ಶನಿ ದೇವರಿಂದ ನೀವು ಕಲಿಯಲೇಬೇಕಾದ ಜೀವನ ಪಾಠಗಳಿವು
ಶನಿ ದೇವರನ್ನು ನ್ಯಾಯದ ದೇವರು ಮತ್ತು ಕರ್ಮಫಲದಾತ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಶನಿ ದೇವರು ನಮ್ಮ ಕ್ರಿಯೆಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತಾರೆ, ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ತಕ್ಕ ಫಲಿತಾಂಶಗಳನ್ನು ನೀಡುತ್ತಾರೆ. ಕರ್ಮಫಲದಾತನಿಂದ ಕಲಿಯಬೇಕಾದ ಜೀವನ ಪಾಠಗಳು ಕೂಡ ಹಲವಿದೆ. ಹಾಗಾದರೆ ಶನಿ ದೇವರಿಂದ ಕಲಿಯಬೇಕಾದ ಜೀವನ ಪಾಠಗಳು ಯಾವುವು ಎಂಬುದನ್ನು ನೋಡೋಣ.

ಶನಿ (Shani) ನ್ಯಾಯದ ದೇವರು. ಶನಿ ಯಾವಾಗಲೂ ಕರ್ಮದ ಆಧಾರದ ಮೇಲೆ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೀಡುತ್ತಾರೆ. ಕರ್ಮಕ್ಕನುಸಾರವಾಗಿ ಎಲ್ಲರಿಗೂ ಫಲವನ್ನು ಕೊಡುತ್ತಾರೆ ಎಂದು ಹೇಳಲಾಗುತ್ತದೆ. ಶನಿ ದೇವರ ಕೆಂಗಣ್ಣಿಗೆ ಗುರಿಯಾದರೆ ಕಷ್ಟದ ಮೇಲೆ ಕಷ್ಟ ಅನುಭವಿಸಬೇಕಾಗುತ್ತದೆ. ಅದೇ ಅವರ ಕೃಪೆ ನಿಮ್ಮ ಮೇಲಿದ್ದರೆ ನಿಧಾನವಾದರೂ ಸರಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗಿರುವಾಗ ಶನಿ ದೇವರ ಕೃಪೆಗೆ ಪಾತ್ರರಾಗಬೇಕೆಂದರೆ ಶನಿ ದೇವರ ಈ ಜೀವನ ಪಾಠಗಳನ್ನು (Life Lesson) ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.
ಶನಿ ದೇವರಿಂದ ಕಲಿಯಲೇಬೇಕಾದ ಜೀವನ ಪಾಠಗಳು:
ತೊಂದರೆಗಳನ್ನು ಎದುರಿಸುವುದು: ಕೆಲವೊಮ್ಮೆ ಶನಿಯಿಂದ ತೊಂದರೆಗಳು ಉಂಟಾಗಬಹುದು. ಆ ತೊಂದರೆಗಳು ಹಿಂದಿನ ಕರ್ಮಗಳಿಂದ ಉಂಟಾಗುತ್ತವೆ. ಆ ಕಷ್ಟಗಳನ್ನು ಹೇಗೆ ಎದುರಿಸಬೇಕೆಂಬುದನ್ನು ಶನಿಯು ನಮಗೆ ಕಲಿಸುತ್ತಾರೆ. ಹೀಗೆ ಕಷ್ಟ ತೊಂದರೆಗಳನ್ನು ಎದುರಿಸುವ ಕಲೆ ಗೊತ್ತಿದ್ದರೆ ನಾವು ಬಲಶಾಲಿಯಾಗಬಹುದು.
ಶಿಸ್ತು: ಶನಿ ದೇವರು ಶಿಸ್ತನ್ನು ಸಹ ಕಲಿಸುತ್ತಾರೆ. ಸಮಯಕ್ಕೆ ಅನುಗುಣವಾಗಿ ಎಲ್ಲಿ ಹೇಗೆ ಇರಬೇಕು, ಯಾವ ಕೆಲಸಗಳನ್ನು ಮಾಡಬೇಕು ಎಂಬ ಶಿಸ್ತಿನ ಪಾಠವನ್ನು ಶನಿಯಿಂದ ಕಲಿಯಬಹುದು.
ತಾಳ್ಮೆ: ಶನಿಯಿಂದ ನಾವು ತಾಳ್ಮೆ ಮತ್ತು ಸಹಿಷ್ಣುತೆಯನ್ನು ಕಲಿಯಬಹುದು. ಅದೇ ರೀತಿ ಶನಿ ದೇವರಿಂದ ಪರಿಶ್ರಮದ ಪಾಠವನ್ನು ಸಹ ಕಲಿಯಿರಿ. ಅಲ್ಲದೆ ಸವಾಲುಗಳನ್ನು ಎದುರಿಸುವ ಮೂಲಕ ತಾಳ್ಮೆಯ ಜೊತೆಗೆ ಜವಬ್ದಾರಿಯನ್ನು ಕಲಿಯಬಹುದು.
ಜವಾಬ್ದಾರಿ: ಜೀವನದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಶನಿಯಿಂದ ನಾವು ಜವಾಬ್ದಾರಿಯುತವಾಗಿ ವರ್ತಿಸುವುದು ಹೇಗೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಯಬಹುದು.
ಇದನ್ನೂ ಓದಿ: ಪ್ರತಿಯೊಬ್ಬರೂ ರಾಮಾಯಣದ ಈ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಆತ್ಮಾವಲೋಕನ: ಶನಿಯು ವ್ಯಕ್ತಿಗೆ ತಮ್ಮ ತಪ್ಪುಗಳು ಮತ್ತು ನ್ಯೂನ್ಯತೆಗಳನ್ನು ಗುರುತಿಸಲು ಮತ್ತು ಆ ತಪ್ಪುಗಳನ್ನು ತಿದ್ದಿ, ಉತ್ತರ ರೀತಿಯಲ್ಲಿ ಬದುಕಲು ಅವಕಾಶವನ್ನು ನೀಡುತ್ತಾರೆ. ಅಲ್ಲದೆ ನಾವು ಸತ್ಯ ದಾರಿಯಲ್ಲಿ ನಡೆಯಬೇಕು, ಸತ್ಯ ದಾರಿಯಲ್ಲಿ ನಡೆದರೆ ಮಾತ್ರ ಜೀವದಲ್ಲಿ ಒಳ್ಳೆಯದಾಗುತ್ತದೆ ಎಂಬ ಜೀವನ ಪಾಠವನ್ನು ಶನಿ ದೇವರಿಂದ ಕಲಿಯಬಹುದು.
ಕರ್ಮದ ಪಾಠಗಳು: ಶನಿಯು ಕರ್ಮಕ್ಕೆ ಸಂಬಂಧಿಸಿದ್ದು, ನಮ್ಮ ಕ್ರಿಯೆಗಳ ಮೇಲೆ ಪರಿಣಾಮಗಳನ್ನು ಎತ್ತಿ ಶನಿಯು ತೋರಿಸುತ್ತಾರೆ. ಒಳ್ಳೆದು ಮಾಡಿದ್ರೆ ಒಳ್ಳೆಯದೇ ಆಗುತ್ತೆ, ಒಬ್ಬರಿಗೆ ಕೆಟ್ಟದು ಮಾಡಿದರೆ ಕೆಟ್ಟದ್ದೇ ಆಗುತ್ತೇ ಎಂಬ ಕರ್ಮದ ಪಾಠವನ್ನು ಶನಿ ದೇವರಿಂದ ಕಲಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ