ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಸ್ನೇಹದ ಪರೀಕ್ಷೆ ಆಗುತ್ತಿದೆ. ಈ ವಾರದ ಟಾಸ್ಕ್ನಲ್ಲಿ ಯಾರು ಚೆನ್ನಾಗಿ ಆಟ ಆಡಿದ್ದಾರೆ ಎಂಬುದನ್ನು ನಿರ್ಧರಿಸುವ ಸಂದರ್ಭ ಬಂದಾಗ ಗಗನ್ ಚಿನ್ನಪ್ಪ ಅವರು ತಾಂಡವ್ ರಾಮ್ ಹೆಸರು ಹೇಳಿದ್ದಾರೆ. ಆದರೆ ಅದಕ್ಕೆ ಸೌಂದರ್ಯಾ ಶೆಟ್ಟಿ ತಕರಾರು ತೆಗೆದಿದ್ದಾರೆ.
ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರ ನಡುವೆ ಉತ್ತಮವಾದ ಸ್ನೇಹ ಇದೆ. ಆದರೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಅವರ ಸ್ನೇಹದ ಪರೀಕ್ಷೆ ಆಗುತ್ತಿದೆ. ಈ ವಾರದ ಟಾಸ್ಕ್ನಲ್ಲಿ ಯಾರು ಚೆನ್ನಾಗಿ ಆಟ ಆಡಿದ್ದಾರೆ ಎಂಬುದನ್ನು ನಿರ್ಧರಿಸುವ ಸಂದರ್ಭ ಬಂದಾಗ ಗಗನ್ ಚಿನ್ನಪ್ಪ ಅವರು ತಾಂಡವ್ ರಾಮ್ ಹೆಸರು ಹೇಳಿದ್ದಾರೆ. ಆದರೆ ಅದಕ್ಕೆ ಸೌಂದರ್ಯಾ ಶೆಟ್ಟಿ ತಕರಾರು ತೆಗೆದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಈ ಮೊದಲು ಕೂಡ ಸೌಂದರ್ಯಾ ಶೆಟ್ಟಿ ಅವರು ಆಡಿದ ಮಾತುಗಳಿಂದಾಗಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ನಡುವಿನ ಸ್ನೇಹದಲ್ಲಿ ಬಿರುಕು ಮೂಡುವ ಸಾಧ್ಯತೆ ಎದುರಾಗಿತ್ತು. ಇದು ಪದೇ ಪದೇ ಮುಂದುವರಿದರೆ ಸ್ನೇಹಕ್ಕೆ ಕುತ್ತು ಬರುವುದು ಗ್ಯಾರಂಟಿ. ಅಕ್ಟೋಬರ್ 23ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

