AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ

ಎರಡು ಕಪ್​​ ಕಾಫಿಯಿಂದ ನಿಮಗೆ ವಯಸ್ಸಾಗುವುದನ್ನು ಮರೆಮಾಚಬಹುದು ಎಂದು ಸಂಶೋಧನೆ ಹೇಳಿದೆ. ಹೌದು ಕಾಫಿ ಕುಡಿಯುವುದರಿಂದ ನೀವು ಯೌವನಯುತವಾಗಿ ಕಾಣಬಹುದು ಮತ್ತು ದೀರ್ಘಕಾಲದವರೆಗೆ  ಚಿರ ಯುವಕರಂತೆ ಕಾಣುತ್ತೀರಿ ಎಂಬುದನ್ನು ಈ ಸಂಶೋಧನೆ ಹೇಳಿದೆ.  ಇದು ಕಾಫಿ ಪ್ರೀಯರಿಗೆ ಗುಡ್​​​ನ್ಯೂಸ್.​​​ ಆದರೆ ಇದನ್ನು ಎಷ್ಟು ಬಾರಿ ಕುಡಿಯಬೇಕು? ಹಾಗೂ ಯಾವ ಸಮಯದಲ್ಲಿ, ಯಾರು ಹೆಚ್ಚು ಕುಡಿಯಬಾರದು ಎಂಬ ವಿಚಾರವನ್ನು ತಿಳಿಯಿರಿ.

ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ
ಕಾಫಿ Image Credit source: pinterest
ಮಾಲಾಶ್ರೀ ಅಂಚನ್​
|

Updated on: Jul 03, 2025 | 6:20 PM

Share

ಈ ಒತ್ತಡದ ಜೀವನದಲ್ಲಿ ವಯಸ್ಸಾಗುವ ಚಿಂತೆ ಅನೇಕರಿಗೆ ಕಾಡುತ್ತಿದೆ. 30-35 ವಯಸ್ಸಿಗೆ, 40-50ರಂತೆ ಕಾಣುತ್ತೇವೆ ಎಂಬ ಚಿಂತೆ ಪ್ರಾರಂಭವಾಗಿದೆ. ಇದಕ್ಕೆಲ್ಲಾ ಜೀವನಶೈಲಿ ಹಾಗೂ ಒತ್ತಡ ಎನ್ನುವುದು ಒಂದು ಕಾರಣವಾಗಿದೆ.  ಹೀಗಿರುವಾಗ ವಯಸ್ಸಾದಂತೆ ಕಾಣಬಾರದೆಂದರೆ ಈ ಅಭ್ಯಾಸವನ್ನು ಪಾಲಿಸಲೇಬೇಕು. ದಿನಗಳಲ್ಲಿ ಹೆಚ್ಚಿನ ಜನರು ಕಾಫಿ ಕುಡಿಯುವ (Coffee) ಅಭ್ಯಾಸವನ್ನು ಹೆಚ್ಚಾಗಿ ಬೆಳೆಸಿಕೊಂಡಿರುತ್ತಾರೆ. ಈ  ಕಾಫಿ ನಾಲಿಗೆಗೆ ರುಚಿ ಮಾತ್ರವಲ್ಲ ವಯಸ್ಸಾಗುವಿಕೆ ವಿರೋಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹೀಗೆ ಈ  ಕಾಫಿ ಕುಡಿಯುವುದರಿಂದ ನೀವು ಯೌವನಯುತವಾಗಿ ಕಾಣಬಹುದು ಮತ್ತು ದೀರ್ಘಕಾಲದವರೆಗೆ  ಚಿರ ಯುವಕರಂತೆ ಕಾಣುತ್ತೀರಿ ಎಂಬುದನ್ನು ಇತ್ತೀಚಿಗಿನ ಸಂಶೋಧನೆ ಹೇಳಿದೆ.

ಸಂಶೋಧನೆ ಹೇಳೋದೇನು?

ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌  ನಡೆಸಿದ ಸಂಶೋಧನೆ ಪ್ರಕಾರ, ಪ್ರತಿದಿನ ಕಾಫಿ ಕುಡಿಯುವುದರಿಂದ ವಯಸ್ಸಾದವರಲ್ಲಿ  ದೌರ್ಬಲ್ಯದ ಅಪಾಯವನ್ನು ಕಡಿಮೆ ಮಾಡಬಹುದು. ಈ ಸಂಶೋಧನೆಯಲ್ಲಿ ನೆದರ್‌ಲ್ಯಾಂಡ್ಸ್‌ನ 55 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಪ್ರಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಈ ಜನರಿಗೆ ಪ್ರತಿದಿನ 2 ರಿಂದ 4 ಕಪ್ ಕಾಫಿ ಕುಡಿಯಲು ನೀಡಲಾಯಿತು. ಒಂದು ನಿರ್ದಿಷ್ಟ ಸಮಯದ ನಂತರ, ಎಲ್ಲಾ ಜನರಲ್ಲಿ ದೈಹಿಕ ದೌರ್ಬಲ್ಯದ ಲಕ್ಷಣಗಳು ಕಡಿಮೆಯಾಗುವುದು ಕಂಡುಬಂದಿದೆ. ಇದು ಅವರ ಚರ್ಮದಲ್ಲಿ ಗೋಚರಿಸಿದೆ.

ಕಾಫಿಯು ವಯಸ್ಸಾಗುವಿಕೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳೇ ಈ ವಯಸ್ಸಾಗುವಿಕೆಯನ್ನು ತಡೆಯುತ್ತದೆ ಎಂದು ಹೇಳಿದೆ. ಇದು ಸ್ನಾಯುಗಳನ್ನು ರಕ್ಷಿಸುವಲ್ಲಿ ಮತ್ತು ಚಯಾಪಚಯ ಆರೋಗ್ಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿದೆ. ಈ ಎಲ್ಲವೂ ವೃದ್ಧಾಪ್ಯದಲ್ಲಿ ದೈಹಿಕ ಕ್ಷೀಣತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮೈಕ್ರೋಬಿಯಲ್ ಸೆಲ್‌ನಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನೆ ಪ್ರಕಾರ,ಕಾಫಿಯಲ್ಲಿರುವ ಕೆಫೀನ್ ಕೆಲವು ಜೀವಕೋಶಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಡಿಎನ್‌ಎ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಸಂಶೋಧಕರು ಯೀಸ್ಟ್ ಕೋಶಗಳ ಮೇಲೆ ಒಂದು ಪ್ರಯೋಗವನ್ನು ನಡೆಸಿದ್ದು, ಜೀವಕೋಶಗಳು ಈಗಾಗಲೇ ಆರೋಗ್ಯಕರವಾಗಿದ್ದರೆ, ಕೆಫೀನ್ ಆ ಜೀವಕೋಶಗಳ ಜೀವಿತಾವಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಆದರೆ ಒಂದು ಜೀವಕೋಶದ ಡಿಎನ್ಎ ಈಗಾಗಲೇ ಹಾನಿಗೊಳಗಾಗಿದ್ದರೆ, ಕೆಫೀನ್ ಅದನ್ನು ಮತ್ತಷ್ಟು ಹದಗೆಡಿಸಬಹುದು. ಹಾಗೂ ದೇಹದ ಆಂತರಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಕಾಫಿ ಅದನ್ನು ಸರಿ ಮಾಡುವ ಬದಲು ಮತ್ತಷ್ಟು ಹಾನಿಯನ್ನುಂಟುಮಾಡಬಹುದು. ಸರಿಯಾದ ಪ್ರಮಾಣದಲ್ಲಿ ಕಾಫಿಯನ್ನು ಕುಡಿಯುವುದು ಬಹಳ ಮುಖ್ಯ.

ಇದನ್ನೂ ಓದಿ: ಶಾಪಿಂಗ್‌ ಮಾಡುವಾಗ ಹಣ ಹೆಚ್ಚು ಖರ್ಚು ಆಗ್ಬಾರ್ದು ಎಂದ್ರೆ ಈ ಸಲಹೆ ಪಾಲಿಸಿ

ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯಬೇಕು?

ಮೈಕ್ರೋಬಿಯಲ್ ಸೆಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಆರೋಗ್ಯವಾಗಿದ್ದರೆ, ಪ್ರತಿದಿನ 2 ರಿಂದ 4 ಕಪ್ ಕಾಫಿ ಕುಡಿಯುವುದರಿಂದ ನಿಮ್ಮ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ಒಂದು ಕಪ್’ ಕಾಫಿ ಎಂದರೆ 125 ಮಿಲಿ ಎಂದು ಸಂಶೋಧನೆ ಹೇಳುತ್ತದೆ. ಆದರೆ ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ