ಗಗನ್ ಜೋಕರ್ ಆದ್ರಾ? ಕುನ್ನಿ ಪದ ಬಳಕೆಗೆ ಸುದೀಪ್ ಕ್ಲಾಸ್ ಫಿಕ್ಸ್
ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಏರಿಳಿತಗಳು ಇದ್ದವು. ಅದರಲ್ಲಿ ಗಗನ್ ಚಿನ್ನಪ್ಪ ಅವರಿಗೂ ಈ ವಾರ ಕ್ಲಾಸ್ ತೆಗೆದುಕೊಳ್ಳುವುದು ಬಹುತೇಕ ಫಿಕ್ಸ್ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಅವರು ಕುನ್ನಿ ಎಂದು ಪದ ಬಳಕೆ ಮಾಡಿದ್ದೇ ಕಾರಣ. ಈ ಕಾರಣಕ್ಕೆ ಜೋಕರ್ ಆಗಿದ್ದು ಯಾರು ಎಂಬ ಪದ ಬಳಕೆ ಸುದೀಪ್ ಕಡೆಯಿಂದ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಜು ಮರಳಿದ ಬಳಿಕ ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ ಆಗಿದೆ. ಸಾಕಷ್ಟು ಜಗಳಗಳು ಸೃಷ್ಟಿ ಆಗಿವೆ. ಈ ಎಲ್ಲಾ ವಿಷಯಗಳ ಬಗ್ಗೆ ಸುದೀಪ್ ವೀಕೆಂಡ್ ಎಪಿಸೋಡ್ನಲ್ಲಿ ಚರ್ಚೆ ಮಾಡಲಿದ್ದಾರೆ. ಇದರ ಜೊತೆಗೆ ಕುನ್ನಿ ಪದ ಬಳಕೆ ಮಾಡಿದ ಗಗನ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಪ್ರೋಮೋದಲ್ಲಿ ‘ಗಗನ್ ಜೋಕರ್’ ಎಂಬುದನ್ನು ಸುದೀಪ್ ಪರೋಕ್ಷವಾಗಿ ಹೇಳಿದ್ದಾರೆ. ಪೂರ್ಣ ಎಪಿಸೋಡ್ ನೋಡಿದ ಬಳಿಕವೇ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 14, 2026 12:44 PM
Follow Us
Latest Videos

