Optical Illusion : ಈ ಚಿತ್ರದಲ್ಲಿ ಸ್ಮೈಲಿ ಫೇಸ್ ಎಲ್ಲಿದೆ ಎಂದು 5 ಸೆಕೆಂಡಿನಲ್ಲಿ ಕಂಡು ಹಿಡಿಯುವಿರಾ?
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ನಂತಹ ಚಿತ್ರಗಳು ನಮ್ಮಲ್ಲಿ ಒಂದು ಕ್ಷಣ ಗೊಂದಲವನ್ನು ಮೂಡಿಸುವುದು ಮಾತ್ರವಲ್ಲ, ನಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಹೌದು, ಬುದ್ಧಿವಂತಿಕೆ, ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇದೀಗ ಇಂತಹದ್ದೇ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಚಿತ್ರದಲ್ಲಿ ಅಡಗಿರುವ ಸ್ಮೈಲಿ ಫೇಸನ್ನು ನೀವು ಕೇವಲ ಐದು ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು, ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ.

ಬುದ್ಧಿ ಹಾಗೂ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ (social media) ಹರಿದಾಡುತ್ತಿರುತ್ತವೆ. ಕೆಲವರು ಇಂತಹ ಒಗಟಿನ ಚಿತ್ರಗಳನ್ನು ಬಿಡಿಸುವ ಮೂಲಕ ಬಿಡುವಿನ ಸಮಯ ಕಳೆಯುತ್ತಾರೆ. ಆದರೆ ಈ ಟ್ರಿಕ್ಕಿಯಾಗಿರುವ ಒಗಟಿನ ಆಟಗಳನ್ನು ಆಡುವ ಮಜಾನೇ ಬೇರೆ. ಈ ಒಗಟಿನ ಆಟಗಳು ಟೈಮ್ ಪಾಸ್ ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮ ನೀಡುವ ಮೂಲಕ ಬ್ರೈನ್ ಶಾರ್ಪ್ (brain sharp) ಆಗಿಸುತ್ತದೆ. ತಾಳ್ಮೆ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸುತ್ತದೆ. ಇದೀಗ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಸ್ಮೈಲಿ ಫೇಸನ್ನು ನೀವು ಕಂಡು ಹಿಡಿಯಬೇಕು. ಆದರೆ ನಿಮಗಿರುವ ಸಮಯವಕಾಶ ಕೆಲವೇ 6 ಸೆಕೆಂಡುಗಳು ಮಾತ್ರ, ಇದೀಗ ಚಾಲೆಂಜ್ ಸ್ವೀಕರಿಸಲು ರೆಡಿ ಇದ್ದೀರಾ ಅಂತಾದ್ರೆ ಈ ಚಿತ್ರಗಳತ್ತ ಒಮ್ಮೆ ಕಣ್ಣಾಯಿಸಿ.
ಈ ಚಿತ್ರದಲ್ಲಿ ಏನಿದೆ?
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಧಿ ಪೆಟ್ಟಿಗೆ, ಲ್ಯಾಂಪ್, ಗಡಿಯಾರ ಸೇರಿದಂತೆ ವಿವಿಧ ವಸ್ತುಗಳ ರಾಶಿಯೇ ಇದೆ. ಇದರ ನಡುವೆ ಒಂದು ಸ್ಮೈಲಿ ಫೇಸ್ ಅಡಗಿದೆ. ಆರು ಸೆಕೆಂಡುಗಳಲ್ಲಿ ಇದನ್ನು ಪತ್ತೆ ಹಚ್ಚುವ ಸವಾಲನ್ನು ನಿಮಗೆ ನೀಡಲಾಗಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಇದಕ್ಕೆ ಉತ್ತರವನ್ನು ನಿರ್ದಿಷ್ಟ ಸಮಯದೊಳಗೆ ಕಂಡು ಕೊಳ್ಳಿ.
ಉತ್ತರ ಇಲ್ಲಿದೆ
ಐದು ಸೆಕೆಂಡುಗಳು ಅಲ್ಲ, ಹದಿನೈದು ನಿಮಿಷಗಳಾದರೂ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ, ನೀವು ಹೆಚ್ಚು ಚಿಂತಿಸಬೇಡಿ. ನಾವು ನಿಮಗೆ ಒಂದು ಸಣ್ಣ ಸುಳಿವನ್ನು ನೀಡುತ್ತೇವೆ. ಮ್ಯಾಜಿಕ್ ಲ್ಯಾಂಪ್ ಬಳಿಯ ಪ್ರದೇಶದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಆದರೆ ನಿಮ್ಮ ಕಣ್ಣುಗಳನ್ನು ಮೋಸಗೊಳಿಸುವಂತೆ ಸ್ಮೈಲಿ ಫೇಸನ್ನು ಮಿಶ್ರಣ ಮಾಡಲಾಗಿದೆ. ಆದರೆ ನಾವು ಈ ಚಿತ್ರದಲ್ಲಿ ಬಿಳಿ ಬಣ್ಣದ ಗೆರೆ ಎಳೆದು ಉತ್ತರವನ್ನು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ