AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!

ಅಡುಗೆಯು ಜೀವಧಾರವಾಗಿದ್ದು, ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಉತ್ತರ ದಿಕ್ಕಿಗೆ ಇರಿಸುವುದು ಶ್ರೇಷ್ಠ. ಇದು ಸಂತೃಪ್ತಿ, ಶಕ್ತಿ ಮತ್ತು ಸಮೃದ್ಧಿಯನ್ನು ತರುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕುಗಳಿಗೆ ಇಡುವುದನ್ನು ತಪ್ಪಿಸಿ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Vastu Tips: ಅಡುಗೆ ಮನೆಯಲ್ಲಿ ಈ ತಪ್ಪು ಮಾಡಲೇಬೇಡಿ; ಅನಾರೋಗ್ಯಕ್ಕೆ ಇದೇ ಮುಖ್ಯ ಕಾರಣ!
ವಾಸ್ತು ಶಾಸ್ತ್ರ
ಅಕ್ಷತಾ ವರ್ಕಾಡಿ
|

Updated on: Feb 27, 2026 | 10:26 AM

Share

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯ ವಿನ್ಯಾಸ, ಅದರಲ್ಲಿನ ವಸ್ತುಗಳ ಜೋಡಣೆ ಮತ್ತು ಅಡುಗೆ ಮಾಡುವ ದಿಕ್ಕು ಇವೆಲ್ಲವೂ ಪ್ರಾಮುಖ್ಯತೆಯನ್ನು ಹೊಂದಿವೆ. ಸಾಮಾನ್ಯವಾಗಿ, ಅಡುಗೆಮನೆಗಳನ್ನು ಆಗ್ನೇಯ (ಸೌತ್-ಈಸ್ಟ್) ಅಥವಾ ವಾಯುವ್ಯ (ನಾರ್ತ್-ವೆಸ್ಟ್) ದಿಕ್ಕಿನಲ್ಲಿ ನಿರ್ಮಿಸಲಾಗುತ್ತದೆ. ಅಡುಗೆಮನೆಯ ಸ್ಥಳ ಯಾವುದೇ ಆಗಿದ್ದರೂ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದು ಶುಭಕರ. ಪೂರ್ವ ದಿಕ್ಕಿಗೆ ಇಂದ್ರ ಅಧಿಪತಿಯಾಗಿರುತ್ತಾನೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ಶಾಸ್ತ್ರಗಳ ಪ್ರಕಾರ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿ ಮುಗಿದ ನಂತರ, ಆಹಾರವನ್ನು ಉತ್ತರದ ಕಡೆ, ಅಂದರೆ ನಮ್ಮ ಎಡಭಾಗಕ್ಕೆ ಇಳಿಸುವುದು ಸರ್ವಶ್ರೇಷ್ಠ. ಉತ್ತರ ದಿಕ್ಕು ಕುಬೇರನ ಅಧಿಪತ್ಯದಲ್ಲಿದೆ ಮತ್ತು ಈ ದಿಕ್ಕಿಗೆ ಆಹಾರವನ್ನು ಇರಿಸುವುದರಿಂದ ಸಂತೃಪ್ತಿ, ಆಹಾರಕ್ಕೆ ಹೆಚ್ಚು ಶಕ್ತಿ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಇದು ನೈವೇದ್ಯವಾಗಿ ಅರ್ಪಿತವಾಗಿ, ನಂತರ ನಾವು ಸೇವಿಸಬಹುದು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಆದರೆ, ಆಹಾರವನ್ನು ದಕ್ಷಿಣ ದಿಕ್ಕಿಗೆ ಇರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ದಕ್ಷಿಣ ದಿಕ್ಕು ಯಮನ ದಿಕ್ಕು ಮತ್ತು ಪಿತೃಗಳಿಗೆ ಸಂಬಂಧಿಸಿದ್ದು. ಈ ದಿಕ್ಕಿಗೆ ಆಹಾರವನ್ನು ಇರಿಸಿದರೆ ಅದು ಪಿತೃಗಳಿಗೆ ಅರ್ಪಿತವಾಗುತ್ತದೆ. ಇದರಿಂದ ಅನಾರೋಗ್ಯ, ಮಾನಸಿಕ ನೆಮ್ಮದಿ ಕೊರತೆ, ಮತ್ತು ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ. ಪಿತೃಗಳಿಗೆ ಪಿಂಡ ಹಾಕುವಾಗ ಅಥವಾ ಆಹಾರ ಅರ್ಪಿಸುವಾಗ ದಕ್ಷಿಣ ದಿಕ್ಕಿನ ಕಡೆಗೆ ನೀಡುವುದು ಇದೇ ಕಾರಣಕ್ಕಾಗಿಯೇ. ಇನ್ನು ಪಶ್ಚಿಮ ದಿಕ್ಕಿಗೂ (ಶನಿ ಮತ್ತು ವರುಣರ ದಿಕ್ಕು) ಆಹಾರವನ್ನು ಇಳಿಸುವುದು ಶುಭಕರವಲ್ಲ ಎಂದು ಹೇಳಲಾಗುತ್ತದೆ. ಅಡುಗೆ ಮನೆಯು ಮಧ್ಯಭಾಗದಲ್ಲಿ ಇದ್ದಾಗ ಪೂರ್ವಕ್ಕೆ ಇಳಿಸಲು ಸಾಧ್ಯವಿಲ್ಲದಿದ್ದರೆ, ಉತ್ತರ ದಿಕ್ಕೇ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ