AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮ್ಯಾನೇಜರ್‌ನ ಕಣ್ಣುಕುಕ್ಕಿದ ಉದ್ಯೋಗಿಯ ಸ್ಯಾಲರಿ, ರಾಜೀನಾಮೆ ನೀಡುವಂತೆ ಒತ್ತಾಯ

ಉದ್ಯೋಗಿಗಳು ತಮ್ಮ ಅನುಭವ ಹೆಚ್ಚಾದಂತೆ ಸಂಬಳ ಹೆಚ್ಚಳದ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಸ್ಯಾಲರಿ ಹೆಚ್ಚಾದ್ರೆ ಖುಷಿಯಾಗುತ್ತದೆ. ಆದರೆ ಬೆಂಗಳೂರಿಗೆ ಉದ್ಯೋಗಿಗೆ ಉತ್ತಮ ಸಂಬಳವಿರುವುದರಿಂದ ಮ್ಯಾನೇಜರ್ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರಂತೆ. ಹೊಸ ಮ್ಯಾನೇಜರ್ ವರ್ತನೆಯಿಂದ ಬೇಸರಗೊಂಡ ಉದ್ಯೋಗಿ ಮುಂದೆ ಏನು ಮಾಡುವುದೆಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಮ್ಯಾನೇಜರ್‌ನ ಕಣ್ಣುಕುಕ್ಕಿದ ಉದ್ಯೋಗಿಯ ಸ್ಯಾಲರಿ, ರಾಜೀನಾಮೆ ನೀಡುವಂತೆ ಒತ್ತಾಯ
ಸಾಂದರ್ಭಿಕ ಚಿತ್ರImage Credit source: alamy.com
ಸಾಯಿನಂದಾ
|

Updated on:Oct 23, 2026 | 9:48 PM

Share

ಬೆಂಗಳೂರು, ಅಕ್ಟೋಬರ್ 23: ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಸ್ಯಾಲರಿ ಹೈಕ್ ಆದ್ರೆ ಯಾರಿಗಾದ್ರು ಖುಷಿಯಾಗುತ್ತದೆ. ಆದ್ರೆ ಉದ್ಯೋಗಿಗೆ ಸ್ಯಾಲರಿ ಹೆಚ್ಚಾದಂತೆ ತಲೆ ನೋವು ಶುರುವಾಗಿದೆ, ಇದಕ್ಕೆ ಕಾರಣ ಮ್ಯಾನೇಜರ್ ವರ್ತನೆ. ಈಗಾಗಲೇ ಉತ್ತಮ ಸಂಬಳ ಪಡೆಯುತ್ತಿರುವ ಬೆಂಗಳೂರಿನ ಉದ್ಯೋಗಿಗೆ (Bengaluru employee)  ಹೊಸ ಮ್ಯಾನೇಜರ್ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಮ್ಯಾನೇಜರ್ ಒತ್ತಡಕ್ಕೆ ಬೇಸತ್ತ ಉದ್ಯೋಗಿ ಪೋಸ್ಟ್ ಹಂಚಿಕೊಂಡು ತನ್ನ ಅಳಲು ತೋಡಿಕೊಂಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.

ಒಳ್ಳೆಯ ಸ್ಯಾಲರಿ ಇರೋದೇ ಉದ್ಯೋಗಿಗೆ ತಲೆ ನೋವಾಯ್ತು

ಇಂಡಿಯನ್ ವರರ್ಕ್ ಪ್ಲೇಸ್ (IndianWorkplace) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಉದ್ಯೋಗಿ, ನನ್ನ ಸಂಬಳ ಹೆಚ್ಚಿದೆ ಎಂಬ ಒಂದೇ ಒಂದು ಕಾರಣಕ್ಕೆ ಮ್ಯಾನೇಜರ್‌ ರಾಜೀನಾಮೆ ನೀಡಲು ಹೇಳುತ್ತಿದ್ದಾರೆ. ನಾನು ಏನು ಮಾಡುವುದು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Manager is asking me to resign cause my salary is “too high” what should I do? by u/appadappajappa in IndianWorkplace

ಹೊಸ ಮ್ಯಾನೇಜರ್ ಬಂದ್ಮೇಲೆ ಹೆಚ್ಚಿದ ಒತ್ತಡ

ಎರಡು ತಿಂಗಳ ಹಿಂದೆಯಷ್ಟೇ ನನ್ನ ಮ್ಯಾನೇಜರ್‌ ಬದಲಾಗಿದ್ದು, ಆದರೆ ಹೊಸ ಮ್ಯಾನೇಜರ್ ಬಂದ ಮೇಲೆ ಈ ರೀತಿ ಸಮಸ್ಯೆ ಶುರುವಾಗಿದೆ. ಕೆಲಸದ ಒತ್ತಡವು ಅಧಿಕವಾಗಿದೆ. ಅಪ್ರೈಸಲ್‌ ಬರುವ ಮೊದಲೇ ನನಗೆ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಈಗಾಗಲೇ ನನ್ನ ಸಂಬಳ ಚೆನ್ನಾಗಿದೆ. ಆದರೆ ಸಂಬಳ ಹೆಚ್ಚಾದರೆ ಬಜೆಟ್‌ನಲ್ಲಿ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಈ ರೀತಿ ವರ್ತನೆಗೆ ಮೂಲ ಕಾರಣವಾಗಿದೆ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ನಾನಾಗಿಯೇ ರಾಜೀನಾಮೆ ಕೊಡೋ ನಿರ್ಧಾರ ಮಾಡಲ್ಲ

ನಾನು ಮ್ಯಾನೇಜರ್‌ ಒತ್ತಡಕ್ಕೆ ಮಣಿದು, ಈ ಪರಿಸ್ಥಿತಿಗೆ ಕಟ್ಟು ಬಿದ್ದು ಜಾಬ್‌ ರಿಸೈನ್‌ ಮಾಡುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ರಾಜೀನಾಮೆ ನೀಡಿದ್ರೂ ಎರಡು ತಿಂಗಳ ನೋಟಿಸ್‌ ಅವಧಿಯಿದೆ. ಒಂದು ವೇಳೆ ಸ್ವಇಚ್ಛೆಯಿಂದ ರಾಜೀನಾಮೆ ನೀಡದಿದ್ದರೆ ಕಂಪನಿಯೇ ನನ್ನ ಕೆಲಸದಿಂದ ತೆಗೆದುಹಾಕಬಹುದು. ಆ ಸಂದರ್ಭದಲ್ಲಿ ಏನೆಲ್ಲಾ ಸಮಸ್ಯೆಗಳು ಆಗಬಹುದು ಎಂದು ನೆಟ್ಟಿಗರಲ್ಲಿ ಕೇಳಿದ್ದಾರೆ.

ಇದನ್ನೂ ಓದಿ: ಕೈ ತುಂಬಾ ಸ್ಯಾಲರಿ ಸಿಗೋ ಇಂಜಿನಿಯರ್ ಕೆಲ್ಸ ಬಿಟ್ಟು ರ‍್ಯಾಪಿಡೋ ಚಾಲಕನಾದ ಯುವಕ, ಅಸಲಿ ಕಾರಣ ಇಲ್ಲಿದೆ

ಉದ್ಯೋಗಿಗೆ ಧೈರ್ಯ ತುಂಬಿದ ನೆಟ್ಟಿಗರು

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಕಾಮೆಂಟ್ ಮಾಡಿರುವ ಒಬ್ಬ ಬಳಕೆದಾರ, ರಾಜೀನಾಮೆ ನೀಡುವ ಮುನ್ನ ನೀವು ಬೇರೆ ಉದ್ಯೋಗ ಹುಡುಕಿ ಎಂದಿದ್ದಾರೆ. ಇನ್ನೊಬ್ಬರು, ಈ ವಿಚಾರವನ್ನು ಗೌಪ್ಯವಾಗಿಡದೇ ಎಚ್‌ಆರ್‌ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮ್ಯಾನೇಜರ್ ನಿಮ್ಮ ಬಳಿ ಮಾತ್ರ ಹೀಗೆ ವರ್ತಿಸುತ್ತಿದ್ದಾರಾ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Fri, 23 October 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು