AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ‘ದೃಶ್ಯಂ 3’: ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Drishyam 3 movie review: ಬಹುತೇಕರಿಗೆ ತಿಳಿದಿರುವಂತೆ ಈ ಸಿನಿಮಾ ಮಲಯಾಳಂನ ‘ದೃಶ್ಯಂ 3’ ಸಿನಿಮಾದ ರೀಮೇಕ್ ಆಗಿದೆ. ಆದರೆ ಮಲಯಾಳಂ ಕತೆಗೂ ಹಿಂದಿಯ ಕತೆಗೂ ಸಾಕಷ್ಟು ವ್ಯತ್ಯಾಸ ಇದೆ. ಈ ಬಗ್ಗೆ ಮೊದಲಿನಿಂದಲೂ ಚಿತ್ರತಂಡ ಹೇಳುತ್ತಲೇ ಬಂದಿತ್ತು. ಅಲ್ಲದೆ, ‘ದೃಶ್ಯಂ’ ಸರಣಿಯನ್ನು ಈ ಸಿನಿಮಾ ಮೂಲಕ ಅಂತ್ಯ ಸಹ ಮಾಡಲಾಗಿದೆ. ಹಿಂದಿ ‘ದೃಶ್ಯಂ 3’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಸಿನಿಮಾದ ಟ್ವಿಟ್ಟರ್ ವಿಮರ್ಶೆ.

ಹೇಗಿದೆ ‘ದೃಶ್ಯಂ 3’: ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
Drishyam 3
ಮಂಜುನಾಥ ಸಿ.
|

Updated on:Oct 02, 2026 | 3:36 PM

Share

ಅಜಯ್ ದೇವಗನ್, ಶ್ರೆಯಾ ನಟನೆಯ ಹಿಂದಿ ಸಿನಿಮಾ ‘ದೃಶ್ಯಂ 3’ ಇಂದು (ಅಕ್ಟೋಬರ್ 02) ರಿಲೀಸ್ ಆಗಿದೆ. ಬಹುತೇಕರಿಗೆ ತಿಳಿದಿರುವಂತೆ ಈ ಸಿನಿಮಾ ಮಲಯಾಳಂನ ‘ದೃಶ್ಯಂ 3’ ಸಿನಿಮಾದ ರೀಮೇಕ್ ಆಗಿದೆ. ಆದರೆ ಮಲಯಾಳಂ ಕತೆಗೂ ಹಿಂದಿಯ ಕತೆಗೂ ಸಾಕಷ್ಟು ವ್ಯತ್ಯಾಸ ಇದೆ. ಈ ಬಗ್ಗೆ ಮೊದಲಿನಿಂದಲೂ ಚಿತ್ರತಂಡ ಹೇಳುತ್ತಲೇ ಬಂದಿತ್ತು. ಅಲ್ಲದೆ, ‘ದೃಶ್ಯಂ’ ಸರಣಿಯನ್ನು ಈ ಸಿನಿಮಾ ಮೂಲಕ ಅಂತ್ಯ ಸಹ ಮಾಡಲಾಗಿದೆ. ಹಿಂದಿ ‘ದೃಶ್ಯಂ 3’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಸಿನಿಮಾದ ಟ್ವಿಟ್ಟರ್ ವಿಮರ್ಶೆ.

ಆದೇಶ್ ಎಂಬುವರು ಟ್ವೀಟ್ ಮಾಡಿ, ‘ಸಿನಿಮಾ ಅದ್ಭುತವಾಗಿದೆ. ಹಿಂದೆ ನಡೆದ ಎಲ್ಲ ಘಟನೆಗಳಿಗೆ ಒಳ್ಳೆ ಸ್ಪಷ್ಟೀಕರಣ ಮತ್ತು ಕಾರಣಗಳನ್ನು ನೀಡಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಎಲ್ಲವನ್ನೂ ವಿವರಿಸಿರುವ ರೀತಿ ಅದ್ಭುತವಾಗಿದೆ. ಜಾಣತನದಿಂದ ಕ್ಲೈಮ್ಯಾಕ್ಸ್ ಅನ್ನು ಕಟ್ಟಲಾಗಿದೆ. ಅಜಯ್ ದೇವಗನ್, ಪ್ರಕಾಶ್ ರೈ, ಜಯದೀಪ್ ಎಲ್ಲರ ನಟನೆಯೂ ಚೆನ್ನಾಗಿದೆ. ಹಾಡುಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಚೆನ್ನಾಗಿ ಮೂಡಿಬಂದಿದೆ’ ಎಂದಿದ್ದಾರೆ.

ಫಿಲ್ಮಿ ಗೌತಮ್ ಎಂಬುವರು ಟ್ವೀಟ್ ಮಾಡಿ, ‘ಈ ರೀತಿಯ ಸಿನಿಮಾಗಳಲ್ಲಿ ಎಲ್ಲವನ್ನೂ ಮೊದಲೇ ಊಹಿಸಬಹುದಾದ ರೀತಿ ಇರುತ್ತದೆ. ಆದರೆ ‘ದೃಶ್ಯಂ 3’ ಅದಕ್ಕೆ ಹೊರತಾಗಿದೆ, ಪ್ರೇಕ್ಷಕರ ಏನು ಊಹಿಸಿರುತ್ತಾನೋ ಅದಕ್ಕೆ ವಿರುದ್ಧವಾದುದು ನಡೆಯುತ್ತದೆ. ಸಿನಿಮಾದ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧ ಹೆಚ್ಚು ಎಂಗೇಜಿಂಗ್ ಆಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಸೀಟಿನ ತುದಿಯಲ್ಲಿ ಕೂತು ನೋಡುವಂತಿದೆ’ ಎಂದಿದ್ದಾರೆ.

ರಶೀದ್ ಸಿದ್ಧಿಖಿ ಎಂಬುವರು ಟ್ವೀಟ್ ಮಾಡಿ, ‘ದೃಶ್ಯಂ 3’ ಸಿನಿಮಾ ‘ದೃಶ್ಯಂ 2’ ಸಿನಿಮಾಕ್ಕಿಂತಲೂ ಬಹಳ ಚೆನ್ನಾಗಿದೆ. ಹಿಡಿದಿಟ್ಟುಕೊಳ್ಳುವಂಥಾ ಚಿತ್ರಕತೆ ಸಿನಿಮಾನಲ್ಲಿದೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಖಂಡಿತ ದೊಡ್ಡ ಹಿಟ್ ಆಗಲಿದೆ. ಬರೆದಿಟ್ಟುಕೊಳ್ಳಿ 600 ಕೋಟಿಗೂ ಹೆಚ್ಚು ಗಳಿಕೆ ಮಾಡಲಿದೆ ಎಂದಿದ್ದಾರೆ.

ಸ್ಟುಡಿಯೋ ಫ್ಲಿಕ್ಸ್​​ ಟ್ವಿಟ್ಟರ್ ಖಾತೆಯೂ ಸಹ ಟ್ವೀಟ್ ಮಾಡಿದ್ದು, ಮಲಯಾಳಂನ ‘ದೃಶ್ಯಂ 3’ ಸಿನಿಮಾಕ್ಕಿಂತಲೂ ಬಹಳ ಭಿನ್ನವಾಗಿದೆ. ಈ ಸಿನಿಮಾ ಪೊಲೀಸ್ ಮತ್ತು ನಾಯಕನ ನಡುವೆ ಭೀಕರ ಬೌದ್ಧಿಕ ಮತ್ತು ಮಾನಸಿಕ ಯುದ್ಧದಂತೆ ಭಾಸವಾಗುತ್ತದೆ. ಜಯದೀಪ್ ಅವರ ನಟನೆ ಅದ್ಭುತವಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 2 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More