AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಪ್ರತಿಯೊಬ್ಬರೂ ಸಹ ನಮ್ಮ ಮನೆಯಲ್ಲಿ ಶಾಂತಿ ನೆಲೆಸಬೇಕು, ಮನೆ ಇನ್ನಷ್ಟು ಸಮೃದ್ಧಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಕೆಲವೊಂದು ಮನೆಗಳಲ್ಲಿ ಯಾವಾಗ ನೋಡಿದರೂ ಜಗಳಗಳು, ಮನಸ್ತಾಪಗಳು ನಡೆಯುತ್ತಿರುತ್ತವೆ. ಆ ಮನೆಯಲ್ಲಿ ಶಾಂತಿಯೇ ಇರೋದಿಲ್ಲ. ಇದಕ್ಕೆ ಮುಖ್ಯ ಕಾರಣವೇ ದೈನಂದಿನ ಜೀವನದಲ್ಲಿ ಮಾಡುವ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಈ ತಪ್ಪುಗಳನ್ನು ಸರಿಪಡಿಸುವ ಮೂಲಕ ಖಂಡಿತವಾಗಿಯೂ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಬಹುದು.

Chanakya Niti: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 01, 2026 | 9:15 PM

Share

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ಮಾತ್ರವಲ್ಲ ಯಶಸ್ಸು, ಶ್ರೀಮಂತಿಕೆ ಹಾಗೂ ವೈಯಕ್ತಿಕ ಜೀವನಕ್ಕೆ ಸಹಕಾರಿಯಾದ ಹತ್ತು ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಕುಟುಂಬ ಮತ್ತು ಮನೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಅವರ ಪ್ರಕಾರ, ಮನೆಯಲ್ಲಿ ನಿಜವಾದ ಶಾಂತಿ ಕೇವಲ ಹಣದಿಂದಲ್ಲ, ಬದಲಿಗೆ ಅಲ್ಲಿ ವಾಸಿಸುವ ಜನರ ಅಭ್ಯಾಸಗಳು ಮತ್ತು ಆಲೋಚನೆಗಳಿಂದ ಬರುತ್ತದೆ. ಹೀಗಿರುವಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡಿದರೆ ಮನೆಯ ಶಾಂತಿ, ಸಂತೋಷ ಎಲ್ಲವೂ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ರೀತಿ ನಿಮ್ಮ ಮನೆಯಲ್ಲೂ ಶಾಂತಿ ಅನ್ನೋದು ಇಲ್ಲವೇ, ಇದಕ್ಕೆ ಮುಖ್ಯ ಕಾರಣವೇ ಈ ಅಭ್ಯಾಸಗಳು. ಹಾಗಾಗಿ ಈ ಅಭ್ಯಾಸಗಳನ್ನು ತಕ್ಷಣವೇ ಬದಲಿಸಿ.

ಮನೆಯ ಶಾಂತಿ ಹಾಳಾಗಲು ಮುಖ್ಯ ಕಾರಣಗಳೇ ಇವು:

ಕಠಿಣ ಪದಗಳನ್ನು ಮಾತನಾಡುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಪರಸ್ಪರ ಪ್ರೀತಿ ಮತ್ತು ಗೌರವದಿಂದ ಮಾತನಾಡದ ಮನೆಯಲ್ಲಿ ಎಂದಿಗೂ ಶಾಂತಿ ಇರಲು ಸಾಧ್ಯವಿಲ್ಲ. ಕ್ಷುಲ್ಲಕ ವಿಷಯಗಳಿಗೆ ಪರಸ್ಪರ ನಿಂದಿಸುವುದು, ಕೂಗಾಡುವುದು ಅಥವಾ ನಿರಂತರವಾಗಿ ಅವಾಚ್ಯ ಪದಗಳನ್ನು ಬಳಸುವುದು ಇವೆಲ್ಲವೂ ಸಂಬಂಧಗಳನ್ನು ಹಾಳು ಮಾಡುತ್ತದೆ. ಸಂಬಂಧಗಳಲ್ಲಿ ಅಂತರವು ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲು ಬಯಸಿದರೆ ಯಾವಾಗಲೂ ಮನೆಯವರೊಂದಿಗೆ ಸಿಹಿ ಮಾತುಗಳನ್ನಾಡಿ, ಕಠಿಣ ಪದಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿ.

ಸಣ್ಣ ಸಣ್ಣ ವಿಷಯಗಳಿಗೂ ಕೋಪಗೊಳ್ಳುವುದು: ಚಾಣಕ್ಯರ ಪ್ರಕಾರ, ವ್ಯಕ್ತಿಯ ಬಹುದೊಡ್ಡ ಶತ್ರುವೇ ಆತನ ಕೋಪ. ಪ್ರತಿದಿನ ಜಗಳಗಳು, ವಾದಗಳು ನಡೆಯುವ ಮತ್ತು ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಜನರಿರುವ  ಮನೆ ಎಂದಿಗೂ ಪ್ರಗತಿ ಹೊಂದುವುದಿಲ್ಲ, ಅಲ್ಲಿ ಶಾಂತಿ, ಸಂತೋಷವೂ ಇರೋದಿಲ್ಲ. ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಂಡುಕೊಳ್ಳಲು ಬಯಸಿದರೆ, ಯಾವುದೇ ವಿಷಯಗಳಿಗೂ ಕೋಪಗೊಳ್ಳುವ ಬದಲು, ಅವುಗಳನ್ನು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ಅದೇ ಕೋಪದಿಂದ ಮನೆಯೇ ಒಡೆದುಹೋಗಬಹುದು.

ಒಬ್ಬರನ್ನೊಬ್ಬರು ನಂಬದೇ ಇರುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಬಲವಾದ ಸಂಬಂಧದ ಅಡಿಪಾಯ ನಂಬಿಕೆಯ ಮೇಲೆ ನಿಂತಿದೆ. ಹೀಗಿರುವಾಗ ಕುಟುಂಬ ಸದಸ್ಯರ ನಡುವೆಯೇ  ಅನುಮಾನ ಆವರಿಸಿದರೆ, ಮನೆಯ ಸಂತೋಷ ಮತ್ತು ಶಾಂತಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಕುಟುಂಬ ಸದಸ್ಯರು ಪರಸ್ಪರ ತಮ್ಮ ವಿಷಯಗಳನ್ನು ಮರೆಮಾಡಲು ಪ್ರಾರಂಭಿಸಿದಾಗ ಪರಸ್ಪರ ಪ್ರೀತಿ ದಿನದಿಂದ ದಿನಕ್ಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಕುಟುಂಬದಲ್ಲಿ ಸಂತೋಷ ನೆಲೆಸಲು ಮನೆಯಲ್ಲಿರುವ ಪ್ರತಿಯೊಬ್ಬರೂ ಪರಸ್ಪರ ಪ್ರಾಮಾಣಿಕರಾಗಿರಬೇಕು, ಪ್ರೀತಿಯಿಂದ ಇರಬೇಕು.

ಇದನ್ನೂ ಓದಿ: ಎಷ್ಟೇ ಕ್ಲೋಸ್‌ ಆಗಿದ್ರೂ ಸರಿ, ಇಂತಹ ಸ್ವಭಾವದ ಜನರಿಗೆ ನಿಮ್ಮನೆ ವಿಚಾರಕ್ಕೆ ತಲೆ ಹಾಕಲು ಬಿಡಬೇಡಿ

ಆಹಾರವನ್ನು ವ್ಯರ್ಥ ಮಾಡುವುದು, ವ್ಯರ್ಥ ಖರ್ಚು: ಆಹಾರವನ್ನು ವ್ಯರ್ಥ ಮಾಡುವ ಮನೆಯಲ್ಲಿ, ಹಣವನ್ನು ಪೋಲು ಮಾಡುವ ಹಾಗೂ ವ್ಯರ್ಥ ಖರ್ಚು ಮಾಡುವ ಜನರಿರುವ ಮನೆ ಎಂದಿಗೂ ಸಮೃದ್ಧಿ ಹೊಂದುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಚಾಣಕ್ಯರ ಪ್ರಕಾರ, ತಟ್ಟೆಯಲ್ಲಿರುವ ಆಹಾರವನ್ನು ಎಸೆಯುವುದು ಅಥವಾ ವ್ಯರ್ಥ ಖರ್ಚು ಮಾಡುವುದು ತುಂಬಾ ಕೆಟ್ಟ ಅಭ್ಯಾಸ. ವೆಚ್ಚಗಳು ಅನಗತ್ಯವಾಗಿ ಹೆಚ್ಚಾದಾಗ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ.

ಸೋಮಾರಿತನ ಮತ್ತು ಮನೆಯನ್ನು ಸ್ವಚ್ಛಗೊಳಿಸದಿರುವುದು: ಜೀವನದಲ್ಲಿ ಮುಂದುವರಿಯಲು ಬಯಸಿದರೆ, ಜೀವನದಲ್ಲಿ ಅಭಿವೃದ್ಧಿ ಹೊಂದಲು ಬಯಸಿದರೆ ಮೊದಲ ಸೋಮಾರಿತನವನ್ನು ತ್ಯಜಿಸಬೇಕು. ಆಗ ಮಾತ್ರ ಸಮೃದ್ಧಿ ನೆಲೆಸಲು ಸಾಧ್ಯ. ಇದಲ್ಲದೆ ಮನೆ ಹಾಗೂ ಮನೆಯ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ತುಂಬುತ್ತದೆ ಇದರಿಂದ ಅಶಾಂತಿ ನೆಲೆಸುತ್ತದೆ. ಹಾಗಾಗಿ ಮನೆಯನ್ನು ಯಾವಾಗಲೂ ಕ್ಲೀನ್‌ ಆಗಿ ಇಟ್ಟುಕೊಳ್ಳಬೇಕು, ಸ್ವಚ್ಛವಾಗಿರುವ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಹರಿದಾಡುತ್ತಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us