Viral : ವಾರ್ಷಿಕ ಸಂಬಳ 43.5 ಲಕ್ಷ ರೂ, 5 ವರ್ಷಕ್ಕೆ 30 ಲಕ್ಷ ತೆರಿಗೆ, ಆದ್ರೆ ಈಗ ಕೆಲ್ಸನೇ ಇಲ್ಲ : ಇದು ಬೆಂಗಳೂರಿನ ಇಂಜಿನಿಯರ್ ಕಥೆ
ಈಗಿನ ಕಾಲದಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಒಂದು ರೀತಿಯ ಕಷ್ಟವಾದರೆ, ಅದನ್ನು ಉಳಿಸಿಕೊಳ್ಳುವುದು ಮತ್ತೊಂದು ರೀತಿಯ ಸವಾಲು. ಏಕಾಏಕಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತವೆ. ಹೀಗಾದಾಗ ಕೆಲಸ ಕಳೆದುಕೊಂಡವರಿಗೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುವುದು ಸಹಜ. ಕೆಲಸ ಕಳೆದುಕೊಂಡ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಕಥೆಯನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಲಕ್ಷಾಂತರ ತೆರಿಗೆ ಕಟ್ಟಿದ್ರು ಕೂಡ ಕೆಲಸ ಕಳೆದುಕೊಂಡ ಬಳಿಕ ಜೀವನ ಸಾಗಿಸುವುದೇ ಕಷ್ಟ ಎನ್ನುವ ಅಸಲಿ ಸತ್ಯವನ್ನು ಇಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿಯಾಗಿದೆ.

ಕೈ ತುಂಬಾ ಸಂಬಳವಿದ್ದರೂ ಮನೆ ಹಾಗೂ ಸಂಸಾರ ನಿಭಾಯಿಸೋದು ಕಷ್ಟ. ಇನ್ನು ಏಕಾಏಕಿ ಕೆಲಸ ಕಳೆದುಕೊಂಡರೇ ಪರಿಸ್ಥಿತಿ ಹೇಗಾಗಬೇಡ. ಇತ್ತೀಚೆಗಿನ ದಿನಗಳಲ್ಲಿ ಕಂಪನಿಗಳು (company) ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಪ್ರೈವೇಟ್ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಂಡರೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಯಾವಾಗ ಹೇಗೆ ಕೆಲಸ ಹೋಗುತ್ತದೆ ಎಂದು ಹೇಳಲಾಗದು. ಇದೀಗ ಇಲ್ಲೊಬ್ಬ ಬೆಂಗಳೂರಿನಲ್ಲಿ ಲಕ್ಷಾನುಗಟ್ಟಲೆ ಸಂಬಳ ಪಡೆಯುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ (Bengaluru Software Engineer)ಕೆಲಸ ಕಳೆದುಕೊಂಡಿದ್ದಾರಂತೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social media) ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಬಳಕೆದಾರರು ಈಗೀಗ ಯಾವುದೇ ಕೆಲಸಕ್ಕೂ ಭದ್ರತೆ ಅನ್ನೋದು ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.
@venkatfin9 ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಅತ್ಯಧಿಕ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಕಳೆದುಕೊಂಡ ಕಥೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಎನ್‌ಐಟಿಯಲ್ಲಿ ಪದವಿ ಪಡೆದ ಟಾಪ್ ಪರ್ಫಾರ್ಮಿಂಗ್ ಇಂಜಿನಿಯರ್ ಸಲೀಂ ಎನ್ನುವ ವ್ಯಕ್ತಿಯೂ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಾರ್ಷಿಕ 43.5 ಲಕ್ಷ ಸಂಬಳದೊಂದಿಗೆ ಕೆಲಸ ಮಾಡುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಈ ವ್ಯಕ್ತಿ ಬರೋಬ್ಬರಿ 30 ಲಕ್ಷಕ್ಕಿಂತ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡಿದ್ದರು. ಆದರೆ ಏಕಾಏಕಿ ಕಂಪನಿಯೂ ಕೇವಲ ಮೂರು ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆಯಲಾಯಿತು. ಇತ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ 1.95 ಲಕ್ಷ ವೆಚ್ಚವಾಗುತ್ತಿದೆ. ಕೆಲಸ ಇಲ್ಲದ ಕಾರಣ, ಕುಟುಂಬದ ಭವಿಷ್ಯ, ಸಾಲ, ಮಕ್ಕಳ ಶಿಕ್ಷಣ ಎಲ್ಲವೂ ಕಷ್ಟದಾಯಕವಾಗಿದೆ, ಮುಂದೇನು ಎನ್ನುವುದನ್ನು ತೋಚದೇ ಸಲೀಂ ಮಾನಸಿಕ ಖಿನ್ನತೆಗೆ ಜಾರಿದ್ದಾರೆ. ಈಗ ಇವರು ಬೀದಿಗೆ ಬಿದ್ದಿದ್ದಾರೆ, ಮುಂದೇನು ಎನ್ನುವ ಬಗ್ಗೆ ಯಾವುದೇ ಐಡಿಯಾ ಇಲ್ಲ.
ನಾನು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಿದ್ದೇನೆ. ಆದರೆ ನನಗೆ ಯಾವುದೇ ನೆರವು ಸಿಗಲಿಲ್ಲ. ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದೇನೆ. ದೇಶಕ್ಕೆ ಕೊಡುಗೆ ನೀಡಿದರೂ, ಸಂಕಷ್ಟದಲ್ಲಿ ಸರ್ಕಾರ ಬೆಂಬಲ ನೀಡುತ್ತಿಲ್ಲ ಎಂದು ಸಲೀಂ, ವೆಂಕಟೇಶ್ ಅವರೊಂದಿಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೆಲಸ ಕಳೆದುಕೊಂಡಿರುವ ಟೆಕ್ಕಿ ತಮ್ಮ ನಿಜವಾದ ಹೆಸರು ಹಾಗೂ ಐಡೆಂಟಿಟಿಯನ್ನು ಎಲ್ಲಿಯೂ ರಿವೀಲ್ ಮಾಡದಂತೆ ವೆಂಕಟೇಶ್ ಅವರಲ್ಲಿ ಕೇಳಿಕೊಂಡಿದ್ದು, ಇನ್ಷಿಯಲ್ ಆದ ಸಲೀಂ ಎಂಬ ಹೆಸರನ್ನು ಮಾತ್ರ ಪೋಸ್ಟ್ನಲ್ಲಿ ಹಂಚಿಕೊಂಡಿದ್ದೇನೆ ಎಂಬ ವಿಚಾರವನ್ನು ಇಲ್ಲಿ ಹೇಳಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Just got a message from Mr. Salim a topper from his NIT, working in Bangalore with a ₹43.5 LPA package laid off last month. The company handed him just 3 months’ severance.
Last year alone, he paid ₹11.22 lakhs in income tax. In just 5 years, over ₹30 lakhs gone into the…
— Venkatesh Alla (@venkat_fin9) June 29, 2025
ಈ ಪೋಸ್ಟ್ 8 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ಖಾರವಾಗಿಯೇ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಕೆಲಸ ಕಳೆದುಕೊಂಡರೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮನ್ನು ಇಷ್ಟು ಸ್ವಾವಲಂಬಿಗಳಾಗಿ ಮಾಡುತ್ತಿರುವುದು ಯಾವುದು? ತೆರಿಗೆ ಪಾವತಿಸುವುದು ನಿರುದ್ಯೋಗದ ವಿರುದ್ಧದ ವಿಮಾ ಪಾಲಿಸಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಒಬ್ಬ ವ್ಯಕ್ತಿ ತೆರಿಗೆ ಪಾವತಿಸಿದ್ದಾನೆ ಎಂಬ ಕಾರಣಕ್ಕಾಗಿ ಸರ್ಕಾರ ಆತನನ್ನು ಏಕೆ ನೋಡಿಕೊಳ್ಳಬೇಕು? ಪ್ರತಿಯೊಬ್ಬ ನಾಗರಿಕನು ಆದಾಯ ತೆರಿಗೆ, ಜಿಎಸ್ಟಿ, ಕಸ್ಟಮ್ಸ್ ಹೀಗೆ ಒಂದಲ್ಲ ಒಂದು ರೂಪದಲ್ಲಿ ತೆರಿಗೆ ಪಾವತಿಸುತ್ತಾನೆ ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ಕೆಲವರು ನೀವು ದೊಡ್ಡ ಮೊತ್ತವನ್ನು ದುಡಿಯುತ್ತೀರಿ. ತೆರಿಗೆ ಪಾವತಿಸುತ್ತೀರಿ. ಅದರಲ್ಲಿ ವಿಶೇಷವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು, ಕಂಪನಿಗಳು ಉದ್ಯೋಗಿಗಳಿಗೆ ಸ್ವಲ್ಪಮಟ್ಟಿಗೆಯಾದ್ರೂ ಉದ್ಯೋಗ ಭದ್ರತೆ ನೀಡಬೇಕು, ಪ್ರತಿಯೊಬ್ಬ ಉದ್ಯೋಗಿಯೂ ನಿಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








