AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಿ ಎನರ್ಜೀಸ್ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಜಿಯೋ ಐಪಿಒ; ಹೂಡಿಕೆದಾರರಲ್ಲಿ ಭಾರಿ ಪೈಪೋಟಿ!

ಹಿಂದೆಂದೂ ಎಂದಿಗೂ ಕಾಣದಂತಹ ಆಸಕ್ತಿ, ಬೃಹತ್ ಗಾತ್ರದ ಬಂಡವಾಳ ಮತ್ತು ಹೂಡಿಕೆದಾರರ ಮುಗಿಬೀಳುವಿಕೆಯಿಂದಾಗಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಭಾರತೀಯ ಷೇರು ಮಾರ್ಕೆಟ್ ಇತಿಹಾಸದ ಎಲ್ಲಾ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿದೆ. ದೇಶದ ಅತಿ ದೊಡ್ಡ ಐಪಿಒ ಎನಿಸಿಕೊಂಡಿರುವ 30,213 ಕೋಟಿ ರೂ. ಮೌಲ್ಯದ ಈ ಕೊಡುಗೆಗೆ ಆಂಕರ್ ಹೂಡಿಕೆದಾರರ ಮೊತ್ತವನ್ನೂ ಸೇರಿಸಿ ಸುಮಾರು 7.40 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಭಾರಿ ಬಿಡ್‌ಗಳು ಹರಿದುಬಂದಿವೆ. 1.38 ಕೋಟಿಕ್ಕೂ ಹೆಚ್ಚು ಅರ್ಜಿಗಳು ಹಾಗೂ ಒಟ್ಟು 22 ಪಟ್ಟು ಚಂದಾದಾರಿಕೆಯೊಂದಿಗೆ ಇದು ದೇಶದ ಬಂಡವಾಳ ಮಾರುಕಟ್ಟೆಯ ದೊಡ್ಡ ಮೈಲಿಗಲ್ಲಾಗಿದೆ.

ವಾರಿ ಎನರ್ಜೀಸ್ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಜಿಯೋ ಐಪಿಒ; ಹೂಡಿಕೆದಾರರಲ್ಲಿ ಭಾರಿ ಪೈಪೋಟಿ!
ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ ಮತ್ತು ಸಿಇಒ ಪಂಕಜ್ ಪವಾರ್Image Credit source: PTI
ಸುಷ್ಮಾ ಚಕ್ರೆ
|

Updated on: Oct 23, 2026 | 11:03 PM

Share

ನವದೆಹಲಿ, ಅಕ್ಟೋಬರ್ 23: ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಐಪಿಒ ಎಂದೇ ಕರೆಯಲ್ಪಟ್ಟಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಚಂದಾದಾರಿಕೆಯಲ್ಲಿ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಹಿಂದೆ ‘ವಾರಿ ಎನರ್ಜೀಸ್’ ಹೆಸರಿನಲ್ಲಿದ್ದ ದಾಖಲೆಯನ್ನು ಧೂಳಿಪಟ ಮಾಡಿರುವ ಜಿಯೋ ಐಪಿಒ, ಹೂಡಿಕೆದಾರರಲ್ಲಿ ಭಾರಿ ಸಂಚಲನ ಮೂಡಿಸಿದೆ. 3 ದಿನಗಳ ಬಿಡ್ಡಿಂಗ್ ಅವಧಿಯಲ್ಲಿ ಹೂಡಿಕೆದಾರರು ಮುಗಿಬಿದ್ದು ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕ ಕೊಡುಗೆಯ ಅಂತಿಮ ದಿನದ ವೇಳೆಗೆ ಜಿಯೋ ಐಪಿಒ ಬರೋಬ್ಬರಿ 22.19 ಪಟ್ಟು ಭರ್ತಿಯಾಗಿದೆ. ದೇಶದ ಅತಿ ದೊಡ್ಡ ಐಪಿಒ ಎಂದು ಬಣ್ಣಿಸಲಾದ ಈ ಐಪಿಒದಲ್ಲಿ ಆಂಕರ್ ಹೂಡಿಕೆದಾರರನ್ನು ಹೊರತುಪಡಿಸಿ ಸಾರ್ವಜನಿಕ ಬಿಡ್ಡಿಂಗ್ ಒಂದರಲ್ಲೇ ಸುಮಾರು 4.90 ಲಕ್ಷ ಕೋಟಿ ರೂ. ಮೌಲ್ಯದ ಬಿಡ್‌ಗಳು ಸಲ್ಲಿಕೆಯಾಗಿವೆ.

ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯೂಐಬಿ) ವಿಭಾಗದಲ್ಲಿ ಕಾಯ್ದಿರಿಸಿದ ಷೇರುಗಳಿಗಿಂತ 70.55 ಪಟ್ಟು ಹೆಚ್ಚು ಬಿಡ್‌ಗಳು ಸಲ್ಲಿಕೆಯಾಗಿದ್ದು, ಹೂಡಿಕೆದಾರರಲ್ಲಿ ಜಿಯೋ ಕಂಪನಿಯ ಮೇಲಿರುವ ನಂಬಿಕೆಯನ್ನು ಇದು ಸಾಬೀತುಪಡಿಸಿದೆ. ಹೂಡಿಕೆದಾರರು ಈಗ ಷೇರು ಹಂಚಿಕೆಗಾಗಿ ಕಾಯುತ್ತಿದ್ದು, ಅಕ್ಟೋಬರ್ 26ರಂದು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕಂಪನಿಯು ಅಕ್ಟೋಬರ್ 28ರಂದು ಷೇರು ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿಯಾಗಲಿದೆ.

ಇದನ್ನೂ ಓದಿ: ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು

3 ದಿನಗಳ ಕಾಲ ನಡೆದ ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 1.38 ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಜಾಗತಿಕವಾಗಿ ಜಗತ್ತಿನ ಯಾವುದೇ ಐಪಿಒ ಒಂದರಲ್ಲಿ 1 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಸಾವಿರಾರು ಕೋಟಿಗಳ ದಾಖಲೆ ನಿರ್ಮಿಸಿದ ಜಿಯೋ:

  • ಜಿಯೋ ಅಂದಾಜು 30,188 ಕೋಟಿ ರೂ.ಗಳ ಮೂಲ ಗಾತ್ರದೊಂದಿಗೆ ಭಾರತದ ಸಾರ್ವಕಾಲಿಕ ಅತಿ ದೊಡ್ಡ ಐಪಿಒ ಎನಿಸಿಕೊಂಡಿದೆ.
  • ಆಂಕರ್ ಹೂಡಿಕೆ ಹಾಗೂ ಸಾರ್ವಜನಿಕ ಬಿಡ್ಡಿಂಗ್ ಸೇರಿ ಒಟ್ಟು 7.4 ಲಕ್ಷ ಕೋಟಿ ರೂ. (78 ಬಿಲಿಯನ್ ಡಾಲರ್) ಸಾರ್ವಕಾಲಿಕ ದಾಖಲೆಯ ಬೇಡಿಕೆ ಪಡೆದಿದೆ.
  • ಜಿಯೋ ಐಪಿಒ ಆರಂಭದಿಂದಲೇ ವೇಗವನ್ನು ಪಡೆದುಕೊಂಡಿತು. ಅಕ್ಟೋಬರ್ 21 ರಂದು ಬಿಡ್ಡಿಂಗ್ ಪ್ರಾರಂಭವಾದ ಕೇವಲ 100 ನಿಮಿಷಗಳಲ್ಲಿ, ಐಪಿಒ 100% ಚಂದಾದಾರಿಕೆಯನ್ನು ಪಡೆದುಕೊಂಡಿತು.
  • ಕೇವಲ 10 ನಿಮಿಷಗಳಲ್ಲಿ 5,500 ಕೋಟಿ ರೂ. ಮೌಲ್ಯದ ಕ್ಯೂಐಬಿ ಭಾಗ ಸಂಪೂರ್ಣ ಭರ್ತಿಯಾಯಿತು.
  • ಭಾರತದ ಟಾಪ್ 5 ಐಪಿಒಗಳ ಪೈಕಿ ಎಲ್ಲಾ ಹೂಡಿಕೆದಾರರ ವಿಭಾಗಗಳಲ್ಲೂ ಕನಿಷ್ಠ 2 ಪಟ್ಟು ಅಧಿಕ ಚಂದಾದಾರಿಕೆ ಪಡೆದ ಏಕೈಕ ಐಪಿಒ ಇದು.
  • ರಿಲಯನ್ಸ್ ಸಮೂಹದ ಮೇಲಿನ ವಿಶ್ವಾಸದಿಂದಾಗಿ ಸುಮಾರು 1.4 ಕೋಟಿಗೂ ಅಧಿಕ ಮಂದಿ ಈ ಐಪಿಒಗೆ ಅರ್ಜಿ ಸಲ್ಲಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತಗಳ ನಡುವೆಯೂ, ಎಫ್‌ಐಐಗಳ ನಿರಂತರ ಮಾರಾಟದ ಮಧ್ಯೆ ಜಿಯೋ ಐಪಿಒ ವಿದೇಶಿ ಹೂಡಿಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡಾಲರ್‌ಗಳು ರೂಪಾಯಿಗೆ ಪರಿವರ್ತನೆಯಾಗಿದ್ದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ಭಾರತೀಯ ರೂಪಾಯಿಗೆ ದೊಡ್ಡ ಬಲ ಸಿಕ್ಕಂತಾಗಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಸ್ಥಾಪಕರ ನೇತೃತ್ವದಲ್ಲೇ 100 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಇಕ್ವಿಟಿ ಮೌಲ್ಯಮಾಪನ ಪಡೆದ ವಿಶ್ವದ ಕೆಲವೇ ಕೆಲವು (ಮೆಟಾ, ಅಲಿಬಾಬಾ, ಸ್ಪೇಸ್‌ಎಕ್ಸ್ ಸಾಲಿನಲ್ಲಿ) ಕಂಪನಿಗಳ ಸಾಲಿಗೆ ಸೇರಿದೆ.

ಇದನ್ನೂ ಓದಿ: ಜಿಯೋ ಐಪಿಒ; ಆಂಕರ್ ಇನ್ವೆಸ್ಟರ್ಸ್ ನಂತರ ಸಾಂಸ್ಥಿಕ ಹೂಡಿಕೆದಾರರಿಂದಲೂ ಭರ್ಜರಿ ಸ್ಪಂದನೆ

ಲಿಸ್ಟಿಂಗ್ ನಂತರ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರತದ ಅಗ್ರ ಮೂರು ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದು, ಇದರೊಂದಿಗೆ ‘ರಿಲಯನ್ಸ್ ಸಮೂಹ’ವು ದೇಶದ ಅತಿ ದೊಡ್ಡ ಮಾರುಕಟ್ಟೆ ಮೌಲ್ಯ ಹೊಂದಿರುವ ಕಾರ್ಪೊರೇಟ್ ಗುಂಪಾಗಿ ಹೊರಹೊಮ್ಮಲಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಅರ್ಜಿಗಳು ಬಂದ ಐಪಿಒ:

ಜಿಯೋ ಐಪಿಒ ಅರ್ಜಿಗಳ ಸಂಖ್ಯೆಯಲ್ಲಿ ಇತಿಹಾಸ ನಿರ್ಮಿಸಿದೆ. ಜಾಗತಿಕವಾಗಿ ಯಾವುದೇ ಐಪಿಒ ಇತಿಹಾಸದಲ್ಲಿ ಒಂದು ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಇದೇ ಮೊದಲು. ಹಿಂದಿನ ಎಲ್ಲಾ ಜಾಗತಿಕ ದಾಖಲೆಗಳನ್ನು ಮುರಿದು ಸುಮಾರು 42% ಅಧಿಕ ಅರ್ಜಿಗಳನ್ನು ಪಡೆದಿದೆ.

ಈ ಐತಿಹಾಸಿಕ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ಹಂತವಾಗಿ ಅಕ್ಟೋಬರ್ 26ರಂದು ಷೇರು ಹಂಚಿಕೆ ಅಂತಿಮಗೊಳ್ಳಲಿದ್ದು, ಅಕ್ಟೋಬರ್ 28ರಂದು ಷೇರು ಮಾರುಕಟ್ಟೆಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಅಧಿಕೃತವಾಗಿ ವಹಿವಾಟು ಆರಂಭಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ