AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ AEE ನಾಪತ್ತೆ ಕೇಸ್: 40 ದಿನಗಳ ನಂತರ ಮುಂಬೈನಲ್ಲಿ ಪತ್ತೆಯಾದ ಪರ್ವೀಜ್, ನಿಟ್ಟುಸಿರು ಬಿಟ್ಟ ಕುಟುಂಬ

ಕಳೆದ 40 ದಿನಗಳಿಂದ ಗೂಢವಾಗಿ ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಅವರ ಸುಳಿವು ಕೊನೆಗೂ ಸಿಕ್ಕಿದ್ದು, ಗದಗ ಪೊಲೀಸರ ನಿರಂತರ ಕಾರ್ಯಚರಣೆಯಿಂದ ಪರ್ವೀಜ್ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದಾರೆ. ಮಗ ಏನಾದ್ನೋ ಏನೋ ಎಂದು ಕಳೆದ ನಲವತ್ತು ದಿನಗಳಿಂದ ಆತಂಕದಲ್ಲೇ ದಿನ ಕಳೆಯುತ್ತಿದ್ದ ಪರ್ವಿಜ್ ಕುಟುಂಬಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಗದಗ AEE ನಾಪತ್ತೆ ಕೇಸ್: 40 ದಿನಗಳ ನಂತರ ಮುಂಬೈನಲ್ಲಿ ಪತ್ತೆಯಾದ ಪರ್ವೀಜ್, ನಿಟ್ಟುಸಿರು ಬಿಟ್ಟ ಕುಟುಂಬ
ಪರ್ವೀಜ್ ಧಾರವಾಡ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 23, 2026 | 9:38 PM

Share

ಗದಗ, (ಅಕ್ಟೋಬರ್ 23 : ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ ಪರ್ವೀಜ್ ಧಾರವಾಡ ಕೊನೆಗೂ ಪತ್ತೆಯಾಗಿದ್ದಾರೆ. ಬರೋಬ್ಬರಿ 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪರ್ವಿಜ್ ಧಾರವಾಡ ಅವರನ್ನು ಗದಗ ಪೊಲೀಸರು ಪತ್ತೆ ಮಾಡಿದ್ದು, ನಾಳೆ (ಅಕ್ಟೋಬರ್ 24 ಪರ್ವಿಜ್​ನನ್ನು ಗದಗಕ್ಕೆ ಕರೆತರಲಿದ್ದಾರೆ. ಇದರೊಂದಿಗೆ ಕೆಆರ್‌ಐಡಿಎಲ್ ಎಇಇ ಪರ್ವೀಜ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಇನ್ನೊಂದೆಡೆ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.

40 ದಿನಗಳ ಬಳಿಕ ಪತ್ತೆ

ಪೊಲೀಸರ ಕಣ್ಣು ತಪ್ಪಿಸಿ ತಿರುಗಾಡುತ್ತಿದ್ದ ಅಧಿಕಾರಿ ಪರ್ವೀಜ್ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, (ಅ.24) ಗದಗ ಕರೆತಂದು ವಿಚಾರಣೆಗೊಳಪಡಿಸಲಿದ್ದಾರೆ. ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರ ಹಿಂಸೆ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ವಿಚಾರಣೆ ನಂತರ ಅಸಲಿ ಸತ್ಯಸತ್ಯತೆ ಬಯಲಿಗೆ ಬರಲಿದೆ.

ಇದನ್ನೂ ಓದಿ: ಗದಗ: ಅನುದಾನ ಬಾರದಿದ್ದಕ್ಕೆ ಆತ್ಮಹತ್ಯೆ ಪತ್ರ ಬರೆದಿಟ್ಟು ಕೆಆರ್​ಐಡಿಎಲ್ ಎಇಇ ನಾಪತ್ತೆ! ಕುಟುಂಬಸ್ಥರು ಕಂಗಾಲು

ಹಲವು ಕಡೆ ಸುಳಿವು ಸಿಕ್ಕಿದ್ರೂ ಅವರ ಪತ್ತೆಯಾಗಿರಲಿಲ್ಲ

ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ಎಇಇ ಪರ್ವಿಜ್ ಅವರು ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದರು. ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದು, ಈ ಸಂಬಂಧ ಗದಗ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ಇಂಜಿನಿಯರ್ ಪರ್ವೀಜ್ ಪತ್ತೆಗೆ ಕಾರ್ಯಚರಣೆ ನಡೆಸಿದಾಗ ಆರಂಭದಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು.

ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು. ಬಳಿಕ ಮಧ್ಯಪ್ರದೇಶದ ಭೋಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪ್ರತ್ಯಕ್ಷವಾಗಿದ್ದರು. ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಪರ್ವೀಜ್ ಸುಳಿವು ಇರಲಿಲ್ಲ. ಆದರೂ ಬಿಡದ ಗದಗ ಪೊಲೀಸರು ನಿರಂತರ ಕಾರ್ಯಚರಣೆ ಮುಂದುವರೆಸಿದ್ದು, ಅಂತಿಮವಾಗಿ ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.

ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪರ್ವೀಜ್

ಸೆಪ್ಟೆಂಬರ್ 13ರಂದು ಕಚೇರಿಯ ಡೆಸ್ಕ್ ಮೇಲೆ ಡೆತ್ ನೋಟ್ ಮಾದರಿಯ ಪತ್ರವೊಂದನ್ನು ಬರೆದಿಟ್ಟು, ಮರುದಿನ (ಸೆಪ್ಟೆಂಬರ್ 13) ಬೆಂಗಳೂರಿನ ಸಭೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಪರ್ವೀಜ್ ನಾಪತ್ತೆಯಾಗಿದ್ದರು. ಸಂಪರ್ಕ ಸಿಗದ ಕಾರಣ ಸೆಪ್ಟೆಂಬರ್ 16 ರಂದು ಅವರ ಕುಟುಂಬಸ್ಥರು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪರ್ವೇಜ್ ಬರೆದ ನೋಟ್ ನಲ್ಲಿ ಸರ್ಕಾರದ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗದ ಕಾರಣ, ಉಪ-ಗುತ್ತಿಗೆದಾರರು ಮನೆ ಹಾಗೂ ಕಚೇರಿಗೆ ಬಂದು ತಮಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.ಇವರ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಹೆಚ್.ಎನ್ ಅವರ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಒಟ್ಟಿನಲ್ಲಿ 40 ದಿನಗಳ ಬಳಿಕ ಪರ್ವೀಜ್  ಸೇಫ್ ಆಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆತಂಕ ದೂರ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ