Video : ಬೆಡ್‌ರೂಮಿನ ಕರ್ಟನ್ ಮೇಲೆ ಹೆಡೆಯೆತ್ತಿ ಕುಳಿತ ಬುಸ್ ನಾಗಪ್ಪ
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಸಾಕು, ಈ ಹಾವುಗಳು ಮನೆಯೊಳಗೆ ಬರುವುದೇ ಹೆಚ್ಚು. ಸೈಲೆಂಟ್ ಆಗಿ ಮನೆಯೊಳಗೆ ಎಂಟ್ರಿ ಕೊಟ್ಟು ಶೂ, ಮನೆಯ ಮೂಲೆ ಮೂಲೆಗಳಲ್ಲಿ ಅವಿತು ಕುಳಿತುಬಿಡುತ್ತವೆ. ಆದರೆ ಇದೀಗ ದೈತ್ಯಾಕಾರದ ನಾಗರಹಾವೊಂದು ಮನೆಯೊಳಗೆ ಸದ್ದಿಲ್ಲದೇ ಬಂದು ಮಲಗುವ ಕೋಣೆಯಲ್ಲಿದ್ದ ಕರ್ಟನ್ ಮೇಲೆ ಹೆಡೆಯೆತ್ತಿ ಕುಳಿತುಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯವು ನೋಡುಗರ ಎದೆ ಝಲ್ ಎನ್ನುವಂತೆ ಮಾಡಿದೆ.

ನಾಗರಹಾವುಗಳೆಂದರೆ (cobra) ಎಂತಹವರು ಒಂದು ಕ್ಷಣ ಭಯ ಪಡುತ್ತಾರೆ. ತನ್ನ ಸುತ್ತಮುತ್ತಲಿನಲ್ಲಿ ಹಾವೊಂದು ಕಾಣಿಸಿಕೊಂಡ್ರೆ ಸಾಕು, ಎಷ್ಟೇ ಧೈರ್ಯವಂತನಾದ್ರೂ ಒಂದು ಕ್ಷಣ ಅಲ್ಲಿ ನಿಲ್ಲುವ ಧೈರ್ಯ ಮಾಡುವುದೇ ಇಲ್ಲ. ಇನ್ನು ಈ ಮಳೆಗಾಲದಲ್ಲಿ ಈ ಕ್ರಿಮಿಕೀಟಗಳ ಕಾಟ ಹೆಚ್ಚು. ಹೀಗಾಗಿ ಕೆಲವೊಮ್ಮೆ ಈ ವಿಷಕಾರಿ ಸರ್ಪಗಳು ಸದ್ದಿಲ್ಲದೇ ಮನೆಯೊಳಗೆ ಬರುತ್ತದೆ. ಶೂ, ಬೈಕ್, ಕಾರು ಸೇರಿದಂತೆ ಬೆಚ್ಚಗಿನ ಸ್ಥಳಗಳಲ್ಲಿ ಅವಿತು ಕುಳಿತು ಆಶ್ರಯ ಪಡೆಯುತ್ತವೆ. ಆದರೆ ಇದೀಗ ನಾಗರಹಾವೊಂದು ಬುಸುಗುಡುತ್ತಾ ಮನೆಯ ಬೆಡ್‌ರೂಮಿನ ಕರ್ಟನ್ ಮೇಲೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಹರಿದಾಡುತ್ತಿದೆ. ಹೀಗೆ ಹೆಡೆಯೆತ್ತಿ ನಿಂತ ನಾಗರಹಾವನ್ನು ಉರಗತಜ್ಞರು ರಕ್ಷಿಸಿದ್ದಾರೆ.
vishalsnakesaver ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ದೈತ್ಯಗಾತ್ರದ ನಾಗರಹಾವೊಂದು ಬೆಡ್‌ರೂಮಿಗೆ ನುಗ್ಗಿ ಕಿಟಕಿಗೆ ಹಾಕಲಾದ ಕರ್ಟನ್ ಮೇಲೆ ಹತ್ತಿ ಹೆಡೆಯೆತ್ತಿ ಬುಸುಗುಡುತ್ತಾ ಕುಳಿತುಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. ಈ ದೃಶ್ಯವನ್ನು ಮನೆಮಂದಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ಈವರೆಗೆ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ದೃಶ್ಯ ನೋಡುವುದಕ್ಕೆ ಭಯಂಕರವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಹರ ಹರ ಮಹಾದೇವ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾಗರಹಾವುಗಳು ವಿಷಕಾರಿ, ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ ಎಂದಿದ್ದಾರೆ. ಇನ್ನು ಕೆಲವರು ಮನೆಯ ಮೂಲೆಗಳಿಗೆ ಕೈ ಹಾಕುವಾಗ ಅಥವಾ ಶೂ ಹಾಕಿಕೊಳ್ಳುವಾಗ ಸ್ವಲ್ಪ ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








