AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ವಿಂಡೀಸ್ ಕೊನೆಯ ಏಕದಿನ ಪಂದ್ಯದಿಂದ ಕನ್ನಡಿಗ ಔಟ್..!

ಭಾರತ-ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯದಲ್ಲಿ ಯುವ ವೇಗಿ ಪ್ರಸಿದ್ಧ್ ಕೃಷ್ಣ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಗಂಭೀರ ಸ್ವರೂಪದ ಗಾಯದಿಂದಾಗಿ ಅವರು ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಲ್ಲದೆ, ಪ್ರಸಿದ್ಧ್ ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಈ ಬೆಳವಣಿಗೆ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ, ಏಕೆಂದರೆ ಪ್ರಸಿದ್ಧ್ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು.

ಪೃಥ್ವಿಶಂಕರ
|

Updated on: Oct 01, 2026 | 4:01 PM

Share
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಯುವ ವೇಗಿ ಪ್ರಸಿದ್ಧ್ ಕೃಷ್ಣ ಗಾಯಕ್ಕೆ ತುತ್ತಾದರು. ಇದರಿಂದಾಗಿ ಅವರು ಪಂದ್ಯದ ನಡುವೆಯೇ ಬೌಲಿಂಗ್ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡರು. ಗಾಯದಿಂದಾಗಿ ಪ್ರಸಿದ್ಧ್ ಮತ್ತೆ ಮೈದಾನಕ್ಕೆ ಮರಳಲಿಲ್ಲ. ಹೀಗಾಗಿ ಪ್ರಸಿದ್ಧ್ ಕೊನೆಯ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗುತಿತ್ತು(PC-PTI).

1 / 6
ಆದರೀಗ ಖಚಿತ ಮಾಹಿತಿ ಹೊರಬಿದ್ದಿದ್ದು, ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಪ್ರಸಿದ್ಧ್ ಕೃಷ್ಣ ಅಕ್ಟೋಬರ್ 3 ರಂದು ಚಂಡೀಗಢದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಕೊನೆಯ ಏಕದಿನ ಪಂದ್ಯ ಮಾತ್ರವಲ್ಲದೆ ಪ್ರಸಿದ್ಧ್ ದೀರ್ಘ ಕಾಲದವರೆಗೆ ಕ್ರಿಕೆಟ್​ನಿಂದ ದೂರ ಉಳಿಯಬಹುದು ಎನ್ನಲಾಗುತ್ತಿದೆ(PC-PTI).

2 / 6
ಗುವಾಹಟಿಯಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ, ಪ್ರಸಿದ್ಧ್ ಕೃಷ್ಣ ಕೇವಲ ಐದು ಓವರ್ ಬೌಲಿಂಗ್ ಮಾಡಿ 45 ರನ್‌ಗಳಿಗೆ 1 ವಿಕೆಟ್ ಪಡೆದರು. ಇನ್ನಿಂಗ್ಸ್‌ನ ಆರಂಭದಲ್ಲಿ ನಾಲ್ಕು ಓವರ್‌ಗಳ ಮೊದಲ ಸ್ಪೆಲ್ ಬೌಲಿಂಗ್ ಮಾಡಿದ ಪ್ರಸಿದ್ಧ್, ನಂತರ 31 ನೇ ಓವರ್‌ನಲ್ಲಿ ತಮ್ಮ ಎರಡನೇ ಸ್ಪೆಲ್‌ಗೆ ಮರಳಿದರು, ಆದರೆ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ನಂತರ ಗಾಯದಿಂದ ಮೈದಾನವನ್ನು ತೊರೆದರು(PC-PTI).

3 / 6
ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಪ್ರಸಿದ್ಧ್ ಕೃಷ್ಣ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ದೃಢಪಡಿಸಿದ್ದರು. ಆದರೀಗ ಪ್ರಸಿದ್ಧ್ ಅವರ ಗಾಯವೂ ಗಂಭೀರವಾಗಿದ್ದು, ಅವರನ್ನು ಕೊನೆಯ ಏಕದಿನ ಪಂದ್ಯದಿಂದ ಹೊರಗಿಡಲಾಗಿದೆ(PC-PTI).

4 / 6
ಪ್ರಸಿದ್ಧ್ ಕೃಷ್ಣ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ತಂಡದ ಭಾಗವಾಗಿಲ್ಲ. ಹೀಗಾಗಿ ಅವರಿಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಸಿಗಲಿದೆ ಆದರೆ ಅಕ್ಟೋಬರ್ 22 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್‌ ಪ್ರವಾಸದ ವೇಳೆಗೆ ಪ್ರಸಿದ್ಧ್ ಚೇತರಿಸಿಕೊಳ್ಳದಿದ್ದರೆ ಅದು ತಂಡಕ್ಕೆ ದುಬಾರಿಯಾಗಬಹುದು(PC-PTI).

5 / 6
ಪ್ರಸಿದ್ಧ್ ಕೃಷ್ಣ ಪ್ರಸ್ತುತ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ಇದುವರೆಗೆ ಒಂಬತ್ತು ಟೆಸ್ಟ್, 30 ಏಕದಿನ ಮತ್ತು ಎಂಟು ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಟೆಸ್ಟ್‌ನಲ್ಲಿ 32 ವಿಕೆಟ್‌ಗಳು, ಏಕದಿನ ಪಂದ್ಯಗಳಲ್ಲಿ 53 ವಿಕೆಟ್‌ಗಳು ಮತ್ತು ಟಿ20ಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ(PC-PTI).

6 / 6
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us