AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​​ಐಆರ್ ಫಾರ್ಮ್ 7 ವಾರ್: ಸಿಎಂ ಡಿಕೆ ಶಿವಕುಮಾರ್, ಸಚಿವರ ವಿರುದ್ಧ ಬಿಜೆಪಿ ದೂರು

ಚುನಾವಣಾ ಆಯೋಗದ ಕಚೇರಿ (SIR) ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ನಡೆಸಿದ ಧರಣಿ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮುಖಂಡರು ಮುಗಿಬಿದ್ದಿದ್ದಾರೆ. ಯಾವುದೇ ಅನುಮತಿ ಇಲ್ಲದೇ ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿದ್ದನ್ನು ಖಂಡಿಸಿ ಬಿಜೆಪಿ ದೂರು ದಾಖಲಿಸಿದೆ.

ಎಸ್​​ಐಆರ್ ಫಾರ್ಮ್ 7 ವಾರ್: ಸಿಎಂ ಡಿಕೆ ಶಿವಕುಮಾರ್, ಸಚಿವರ ವಿರುದ್ಧ ಬಿಜೆಪಿ ದೂರು
Karnataka Bjp
ಕಿರಣ್​ ಹನಿಯಡ್ಕ
| Edited By: |

Updated on: Oct 02, 2026 | 3:49 PM

Share

ಬೆಂಗಳೂರು, (ಅಕ್ಟೋಬರ್ 02): ಕರ್ನಾಟಕದಲ್ಲಿ ಎಸ್​​ಐಆರ್ ಫಾರ್ಮ್ 7 ವಿಚಾರವಾಗಿ ಡಿಕೆ ಶಿವಕುಮಾರ್ ಸರ್ಕಾರ ಆಕ್ರೋಶಗೊಂಡಿದ್ದು, ಫಾರ್ಮ್ 7 ದುರುಪಯೋಗ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು ರಾಜ್ಯ ಚುನಾವಣಾ ಆಯೋಗ ಮುಂದೆ ಧರಣಿ ನಡೆಸಿದ್ದರು. ಇದಕ್ಕೆ ವಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಅನುಮತಿ ಇಲ್ಲದೇ ಪ್ರತಿಭಟನೆ ಮಾಡಿ ಕೋರ್ಟ್​ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರು ವಿರುದ್ಧ ಕ್ರಮಕೈಗಳ್ಳಬೇಕೆಂದು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಪೊಲೀಸ್ ಕಮಿಷನರ್​​ಗೆ ದೂರು ನೀಡಿದೆ.

ಸಾಂವಿಧಾನಿಕ ಸಂಸ್ಥೆ ಮುಂದೆ ಸರ್ಕಾರವೇ ಪ್ರತಿಭಟನೆ ಮಾಡಿದೆ. ಇದು ಕಾನೂನು ಬಾಹಿರ, ದೂರು ದಾಖಲಿಸಬೇಕು ಅಂತ ಆಗ್ರಹಿಸಿದ ಬಿಜೆಪಿ ನಾಯಕರು ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು. ಬಳಿಕ ಒಟ್ಟಾಗಿ ಕಮಿಷನರ್​​ಗೆ ದೂರು ಸಲ್ಲಿಸಿದರು.

ಇದನ್ನೂ ಓದಿ: ಅಕ್ರಮವಾಗಿ ಫಾರ್ಮ್-7 ಸಲ್ಲಿಸಿಕೆ ಆರೋಪ: ಚುನಾವಣಾ ಆಯೋಗದ ಕಚೇರಿಯಲ್ಲೇ ಪ್ರತಿಭಟನೆ ಕುಳಿತ ಸಿಎಂ ಆ್ಯಂಡ್​ ಟೀಮ್​

ದೂರಿನಲ್ಲೇನಿದೆ?

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜಕೀಯ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ದೂರಿನಲ್ಲಿ ಆರು ಪ್ರಮುಖ ಆಕ್ಷೇಪಗಳನ್ನು ಮುಂದಿಟ್ಟಿದೆ.

ಕರ್ನಾಟಕ ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠವು ಆದೇಶ ಮಾಡಿ ಫ್ರೀಡಂ ಪಾರ್ಕ್ ಹೊರತಾಗಿ ಬೇರೆ ಕಡೆ ಧರಣಿ/ಪ್ರತಿಭಟನೆ ನಡೆಸಲು ನಿರ್ಬಂಧ ಹೇರಿದೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಗೌರವವನ್ನು ತೋರಿಸಿ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳು ಚುನಾವಣಾ ಕಚೇರಿ ಆವರಣದಲ್ಲಿ ಯಾವುದೇ ಅನುಮತಿ ಇಲ್ಲದೆ ಧರಣಿ, ಪ್ರತಿಭಟನೆಯನ್ನು ನಡೆಸಿರುವುದು ನ್ಯಾಯಾಲಯ ಆದೇಶದ ಉಲ್ಲಂಘನೆ ಆಗಿರುತ್ತದೆ.

ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಲ್ಲ. ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾದ ಚುನಾವಣಾ ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇಂತಹ ಸಂಸ್ಥೆಯ ಕಚೇರಿ ಆವರಣವನ್ನೇ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಪೊಲೀಸ್ ಆಯುಕ್ತರು ಸ್ಪಷ್ಟ ಉತ್ತರಕ್ಕೆ ಬಿಜೆಪಿ ಆಗ್ರಹ

  • ಉಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದ್ದು, ನ್ಯಾಯಾಲಯ ಪ್ರಕರಣ ಆಗಿರುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು, ಸಚಿವರುಗಳ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು.
  • ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು ಯಾರು? ಈ ಪ್ರತಿಭಟನೆಗೆ ಲಿಖಿತವಾಗಿ ಅನುಮತಿ ನೀಡಲಾಗಿತ್ತೇ? ನೀಡಿದ್ದರೆ, ಅದರ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕು.
  • ಸಾಮಾನ್ಯ ನಾಗರಿಕರು ಅಥವಾ ಪ್ರತಿಪಕ್ಷಗಳು ಇದೇ ರೀತಿ ಚುನಾವಣಾ ಕಚೇರಿ ಆವರಣದಲ್ಲಿ ಧರಣಿ ನಡೆಸಲು ಬಂದರೆ ಅವರಿಗೆ ಇದೇ ರೀತಿಯ ಅವಕಾಶ ಪೊಲೀಸ್ ಇಲಾಖೆ ನೀಡಲಾಗುತ್ತದೆಯೇ? ಎಂದು ಬಿಜೆಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಶ್ನಿಸಿದೆ.
  • ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು.
  • ನಡೆದ ಘಟನೆಯ ಕುರಿತು ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ, ಅನುಮತಿ ಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು.
  • ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕ್ರಮದ ವಿವರವನ್ನು ಲಿಖಿತವಾಗಿ ತಿಳಿಸಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಹನಿಯಡ್ಕ
ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಮಾದವಾರ ಟೋಲ್‌ನಲ್ಲಿ ನೈಸ್ ಸಂತ್ರಸ್ತ ರೈತರ ಅಹವಾಲು ಸ್ವೀಕರಿಸಿದ ಹೆಚ್​ಡಿಕೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಎಎಪಿ ಪ್ರತಿಭಟನೆ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ವಿಶ್ವವಿಖ್ಯಾತ ಮೈಸೂರು ದಸರಾ: ರಾಜವಂಶಸ್ಥರಿಗೆ ಆಹ್ವಾನ ನೀಡಿದ ಜಿಲ್ಲಾಡಳಿತ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಗೇ ವಂಚಿಸಲು ಯತ್ನಿಸಿ ತಗ್ಲಾಕೊಂಡ ಮಗ
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಐಫೆಲ್ ಟವರ್ BAPS ವಿವಾದ: ತನಿಖೆಯಲ್ಲಿ ಸತ್ಯ ಬಯಲು, ಸಂಸ್ಥೆಗೆ ಕ್ಲೀನ್ ಚಿಟ್
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ವಚನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ
ಸೌಜನ್ಯ ಕೇಸ್​​: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ