AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹುಡುಗಿ ರಾಶಿ ಆಧಾರದ ಮೇಲೆ ಆಕೆ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಾಳೆ ತಿಳಿಯಿರಿ

ಪ್ರೀತಿ ಎನ್ನುವುದು ಎಲ್ಲರ ಜೀವನದಲ್ಲಿಯೂ ಒಂದೇ ರೀತಿಯಾಗಿ ಇರುವುದಿಲ್ಲ. ವಿಶ್ವಾಸ, ನಂಬಿಕೆ ಇದ್ದಾಗ ಮಾತ್ರ ಯಾವುದೇ ಸಬಂಧವಾಗಲಿ ಗಟ್ಟಿಯಾಗಿ ಉಳಿಯುತ್ತದೆ. ಆದರೆ ಒಂದು ಸಂಬಂಧ ಮುರಿದು ಬೀಳುವುದಕ್ಕೆ ಮೊದಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು, ಅದರಲ್ಲಿಯೂ ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ರಾಶಿ ಭವಿಷ್ಯದ ಆಧಾರದ ಮೇಲೆ ತಿಳಿಯಬಹುದು. ಹಾಗಾದರೆ ಈಗಲೇ ನಿಮ್ಮ ಮನದರಸಿಯ ರಾಶಿ ಯಾವುದು? ಅವರು ಪ್ರೀತಿಸಿದವರ ಜೊತೆ ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಹುಡುಗಿ ರಾಶಿ ಆಧಾರದ ಮೇಲೆ ಆಕೆ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಾಳೆ ತಿಳಿಯಿರಿ
Zodiac Signs and Love
ಪ್ರೀತಿ ಭಟ್​, ಗುಣವಂತೆ
|

Updated on: Jul 04, 2025 | 8:20 PM

Share

ಸ್ನೇಹವಾಗಲಿ, ಪ್ರೀತಿಯಾಗಲಿ ವಿಶ್ವಾಸ, ನಂಬಿಕೆ (trust) ಇಲ್ಲದಿದ್ದರೆ ಸಂಬಂಧ ಮುರಿದು ಬೀಳುತ್ತದೆ. ಇಬ್ಬರ ನಡುವಿನ ಬಾಂಧವ್ಯವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕೂಡಾ ಆ ಸಂಬಂಧ (relationship) ಆಸಕ್ತಿ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಸಂಬಂಧವನ್ನು ಉಳಿಸಿಕೊಳ್ಳುವುದು ಬಲು ಕಷ್ಟ. ಆದ್ದರಿಂದ ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ರಾಶಿ ಭವಿಷ್ಯದ ಆಧಾರದ ಮೇಲೆ ನೀವು ಕಾರಣಗಳನ್ನು ತಿಳಿದುಕೊಳ್ಳಬಹುದು. ಹಾಗಾದರೆ ನಿಮ್ಮ ಪ್ರೇಯಸಿಯ ರಾಶಿ (Zodiac Signs) ಯಾವುದು ಅದರ ಆಧಾರದ ಮೇಲೆ ಕಾರಣ ತಿಳಿಯಿರಿ.

ಮೇಷ

ನಿಮ್ಮ ಪ್ರೇಯಸಿ ಕೂಡ ಮೇಷ ರಾಶಿಯವಳಾಗಿದ್ದರೆ ಅವಳ ಸ್ವಭಾವ ಬಹಳ ಸಂಕುಚಿತವಾದದ್ದು. ಇದನ್ನು ಯಾವುದೇ ಸಂದರ್ಭದಲ್ಲಿಯೂ ಮರೆಯಬಾರದು. ಇಂತಹವರು ಬೇಸರಗೊಂಡರೆ ಎಷ್ಟೇ ಪ್ರೀತಿಸಿದ ವ್ಯಕ್ತಿಯನ್ನಾದರೂ ಬಿಡುವುದಕ್ಕೆ ಹಿಂಜರಿಯುವುದಿಲ್ಲ. ಸಂಬಂಧ ಮುರಿಯಲು ಮೇಷ ರಾಶಿಯವರಿಗೆ ಇದೇ ಮುಖ್ಯ ಕಾರಣವಾಗಿರುತ್ತದೆ.

ವೃಷಭ

ಈ ರಾಶಿಯ ಹುಡುಗಿಯರು ಸಾಮಾನ್ಯವಾಗಿ ಪ್ರೀತಿಯನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಕೊಂಚ ನಿಧಾನ. ನೀವು ಆ ಹುಡುಗಿಯನ್ನು ಒಪ್ಪಿಸಲು ಒಂದೆರಡು ತಿಂಗಳು ಕಾಯಬೇಕು. ಯಾವುದೇ ವಿಷಯವಾಗಿರಲಿ ಅವರನ್ನು ಒತ್ತಾಯಿಸಬಾರದು. ಏಕೆಂದರೆ ಇಂತಹ ನಡವಳಿಕೆಗಳಿಂದ ಈ ರಾಶಿಯವರು ನಿಮ್ಮನ್ನು ಸಂಪೂರ್ಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ. ಜೊತಗೆ ನಿಮ್ಮ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ
Image
ಈ ಚಿತ್ರ ತಿಳಿಸುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
Image
ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ
Image
ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ
Image
ಶಾಪಿಂಗ್‌ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ

ಮಿಥುನ

ಈ ರಾಶಿಯವರು ಯಾವಾಗಲೂ ಉತ್ಸಾಹದಿಂದ ಇರಲು ಇಷ್ಟಪಡುತ್ತಾರೆ. ಇಂತಹ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ವಿಫಲವಾದರೆ, ಚಿಂತಿಸುವುದಕ್ಕಿಂತ ಬದುಕಿನಲ್ಲಿ ಹೊಸಬರಿಗಾಗಿ ಹುಡುಕಾಟ ಪ್ರಾರಂಭಿಸುತ್ತಾರೆ.

ಕರ್ಕ

ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಹೆಚ್ಚು ಹೃದಯವಂತರಾಗಿರುತ್ತಾರೆ. ಆದರೆ ಯಾವ ವ್ಯಕ್ತಿಗಳನ್ನು ಬಹುಬೇಗ ನಂಬುವುದಿಲ್ಲ. ಸುಳ್ಳು ಹೇಳುವವರನ್ನು ಕಂಡರೆ ಈ ರಾಶಿಯವರು ಅವರಿಂದ ಹಿಂದೆ ಸರಿಯುತ್ತಾರೆ.

ಸಿಂಹ

ಈ ರಾಶಿಯ ಹುಡುಗಿಯರು ಡೇಟಿಂಗ್​ ಮಾಡುವುದನ್ನು ಇಷ್ಟಪಡುತ್ತಾರೆ. ಈ ರಾಶಿಯವರಿಂದ ನೀವು ದೂರ ಹೋದರೆ ನಿಮ್ಮ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ವಿವಿಧ ರೀತಿಯ ಉಡುಗೊರೆ, ಹೂವುಗಳನ್ನು ನೀಡಿದರೆ ಈ ರಾಶಿಯವರು ಬಹುಬೇಗ ಪ್ರೀತಿಯಲ್ಲಿ ಬೀಳುತ್ತಾರೆ.

ಕನ್ಯಾ

ಈ ರಾಶಿಯವರು ಡೇಟಿಂಗ್​ ಬಗ್ಗೆ ಬಹಳ ಗಂಭೀರವಾಗಿರುತ್ತಾರೆ. ಬೇರೆಯವರೊಂದಿಗೆ ಸಂಬಂಧ ಬೆಳೆಸುವಾಗ ಹೆಚ್ಚು ಯೋಚಿಸುತ್ತಾರೆ ಮತ್ತು ಜೀವನದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ಪ್ರೀತಿಯಲ್ಲಿ ನಂಬಿಕೆ ದ್ರೋಹವಾದರೆ, ಅಥವಾ ಆಸಕ್ತಿರಹಿತವಾದ ವರ್ತನೆ ಕಂಡಲ್ಲಿ ನಿಮ್ಮ ಪಾಡಿಗೆ ನಿಮ್ಮನ್ನು ಬಿಟ್ಟುಬಿಡುತ್ತಾರೆ.

ತುಲಾ

ತುಲಾ ರಾಶಿಯವರು ಸ್ವಲ್ಪ ಹಠವಾದಿಗಳಾಗಿರುತ್ತಾರೆ. ಅವರು ಕಾಲ್ ಮಾಡಿದಾಗ ನೀವು ಮಾತನಾಡಲೇ ಬೇಕು ಎಂದು ಇಚ್ಛಿಸುತ್ತಾರೆ. ನೀವು ಅವರಿಗೆ ಪ್ರೀತಿ ತೋರಿಸದಿದ್ದರೆ ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆ ನಂತರ ನೀವೆಷ್ಟೇ ಅವರನ್ನು ನಂಬಿಸಲು ಪ್ರಯತ್ನಿಸಿರೂ ಅವರು ಮತ್ತೆ ಬರುವುದಿಲ್ಲ.

ವೃಶ್ಚಿಕ ರಾಶಿ

ಈ ರಾಶಿಯವರೊಡನೆ ನೀವು ಯಾವಾಗಲೂ ತಾಳ್ಮೆಯಿಂದ ವರ್ತಿಸಬೇಕು. ಡೇಟಿಂಗ್​ ಸಂದರ್ಭದಲ್ಲಿ ಅವರು ಹೆಚ್ಚಾಗಿ ನಿಮ್ಮಿಂದ ಕಾಳಜಿ, ಪ್ರೀತಿ, ಸಮಯವನ್ನು ನಿರೀಕ್ಷಿಸುತ್ತಾರೆ. ಇದಕ್ಕೇ ವಿರುದ್ಧವಾಗಿ ನಡೆದುಕೊಂಡರೆ ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ಧನು ರಾಶಿ

ಈ ರಾಶಿಯವರ ನಿರ್ಧಾರಗಳನ್ನು ಎಂದಿಗೂ ತಡೆಯಬಾರದು. ಈ ರಾಶಿಯ ಮಹಿಳೆಯರಿಗೆ ಕೋಪ ಹೆಚ್ಚು. ಸ್ವಲ್ಪ ಹಠಮಾರಿಗಳಾಗಿರುವುದರಿಂದ ನಿರ್ಧಾರಗಳನ್ನು ಖಂಡಿಸಿದರೆ ಅವರು ನಿಮ್ಮ ಜೊತೆ ಹೆಚ್ಚು ಬೆರೆಯಲು ಇಷ್ಟಪಡುವುದಿಲ್ಲ.

ಮಕರ

ಮಕರ ರಾಶಿಯವರು ತಮ್ಮ ಜೀವನ ಮತ್ತು ವೃತ್ತಿ ಜೀವನಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ. ಇವರಲ್ಲಿ ಯಾವಾಗಲೂ ಹೆಚ್ಚು ಸಮಸ್ಯೆ ಕಂಡುಬರುವುದಿಲ್ಲ.

ಇದನ್ನೂ ಓದಿ: ಚಾಣಕ್ಯ ಹೇಳ್ತಾರೆ ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ

ಕುಂಭ ರಾಶಿ

ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಬೇಡಿಕೆ ಹೆಚ್ಚು. ಕೇಳಿದ್ದು ಆಗಲೇ ಬೇಕು. ಇವರನ್ನು ಓಲೈಸುವುದು ಬಹಳ ಕಷ್ಟ. ಜಾಸ್ತಿ ಒತ್ತಾಯ ಮಾಡಿದರೆ ಆ ವ್ಯಕ್ತಿಯನ್ನೇ ದ್ವೇಷಿಸಲು ಪ್ರಾರಂಭಿಸುತ್ತಾರೆ.

ಮೀನ ರಾಶಿ

ಈ ರಾಶಿಯಲ್ಲಿ ಜನಿಸಿದ ಹುಡುಗಿಯರಿಗೆ ಪ್ರೀತಿಯ ಮೇಲೆ ನಂಬಿಕೆ ಹುಟ್ಟಿಸುವುದು ಕಷ್ಟ. ಅಷ್ಟು ಬೇಗ ಯಾರ ಮಾತನ್ನು ಕೂಡ ನಂಬುವುದಿಲ್ಲ ಮತ್ತು ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ರಾಶಿಯವರನ್ನು ಒಪ್ಪಿಸಲು ತುಂಬಾ ಕಷ್ಟ ಪಡಬೇಕಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ