ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಈ ಮೂರು ಆಹಾರಗಳು
ದೇಹದಲ್ಲಿ ಕಬ್ಬಿಣದ ಅಂಶಗಳನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಕ್ಲಿನಿಕಲ್ ಪೌಷ್ಟಿಕತಜ್ಞೆ ರಿದ್ಧಿ ಪಟೇಲ್ ತಿಳಿಸಿದ್ದಾರೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ, ರಕ್ತದ ಕಣಗಳ ಹರಿವು ಕಡಿಮೆ ಆಗುತ್ತದೆ. ಇದರಿಂದ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹಾರೋಗ್ಯ ಕಾಪಾಡಿಕೊಳ್ಳುವಲ್ಲಿ ಕಬ್ಬಿಣಾಂಶ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಕಬ್ಬಿಣದ ಅಂಶಗಳನ್ನು ಹೆಚ್ಚಿಸಲು ಈ ಕೆಲವು ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು.

ದೇಹದಲ್ಲಿ ಉತ್ತಮ ರಕ್ತ ಹರಿವು, ಕಬ್ಬಿಣದ ಅಂಶಗಳು (iron levels) ಸರಿಯಾಗಿರಬೇಕೆಂದರೆ ಉತ್ತಮ ಆಹಾರ ಪದ್ಧತಿಯನ್ನು ಸಹ ಪಾಲಿಸಬೇಕು. ಹೌದು ದೇಹ ಸರಿಯಾಗಿ ಕೆಲಸ ಮಾಡಬೇಕಾದರೆ ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಈ ಎಲ್ಲದಕ್ಕಿಂತಲ್ಲೂ ದೇಹದಲ್ಲಿ ಕಬ್ಬಿಣದ ಅಂಶಗಳು ಇಲ್ಲವೆಂದರೆ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತಹೀನತೆ ಎಂದರೆ ರಕ್ತದಲ್ಲಿ ಆರೋಗ್ಯಕರ ರಕ್ತ ಕಣಗಳು ಕಡಿಮೆಯಾಗುವ ಪ್ರಕ್ರಿಯೆಯಾಗಿದೆ. ಈ ರಕ್ತ ಕಣಗಳು ದೇಹದ ಎಲ್ಲ ಭಾಗಗಳಿಗೂ ಆಮ್ಲಜನಕವನ್ನು ಸಾಗಿಸಲು ಕೆಲಸ ಮಾಡುತ್ತವೆ. ಒಂದು ವೇಳೆ ದೇಹದಲ್ಲಿ ಕಬ್ಬಿಣದ ಅಂಶಗಳು ಕಡಿಮೆಯಾದರೆ, ರಕ್ತಹೀನತೆ ಉಂಟಾಗುತ್ತದೆ. ನಂತರ ದೇಹದಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಇದರಿಂದ ಯಾವಾಗಲೂ ಆಯಾಸ, ತಲೆತಿರುಗುವಿಕೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುವ ಆಹಾರಗಳನ್ನು ಸೇವನೆ ಮಾಡಬೇಕು. ಅದಕ್ಕಾಗಿ ಕ್ಲಿನಿಕಲ್ ಪೌಷ್ಟಿಕತಜ್ಞೆ ರಿದ್ಧಿ ಪಟೇಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ರಿದ್ಧಿ ಪಟೇಲ್ ನೀವು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದರೆ, ಈ 3 ವಿಷಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ದೇಹವು ಈ ವಸ್ತುಗಳಿಂದ ಸಾಕಷ್ಟು ಕಬ್ಬಿಣಾಂಶವನ್ನು ಪಡೆಯುತ್ತದೆ. ಅವುಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಕಬ್ಬಿಣಾಂಶ ಹೆಚ್ಚಿಸಲಯ ಸಹಕಾರಿ ಈ ಆಹಾರಗಳು:
- ಬಿಳಿ ಮತ್ತು ಕಪ್ಪು ಎಳ್ಳು : 100 ಗ್ರಾಂ ಎಳ್ಳು 14 ರಿಂದ 16 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ನೀವು ಪ್ರತಿದಿನ 1-2 ಟೀ ಚಮಚ ಹುರಿದ ಎಳ್ಳನ್ನು ತಿನ್ನಬಹುದು. ಇದನ್ನು ಚಟ್ನಿ, ಲಡ್ಡು ಮಾಡಿ ಕೂಡ ತಿನ್ನಬಹುದು. ಹಾಗೂ ಇದನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
- ರಾಜಗಿರಾ ಧಾನ್ಯ: ರಾಜಗಿರಾ ಎಂಬ ಸಣ್ಣ ಧಾನ್ಯಗಳು ಕಬ್ಬಿಣಾಂಶದ ಉಗ್ರಾಣವಾಗಿದೆ. ಇದನ್ನು ಗಂಜಿಯಂತೆ ಬೇಯಿಸಿ ತಿನ್ನಬಹುದು, ಲಡ್ಡು ಮಾಡಿಕೊಂಡು ತಿನ್ನಲು ಇನ್ನು ರುಚಿಯಾಗಿರುತ್ತದೆ. ಇಲ್ಲದಿದ್ದರೆ ರೊಟ್ಟಿ ಮಾಡಿಕೊಂಡು ಕೂಡ ತಿನ್ನಬಹುದು. ಕಬ್ಬಿಣದಿಂದ ಸಮೃದ್ಧವಾಗಿರುವುದರ ಜೊತೆಗೆ, ಈ ಧಾನ್ಯಗಳು ಕೊಬ್ಬು ಮುಕ್ತವೂ ಆಗಿವೆ.
- ಉದ್ದಿನ ಬೇಳೆ : 100 ಗ್ರಾಂ ಉದ್ದಿನ ಬೇಳೆಯಲ್ಲಿ 7 ರಿಂದ 9 ಮಿಗ್ರಾಂ ಕಬ್ಬಿಣಾಂಶವಿರುತ್ತದೆ. ಇದನ್ನು ಯಾವುದಕ್ಕೂ ಬೇಕಾದರೂ ಉಪಯೋಗಿಸಿಕೊಂಡು ಸೇವನೆ ಮಾಡಬಹುದು. ದೋಸೆ, ಇಡ್ಲಿ, ಹೀಗೆ ಉದ್ದಿನ ಬೇಳೆಯಿಂದ ಏನೆಲ್ಲ ಮಾಡಬಹುದು ಅದನ್ನು ಸೇವನೆ ಮಾಡಬಹುದು. ಹಾಗೂ ಇತರ ದ್ವಿದಳ ಧಾನ್ಯಗಳೊಂದಿಗೆ ಬೆರೆಸಿ ತಿನ್ನಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡಿ, ನಿಮ್ಮ ರಹಸ್ಯ ಸ್ವಭಾವ ಹೇಗಿದೆಯಂತ ಪರೀಕ್ಷಿಸಿ
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕಬ್ಬಿಣದ ಅಂಶ ಹೀರಿಕೊಳ್ಳುವಿಕೆ ಹೇಗೆ ಹೆಚ್ಚಿಸುವುದು
ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು, ಊಟದ ನಂತರ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ. ಇನ್ನೊಂದು ವಿಧದಲ್ಲಿ ಕಬ್ಬಿಣದ ಸತ್ವವನ್ನು ವಿಟಮಿನ್ ಸಿ ಜೊತೆ ಸೇವಿಸಬಹುದು. ಕಬ್ಬಿಣದ ಸತ್ವವನ್ನು ನಿಂಬೆ, ಟೊಮೆಟೊ ಅಥವಾ ನೆಲ್ಲಿಕಾಯಿಯೊಂದಿಗೆ ಸೇವಿಸಿದರೆ, ದೇಹವು ಕಬ್ಬಿಣಾಂಶವನ್ನು ಉತ್ತಮವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ