AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ

ಎಲ್‌ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ

ಸುಷ್ಮಾ ಚಕ್ರೆ
|

Updated on: Oct 23, 2026 | 11:19 PM

Share

ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಎದುರಾಗುವ ಉದ್ವಿಗ್ನತೆಗೆ ಚೀನಾ ಪಡೆಗಳು ನಿಗದಿತ ಗಸ್ತು ಮಾದರಿಗಳಿಂದ ವಿಚಲಿತಗೊಳ್ಳುವುದೇ ಮುಖ್ಯ ಕಾರಣ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್​ಎಸಿ) ಉದ್ದಕ್ಕೂ ನಡೆಯುವ ಯಾವುದೇ ರೀತಿಯ ತಪ್ಪುಗ್ರಹಿಕೆಗಳು ಮತ್ತು ತಪ್ಪು ಲೆಕ್ಕಾಚಾರಗಳನ್ನು ತಡೆಯಲು ಉಭಯ ದೇಶಗಳು ನಿರಂತರ ಮಾತುಕತೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 23: ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಲ್ಲಿ ಉಂಟಾಗಿರುವ ಗೊಂದಲಕ್ಕೆ ಚೀನಾ ಪಡೆಗಳು ನಿಗದಿತ ಗಸ್ತು ಮಾದರಿಗಳನ್ನು ಬದಲಿಸುವುದೇ ಮುಖ್ಯ ಕಾರಣ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್​ಎಸಿ) ಉದ್ದಕ್ಕೂ ಯಾವುದೇ ರೀತಿಯ ತಪ್ಪುಗ್ರಹಿಕೆಗಳು ಹಾಗೂ ತಪ್ಪು ಲೆಕ್ಕಾಚಾರಗಳು ಸಂಭವಿಸದಂತೆ ತಡೆಯಲು ಮತ್ತು ಬಾಕಿ ಉಳಿದಿರುವ ವಿವಾದಗಳನ್ನು ಪರಿಹರಿಸಲು ಉಭಯ ದೇಶಗಳು ಹಾಲಿ ಇರುವ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಗಳನ್ನು ಮುಂದುವರಿಸಿವೆ ಎಂದು ತಿಳಿಸಿದರು.

ನಾವು ಈ ಹಿಂದೆಯೂ ಸ್ಪಷ್ಟಪಡಿಸಿರುವಂತೆ, ಚೀನಾ ಪಡೆಗಳು ನಿಗದಿತ ಗಸ್ತು ನಿಯಮಗಳನ್ನು ಮೀರಿದಾಗ ಅಥವಾ ಬದಲಾಯಿಸಿದಾಗ ಮಾತ್ರ ಭಾರತ-ಚೀನಾ ಗಡಿಯಲ್ಲಿ ವಾತಾವರಣ ಹಾಳಾಗುತ್ತದೆ ಎಂದು  ರಣಧೀರ್ ಜೈಸ್ವಾಲ್ ಪ್ರತಿಪಾದಿಸಿದ್ದಾರೆ. “ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹಾಗೂ ಒಟ್ಟಾರೆ ಪ್ರಗತಿಯ ವಿಕಾಸಕ್ಕೆ ತೀರಾ ಅತ್ಯಗತ್ಯ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಒತ್ತಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More