AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ಭುತ ಆಟ ಆಡಿದ ಅರ್ಹರಿಗೇ ಸಿಕ್ಕಿತು ಮನೆಯ ಕ್ಯಾಪ್ಟೆನ್ಸಿ: ಯಾರದು?

ಈ ವಾರ ಭಿನ್ನ ರೀತಿಯ ವಾತಾವರಣ ಮನೆಯಲ್ಲಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಜನಗಳು ಆದವಾದರೂ ಇಡೀ ವಾರ ಪ್ರೇಕ್ಷಕರಿಗಂತೂ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರದ ಟಾಸ್ಕ್ ಇದ್ದಿದ್ದೇ ಹಾಗೆ. ‘ರಾಕ್ಷಸ-ಗಂಧರ್ವ’ ರೀತಿಯ ಹೊಡೆದಾಡಲು-ಬಡಿದಾಡಲು ಪ್ರೇರೇಪಿಸುವ ಟಾಸ್ಕ್ ಅಲ್ಲದೆ, ಬುದ್ಧಿವಂತಿಕೆ, ಜಾಣತನ ಬಳಸಿ ಆಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್​​ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು.

ಅದ್ಭುತ ಆಟ ಆಡಿದ ಅರ್ಹರಿಗೇ ಸಿಕ್ಕಿತು ಮನೆಯ ಕ್ಯಾಪ್ಟೆನ್ಸಿ: ಯಾರದು?
Bigg Boss Kannada 13
ಮಂಜುನಾಥ ಸಿ.
|

Updated on:Oct 23, 2026 | 11:05 PM

Share

ಮುಖ್ಯಾಂಶಗಳು

  • ಅರ್ಹ ಸ್ಪರ್ಧಿಗೆ ಸಿಕ್ತು ಕ್ಯಾಪ್ಟೆನ್ಸಿ
  • ಅದ್ಭುತವಾಗಿ ಆಟ ಆಡಿದ ಸೌಂದರ್ಯಾ
  • ಮನೆಯ ಕ್ಯಾಫ್ಟೆನ್ ಆದ ಸೌಂದರ್ಯಾ ಶೆಟ್ಟಿ

ಬಿಗ್​​ಬಾಸ್ ಮನೆಯಲ್ಲಿ ಪ್ರತಿ ವಾರವೂ ಜಗಳ, ಗೊಂದಲ, ಕಿತ್ತಾಟ, ಅರಚಾಟ, ಟಾಸ್ಕ್ ರದ್ದು ಹೀಗೆ ಒಂದಲ್ಲ ಒಂದು ನಡೆಯುತ್ತಲೇ ಇತ್ತು. ಆದರೆ ಈ ವಾರ ಭಿನ್ನ ರೀತಿಯ ವಾತಾವರಣ ಮನೆಯಲ್ಲಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಸಣ್ಣ ಜನಗಳು ಆದವಾದರೂ ಇಡೀ ವಾರ ಪ್ರೇಕ್ಷಕರಿಗಂತೂ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರದ ಟಾಸ್ಕ್ ಇದ್ದಿದ್ದೇ ಹಾಗೆ. ‘ರಾಕ್ಷಸ-ಗಂಧರ್ವ’ ರೀತಿಯ ಹೊಡೆದಾಡಲು-ಬಡಿದಾಡಲು ಪ್ರೇರೇಪಿಸುವ ಟಾಸ್ಕ್ ಅಲ್ಲದೆ, ಬುದ್ಧಿವಂತಿಕೆ, ಜಾಣತನ ಬಳಸಿ ಆಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್​​ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು.

ಲೂಟಿಕೋರರ ಬಳಗದಲ್ಲಿದ್ದ ತಾಂಡವ್, ಆಸಿಯಾ, ಸೌಂದರ್ಯಾ, ಲಕ್ಷ್ಮಿ ಮತ್ತು ಸೋನಿಕಾ ಅವರ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಿತು. ಸೂಚನೆಗಳನ್ನು ಆಲಿಸಿ ಅಕ್ಷರಗಳನ್ನು ಜೋಡಿಸುವ ರೌಂಡ್​​ನಲ್ಲಿ ಆಸಿಯಾ ಮತ್ತು ಸೌಂದರ್ಯಾ ಗೆದ್ದರು. ಅಂತಿಮವಾಗಿ ಸೌಂದರ್ಯಾ ಮತ್ತು ಆಸಿಯಾ ಅವರುಗಳೇ ಕ್ಯಾಪ್ಟೆನ್ಸಿ ಪಟ್ಟಕ್ಕೆ ಸ್ಪರ್ಧೆ ಮಾಡುವಂತಾಯ್ತು. ಕ್ಯಾಪ್ಟೆನ್ಸಿಗಾಗಿ ನಡೆದ ಬ್ಯಾಲೆನ್ಸಿಂಗ್ ಟಾಸ್ಕ್​​ನಲ್ಲಿ ಸೌಂದರ್ಯಾ ಅದ್ಭುತವಾಗಿ ಆಟ ಆಡಿ ಗೆದ್ದರು. ಆ ಮೂಲಕ ಎರಡನೇ ಬಾರಿ ಆಸಿಯಾ ಫಿನಾಲೆ ವರೆಗೆ ಬಂದು ಸೋತರೆ, ಸೌಂದರ್ಯಾ ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆದರು.

ಈ ವಾರ ಸೌಂದರ್ಯಾ ಅದ್ಭುತವಾಗಿ ಆಟ ಆಡಿದ್ದರು. ಸೌಂದರ್ಯಾ ಅವರು ಟಾಸ್ಕ್​​ನ ವೇಳೆ ಸಹ ಅದ್ಭುತವಾದ ಪ್ರದರ್ಶನ ನೀಡಿದರು. ಇಡೀ ವಾರ ಎನರ್ಜಿಯಿಂದ ಆಟ ಆಡಿದ್ದು ಮಾತ್ರವೇ ಅಲ್ಲದೆ ಇಡೀ ಮನೆಯಲ್ಲಿ ಎನರ್ಜಿ ಇರುವಂತೆ ನೋಡಿಕೊಂಡರು. ಜೊತೆಗೆ ಲೂಟಿಕೋರರ ತಂಡ ಟಾಸ್ಕ್​​ ಗೆಲ್ಲುವಲ್ಲಿ ಬಹಳ ಪ್ರಮುಖವಾದ ಪಾತ್ರ ಸಹ ವಹಿಸಿದರು. ಇದೇ ಕಾರಣಕ್ಕೆ ಅವರಿಗೆ ಈ ವಾರದ ಉತ್ತಮ ಸಹ ದೊರಕಿತು. ಅದರ ಬೆನ್ನಲ್ಲೆ ಅವರಿಗೆ ಕ್ಯಾಪ್ಟೆನ್ಸಿ ಸಹ ದೊರಕಿದ್ದು, ಅರ್ಹರಿಗೆ ಪಟ್ಟ ದೊರೆತಂತೆ ಆಯ್ತು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಫ್ಯಾಷನ್ ಶೋ, ಸೌಂದರ್ಯಾ-ಆಸಿಯಾ ಕ್ಯಾಟ್ ವಾಕ್: ವಿಡಿಯೋ

ಸೌಂದರ್ಯಾ ಅವರು ಕ್ಯಾಪ್ಟೆನ್ಸಿ ಗೆದ್ದ ಕೂಡಲೇ ಎಲ್ಲರಿಗೂ ಈ ವಾರ ಫ್ರೀ, ನಿಮ್ಮಷ್ಟದಂತೆ ಇರಿ ಎಂದರು. ಅಂದಹಾಗೆ ಈ ವಾರದ ಕಿಚ್ಚನ ಚಪ್ಪಾಳೆಯೂ ಸಹ ಸೌಂದರ್ಯಾ ಅವರಿಗೇ ಹೋಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಅವರು ಅಷ್ಟು ಅದ್ಭುತವಾಗಿ ಈ ವಾರ ಆಟ ಆಡಿದ್ದಾರೆ. ನಾಳೆ (ಶನಿವಾರ) ವೀಕೆಂಡ್ ಎಪಿಸೋಡ್ ಎದುರಾಗಲಿದ್ದು, ಈ ವಾರ ಎಲ್ಲರೂ ಚೆನ್ನಾಗಿ ಪ್ರದರ್ಶನ ನೀಡಿದ್ದು, ಸುದೀಪ್ ಅವರು ಯಾವ ವಿಷಯವನ್ನು ಎತ್ತಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:04 pm, Fri, 23 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?