ಸಮಯಕ್ಕೆ ಬಸ್ ಬೀದರ್‌ನಿಂದ ಹೊರಟರೂ, ಹುಮನಾಬಾದ್ ಸಮೀಪದಲ್ಲಿ ಕೆಟ್ಟು ನಿಂತಿತು. ಬಳಿಕ ಬಸ್ ಅನ್ನು ಕಲಬುರಗಿ ಡಿಪೋಗೆ ಕೊಂಡೊಯ್ಯಲಾಯಿತು. ಆದರೆ, ದುರಸ್ತಿ ಮಾಡುವ ಪ್ರಯತ್ನಗಳು ವಿಫಲವಾದವು. ಮರುದಿನ ಬೆಳಗ್ಗೆ ಪರೀಕ್ಷೆ ಇರುವುದಾಗಿ ತಿಳಿಸಿದ ತೇಜಸ್ವಿನಿ, ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೋರಿದ್ದರು. ಆದರೆ, ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ತೇಜಸ್ವಿನಿ ಕಲಬುರಗಿಯಿಂದ ದಾವಣಗೆರೆಗೆ ತೆರಳಲು 18,700 ರೂ. ಪಾವತಿಸಿ ಕಾರನ್ನು ಬಾಡಿಗೆಗೆ ಪಡೆಯಬೇಕಾಯಿತು.

LIVE TV

ಇದನ್ನೂ ಓದಿ: ಜಿಐ-ಟ್ಯಾಗ್ ಹೊಂದಿರುವ ಕಲಬುರಗಿ ತೊಗರಿ ಬೇಳೆಗೆ ಮತ್ತೊಂದು ಗರಿ: ಶೇ.30ರಷ್ಟು ಹೆಚ್ಚಿನ ಬೆಲೆಗೆ ಮಾಲ್ಡೀವ್ಸ್‌​ಗೆ ರಫ್ತು

ಹೀಗಾಗಿ ತೇಜಸ್ವಿನಿ ಅವರು ಗ್ರಾಹಕರ ಆಯೋಗವನ್ನು ಸಂಪರ್ಕಿಸಿ, ಕ್ಯಾಬ್‌ಗಾಗಿ ಖರ್ಚು ಮಾಡಿದ ಹಣ ಹಾಗೂ ಬಸ್ ಟಿಕೆಟ್ ದರವನ್ನು ಮರುಪಾವತಿಸುವಂತೆ ಮತ್ತು ತಮಗಾದ ಮಾನಸಿಕ ವೇದನೆಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷೆ ಮಾಲತಿ ಗುರಣ್ಣ ಮತ್ತು ಸದಸ್ಯ ಎಂ. ಲೋಕೇಶ್ ಅವರನ್ನೊಳಗೊಂಡ ಪೀಠವು, 18,700 ಮೊತ್ತವನ್ನು 2026ರ ಜನವರಿ 3ರಿಂದ ಪಾವತಿ ಮಾಡುವ ದಿನಾಂಕದವರೆಗೆ ಶೇ.6ರ ಬಡ್ಡಿಯೊಂದಿಗೆ ತೇಜಸ್ವಿನಿಗೆ ಮರುಪಾವತಿಸುವಂತೆ ಕೆಕೆಆರ್‌ಟಿಸಿಗೆ ಆದೇಶಿಸಿದೆ. ಇದರ ಜೊತೆಗೆ, ಮಾನಸಿಕ ವೇದನೆ ಹಾಗೂ ಸೇವಾ ಕೊರತೆಯ ಪರಿಹಾರವಾಗಿ 10,000 ರೂ. ಮತ್ತು ವ್ಯಾಜ್ಯ ವೆಚ್ಚವಾಗಿ 5,000 ರೂ. ಪಾವತಿಸುವಂತೆ ಕೆಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಂಗಳೂರು ಸಾರಿಗೆ ಸಂಸ್ಥೆಯ ಸೇವಾ ವ್ಯವಸ್ಥಾಪಕರಿಗೆ ಆಯೋಗ ನಿರ್ದೇಶಿಸಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More