AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೈ ತುಂಬಾ ಸ್ಯಾಲರಿ ಸಿಗೋ ಇಂಜಿನಿಯರ್ ಕೆಲ್ಸ ಬಿಟ್ಟು ರ‍್ಯಾಪಿಡೋ ಚಾಲಕನಾದ ಯುವಕ, ಅಸಲಿ ಕಾರಣ ಇಲ್ಲಿದೆ

ಒಳ್ಳೆಯ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಬೇಕೆನ್ನುವುದು ಎಲ್ಲರ ಕನಸು. ಕೆಲವರು ಓದಿದ್ದೆ ಬೇರೆ ಮಾಡೋ ಉದ್ಯೋಗವೇ ಬೇರೆಯಾಗಿರುತ್ತದೆ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಇಂಜಿನಿಯರಿಂಗ್ ಪದವಿ ಪಡೆದು ತಿಂಗಳಿಗೆ 40 ಸಾವಿರ ರೂ ಸಂಬಳ ಪಡೆಯುತ್ತಿದ್ರೂ ಇದೀಗ ರ‍್ಯಾಪಿಡೋ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಯುವಕನ ತಿಂಗಳ ಆದಾಯವು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕೈ ತುಂಬಾ ಸ್ಯಾಲರಿ ಸಿಗೋ ಇಂಜಿನಿಯರ್ ಕೆಲ್ಸ ಬಿಟ್ಟು ರ‍್ಯಾಪಿಡೋ ಚಾಲಕನಾದ ಯುವಕ, ಅಸಲಿ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: cartoq.com
ಸಾಯಿನಂದಾ
|

Updated on: Oct 21, 2026 | 6:52 PM

Share

ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ. ಹೀಗಾಗಿ ಎಷ್ಟೋ ಯುವಕರು ಓದಿದ್ದೆ ಬೇರೆ ಈಗ ಮಾಡುತ್ತಿರುವ ಕೆಲಸವೇ ಬೇರೆಯಾಗಿರುತ್ತವೆ. ಆದರೆ ಈ ಯುವಕನ ಕಥೆ ಬೇರೆಯದ್ದೇ ಇದೆ. ಇಂಜಿನಿಯರ್ ಪದವಿ ಪಡೆದು ತಿಂಗಳಿಗೆ 40,000 ರೂ ಸಂಬಳದ ಉದ್ಯೋಗವಿದ್ರೂ ಆಯ್ಕೆ ಮಾಡಿಕೊಂಡದ್ದು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ವೃತ್ತಿ. ಜಾರ್ಖಂಡ್‌ನ ಯುವಕನೊಬ್ಬ ತನ್ನ ವೃತ್ತಿಯನ್ನೇ ಬದಲಿಸಿಕೊಂಡದ್ದಕ್ಕೆ ಮೂಲ ಕಾರಣವೇ ಈ ಆದಾಯ. ಹೌದು, ಮಹಿಳೆಯೊಬ್ಬರು ಈ ಚಾಲಕನ ಕಥೆಯನ್ನು ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.

ಇಂಜಿನಿಯರ್ ಪದವಿ ಪಡೆದ್ರೂ ರ‍್ಯಾಪಿಡೋ ಚಾಲಕನಾದ ಯುವಕ

ನಿಂದ್ ಕೀ ರಾಣಿ (Neend_Ki_Rani) ಹೆಸರಿನ ಎಕ್ಸ್ ಖಾತೆಯಲ್ಲಿ ಮಹಿಳೆ ರಾಪಿಡೋ ಚಾಲಕನ ಜತೆಗೆ ನಡೆಸಿದ ಮಾತುಕತೆ ಬಗ್ಗೆ ವಿವರಿಸಿದ್ದಾಳೆ. ಈ ಮಹಿಳೆ 198 ರೂ ನೀಡಿ ರ‍್ಯಾಪಿಡೋ ಬೈಕ್ ರೈಡ್ ಅನ್ನು ಬುಕ್ ಮಾಡಿದ್ದಾರೆ. ರ‍್ಯಾಪಿಡೋ ಚಾಲಕನಿಗೆ ಒಟಿಪಿ ಹೇಳಿ ಈ ಪ್ರಯಾಣದ ವೇಳೆ ಮಹಿಳೆ ಚಾಲಕನ ಜತೆ ಮಾತಿಗಿಳಿದ್ದಾರೆ. ಇದೇ ವೇಳೆ ಮಹಿಳೆಗೆ ಈ ಯುವಕನು ಹಿಂದೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನುವ ಸಂಗತಿ ತಿಳಿದಿದೆ.

ಎಕ್ಸ್‌ ಪೋಸ್ಟ್‌ ಇಲ್ಲಿದೆ

ರ‍್ಯಾಪಿಡೋ ಚಾಲಕನ ದಿನದ ಸಂಪಾದನೆ 4,000 ರೂ

ಮಾತುಕತೆ ಮುಂದುವರೆಯುತ್ತಿದ್ದಂತೆ ಚಾಲಕನು ಈ ಮಹಿಳೆಯ ಬಳಿ ದಿನದ ಆದಾಯ 4,000 ರೂ ಬರುವುದಾಗಿ ತಿಳಿಸಿದ್ದಾನೆ. ಇದೇ ವೇಳೆ ತಿಂಗಳ ಆದಾಯದ ಬಗ್ಗೆ ಪ್ರಶ್ನೆ ಮಾಡಿದಾಗ 1 ಲಕ್ಷದಿಂದ 1.2 ಲಕ್ಷ ರೂ ಎಂದು ಕೇಳಿ ಮಹಿಳೆಗೆ ಶಾಕ್ ಆಗಿದೆ. ತನ್ನ ವೃತ್ತಿ ಬದಲಾಯಿಸಲು ಮುಖ್ಯ ಕಾರಣವೇ ಖರ್ಚು ವೆಚ್ಚಗಳಿಗೆ, ಕುಟುಂಬದ ನಿರ್ವಹಣೆಗೆ ಸಾಕಾಗದ ಆದಾಯ. ಆದರೆ ಇದೀಗ ತನ್ನ ಊರಿನಲ್ಲೇ ಉಳಿದು ಕುಟುಂಬದ ಅಗತ್ಯತೆಗಳನ್ನು ಪೂರೈಸುತ್ತಾ ಈ ಕೆಲಸ ಮಾಡೋದ್ರಲ್ಲಿ ತೃಪ್ತಿಯಿದೆ ಎನ್ನುವುದನ್ನು ಮಹಿಳೆಯ ಬಳಿ ಚಾಲಕ ತಿಳಿಸಿದ್ದಾನೆ.

ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕೆಲಸ ಯಾವುದಾದರೇನು ಪ್ರಾಮಾಣಿಕವಾಗಿ ದುಡಿಯೋದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಈ ಚಾಲಕನ ಸಂಪಾದನೆ ನೋಡಿದ್ರೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ದುಡೀತಾನೆ ಎಂದು ಕಾಣಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ದಿನಕ್ಕೆ 4,000 ರೂ ಸಂಪಾದಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಎಡವಟ್ಟಿನಿಂದ ಈ ಅವಘಡ
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ