Personality Test: ಈ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡಿ, ನಿಮ್ಮ ರಹಸ್ಯ ಸ್ವಭಾವ ಹೇಗಿದೆಯಂತ ಪರೀಕ್ಷಿಸಿ
ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತಿರುತ್ತವೆ. ಈ ಪರ್ಸನಾಲಿಟಿ ಟೆಸ್ಟ್ ಮೂಲಕ ನೀವು ಸಹ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಈ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡುವ ಮೂಲಕ ನೀವೆಷ್ಟು ಸ್ವಾಭಿಮಾನಿ ಎಂಬುದನ್ನು ಪರೀಕ್ಷಿಸಿ.

ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮೂಲಕ ನಮ್ಮ ಭವಿಷ್ಯ, ಗುಣಸ್ವಭಾವವನ್ನು ತಿಳಿದುಕೊಳ್ಳುವಂತೆ, ಸಾಮುದ್ರಿಕ ಶಾಸ್ತ್ರ, ದೇಹಕಾರ ಸೇರಿದಂತೆ ವ್ಯಕ್ತಿತ್ವ ಪರೀಕ್ಷೆಯ ವಿವಿಧ ವಿಧಾನಗಳ ಮೂಲಕ ನಮ್ಮ ಗುಣ ಸ್ವಭಾವ, ನಿಗೂಢ ವ್ಯಕ್ತಿತ್ವ ಹೇಗಿದೆಯೆಂದು ನಾವೇ ಪರೀಕ್ಷೆ ಮಾಡಬಹುದು. ವ್ಯಕ್ತಿತ್ವ ಪರೀಕ್ಷೆಯ (Personality Test) ಇಂತಹ ಸಾಕಷ್ಟು ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ಮುಖಾಂತರ ನೀವು ಕೂಡಾ ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಮೇಲೆ ಕಾಣಿಸುವ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡುವ ಮೂಲಕ ನೀವೆಷ್ಟು ಸ್ವಾಭಿಮಾನಿ (self-esteem) ಎಂಬುದನ್ನು ಪರೀಕ್ಷಿಸಿ.
ನಿಮ್ಮ ಗುಣ ಸ್ವಭಾವವನ್ನು ಹೀಗೂ ತಿಳಿಯಬಹುದು:
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ನಂತ ಫೋಟೋ, ವಿಡಿಯೋಗಳ ಮೂಲಕ ನೀವು ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಆದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಮೇಲೆ ಕಾಣಿಸುವ ಚಿತ್ರದ ಪ್ರಾಣಿಗಳ ಪಟ್ಟಿಯಲ್ಲಿ ನಿಮ್ಮಿಷ್ಟದ ಒಂದು ಪ್ರಾಣಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ನೀವೇ ಪರೀಕ್ಷಿಸಿಕೊಳ್ಳಿ. ಮೇಲಿನ ಚಿತ್ರದಲ್ಲಿ ಕರಡಿ, ಸಿಂಹ, ಹದ್ದು, ನರಿ, ಜಿಂಕೆ ಈ ಪ್ರಾಣಿಗಳಿದ್ದು, ಇವುಗಳಲ್ಲಿ ನಿಮ್ಮಿಷ್ಟದ ಜೀವಿಯನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ.
ಕರಡಿ: ನೀವು ಕರಡಿಯನ್ನು ಆಯ್ಕೆ ಮಾಡಿದರೆ, ನೀವು ನಿಷ್ಠಾವಂತ ವ್ಯಕ್ತಿಯೆಂದು ಅರ್ಥ. ನೀವು ನಿಮ್ಮ ಪ್ರೀತಿಪಾತ್ರರ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿದವರಾಗಿದ್ದೀರಿ. ಅವರ ಯೋಗಕ್ಷೇಮಕ್ಕೆ ಮೊದಲ ಆದ್ಯತೆಯನ್ನು ನೀಡುವ ನೀವು, ಅವರ ಕಷ್ಟದ ಸಮಯದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೀರಿ. ಹೀಗೆ ಇತರರಿಗೆ ಸಾಕಷ್ಟು ಆದ್ಯತೆ ನೀಡುವ ಕಾರಣ ಕೆಲವು ಬಾರಿ ನಿಮಗೆ ಬಹಳ ಕಡಿಮೆ ಸ್ವಾಭಿಮಾನ ಇದೆಯೋ ಎಂಬುದನ್ನು ತೋರಿಸುತ್ತದೆ.
ಸಿಂಹ: ನಿಮ್ಮ ಆಯ್ಕೆ ಸಿಂಹವಾಗಿದ್ದರೆ, ನೀವು ದಿಟ್ಟ ಮತ್ತು ಸೃಜನಶೀಲ ಮನಸ್ಥಿತಿಯನ್ನು ಹೊಂದಿರುವವರೆಂದು ಅರ್ಥ. ಸಿಂಹಗಳು ನವೀನ ವಿಚಾರಗಳ ಮೂಲಕ ಮುನ್ನಡೆಯುವಲ್ಲಿ ಮತ್ತು ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವಲ್ಲಿ ಶ್ರೇಷ್ಠವಾಗಿರುವಂತೆ, ನೀವು ಸಹ ಸೃಜನಶೀಲತೆಯನ್ನು ಹೊಂದಿದವರಾಗಿದ್ದೀರಿ. ಆದರೆ ನೀವು ಕೆಲವೊಂದು ಬಾರಿ ಬಾಹ್ಯ ಟೀಕೆಗಳಿಗೆ ಗುರಿಯಾಗಬಹುದು. ಇತರರ ಅಭಿಪ್ರಾಯವನ್ನು ಲೆಕ್ಕಿಸದೆ ನೀವು ಮುನ್ನಡೆಯುವುದನ್ನು ಕಲಿಯಬೇಕು.
ಹದ್ದು: ಈ ಚಿತ್ರದಲ್ಲಿ ನೀವು ಹದ್ದನ್ನು ಆಯ್ಕೆ ಮಾಡಿದರೆ ನೀವು ತೀಕ್ಷ್ಣವಾದ ಅಂತಃಪ್ರಜ್ಞೆ ಮತ್ತು ವೀಕ್ಷಣಾ ಕೌಶಲ್ಯವನ್ನು ಹೊಂದಿರುವವರೆಂದು ಅರ್ಥ. ನೀವು ಅತಿ ಸೂಕ್ಷ್ಮವಾದ ವಿಚಾರಗಳನ್ನು ಸಹ ಸುಲಭವಾಗಿ ಗ್ರಹಿಸುತ್ತೀರಿ. ಈ ನಿಮ್ಮ ಗುಣ ಸಂಕೀರ್ಣ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಹಾಯಕವಾಗಿದೆ. ಅಲ್ಲದೆ ನಿಮಗೆ ಅತಿಯಾದ ಆತ್ವವಿಶ್ವಾಸವಿದೆ.
ಇದನ್ನೂ ಓದಿ: ಮಹಿಳೆ, ಎಲೆ : ಈ ಚಿತ್ರದಲ್ಲಿ ಮೊದಲು ಕಂಡದ್ದು ಹೇಳುತ್ತೆ ನಿಮ್ಮ ನೈಜ ವ್ಯಕ್ತಿತ್ವ
ನರಿ: ನಿಮ್ಮ ಆಯ್ಕೆ ನರಿಯಾಗಿದ್ದರೆ ನೀವು ದೃಢತೆ ಮತ್ತು ಉತ್ತಮ ಕಾರ್ಯತಂತ್ರದ ಚಿಂತನೆಯನ್ನು ಹೊಂದಿರುವವರೆಂದು ಅರ್ಥ. ನೀವು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುವ ಮೂಲಕ ನೀವು ಎಂತಹದ್ದೇ ಸ್ವಾಲುಗಳನ್ನು ಬೇಕಾದರೂ ಎದುರಿಸುತ್ತೀರಿ. ಕಾರ್ಯತಂತ್ರ ವಿಧಾನಗಳೊಂದಿಗೆ ನೀವು ಶ್ರಮಿಸುತ್ತೀರಿ. ಈ ಸ್ವಭಾವ ನಿಮ್ಮ ಸಾಧನೆಗೂ ಅನುವು ಮಾಡಿಕೊಡುತ್ತದೆ.
ಜಿಂಕೆ: ನಿಮ್ಮ ಆಯ್ಕೆ ಜಿಂಕೆಯಾಗಿದ್ದರೆ, ನೀವು ಸೌಮ್ಯ ಸ್ವಭಾವದವರೆಂದು ಅರ್ಥ. ನೀವು ನಿಮ್ಮ ಈ ಮೃದು ಅವಭಾವದಿಂದಲೇ ಎಲ್ಲರನ್ನೂ ಆಕರ್ಷಿಸುತ್ತೀರಿ. ಅಲ್ಲದೆ ನೀವು ಇತರರ ಬಗ್ಗೆ ಅತಿಯಾದ ಕಾಳಜಿಯನ್ನು ವಹಿಸುತ್ತೀರಿ, ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ನಿಮ್ಮ ಕೈಲಾದಷ್ಟು ಸಹಾಯವನ್ನು ನೀವು ಮಾಡುತ್ತೀರಿ. ನೀವು ಇತರರ ಬಗ್ಗೆ ಸಾಕಷ್ಟು ದಯೆಯ ಸ್ವಭಾವವನ್ನು ಹೊಂದಿದ್ದೀರಿ. ಅದೇ ರೀತಿ ನೀವು ನಿಮ್ಮ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯಗತ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ