ಯಕೃತ್ತಿನಲ್ಲಿ ಕಂಡುಬರುವ ಸಮಸ್ಯೆಗೆ ಈ 4 ಆಹಾರ ಪದ್ಧತಿ ರಾಮಬಾಣ
ಯಕೃತ್ತು ದೇಹದಲ್ಲಿ ಸಂಗ್ರಹವಾಗುವ ವಿಷದ ಅಂಶಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ. ಯಕೃತ್ತಿನಲ್ಲಿ ಇರುವ ವಿಷದ ಅಂಶ ತೆಗೆಯಬೇಕೆಂದರೆ, ಈ ನಾಲ್ಕು ಆಹಾರ ಕ್ರಮಗಳನ್ನು ಅನುರಿಸಬೇಕು. ಒಂದು ವೇಳೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಆದ್ರೆ ಅದು ಲಿವರ್ಗೆ ದೊಡ್ಡ ಪೆಟ್ಟು ಬೀಳುತ್ತದೆ. ಹಾಗಾದರೆ ಯಕೃತ್ತಿನ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ದೇಹಕ್ಕೆ ಅತಿಮುಖ್ಯವಾದ ಭಾಗ ಎಂದರೆ ಅದು ಲಿವರ್ (liver) ಅಂದರೆ ಯಕೃತ್ತು. ಇದು ಸರಿಯಾಗಿ ಕೆಲಸ ಮಾಡಿದ್ರೆ ದೇಹದಲ್ಲಿ ಎಲ್ಲವೂ ಉತ್ತಮವಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ದೇಹದ ಈ ಭಾಗಕ್ಕೆ ಅನಾರೋಗ್ಯ ಉಂಟಾದರೆ, ತುಂಬಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಲಿವರ್ ದೇಹದಲ್ಲಿ ಶೇಖರಣೆ ಆಗಿರುವ ವಿಷವನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ. ಲಿವರ್ ಅನ್ನು ಆರೋಗ್ಯವಾಗಿ ಇಟ್ಟುಕೊಂಡರೆ ಎಲ್ಲವೂ ಸರಿಯಾಗಿರುತ್ತದೆ. ಲಿವರ್ ಚೆನ್ನಾಗಿ ಕೆಲಸ ಮಾಡಿದ್ರೆ ಚರ್ಮ, ಜೀರ್ಣಕ್ರಿಯೆ ಮತ್ತು ಸಂಪೂರ್ಣ ರೋಗನಿರೋಧಕ ವ್ಯವಸ್ಥೆ ಉತ್ತಮವಾಗಿರುತ್ತದೆ. ಯಕೃತ್ತಿನಲ್ಲಿ ವಿಷದ ಅಂಶಗಳು ಉಂಟಾಗಲು ಅನಾರೋಗ್ಯಕರವಾದ ಆಹಾರಗಳು ಹಾಗೂ ಜೀವನಶೈಲಿ ಕಾರಣ. ತಪ್ಪು ಆಹಾರ ಪದ್ಧತಿಯಿಂದಾಗಿ ಯಕೃತ್ತಿನ ಮೇಲೆ ಒತ್ತಡ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಇದರಿಂದ ಲಿವರ್ ಒಳಗೆ ವಿಷದ ಅಂಶಗಳು ಹೆಚ್ಚಾಗುತ್ತದೆ.
ಈ ಬಗ್ಗೆ ಪ್ರಸಿದ್ಧ ಆಯುರ್ವೇದ ವೈದ್ಯ ರಾಬಿನ್ ಶರ್ಮಾ ಅವರು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಯಕೃತ್ತನ್ನು ಆರೋಗ್ಯಕರವಾಗಿಡಲು ಮತ್ತು ನೈಸರ್ಗಿಕವಾಗಿ ಉತ್ತಮವಾಗಿಡಲು 4 ಆಹಾರ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಡಾ. ರಾಬಿನ್ ಹೇಳುವಂತೆ, ಈ 4 ವಸ್ತುಗಳ ನಿಯಮಿತ ಸೇವನೆಯಿಂದ ಕೇವಲ 20 ರಿಂದ 25 ದಿನಗಳಲ್ಲಿ ಯಕೃತ್ತು ಸಂಪೂರ್ಣವಾಗಿ ಶುದ್ಧಿಯಾಗುತ್ತದೆ ಹಾಗೂ ಅದರಲ್ಲಿರುವ ವಿಷದ ಅಂಶಗಳು ಹೊರ ಹೋಗುತ್ತದೆ ಎಂದು ಹೇಳಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಯಕೃತ್ತ ಆರೋಗ್ಯಕ್ಕೆ 4 ಆಹಾರ ಕ್ರಮ
ಅರಿಶಿನ : ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ದೇಹದಲ್ಲಿ ಉಂಟಾಗುವ ಊರಿತವನ್ನು ಕಡಿಮೆ ಮಾಡುತ್ತದೆ. ಉತ್ಕರ್ಷಣ ನಿರೋಧಕ ಅಂಶವಾಗಿದ್ದು, ಇದು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ . ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕೆ ಅರಿಶಿನ, ಸ್ವಲ್ಪ ದೇಸಿ ತುಪ್ಪ ಮತ್ತು ಕಾಫಿಯನ್ನು ಬೆರೆಸಿ ಕುಡಿಯುವುದರಿಂದ ಯಕೃತ್ತಿನ ಕಾರ್ಯ ಹೆಚ್ಚಾಗುತ್ತದೆ ಮತ್ತು ಕೊಬ್ಬಿನ ಯಕೃತ್ತು ಮತ್ತು ಯಕೃತ್ತಿನ ಸಿರೋಸಿಸ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಸಂಯುಕ್ತವು ಈ ಯಕೃತ್ತಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹದಿಂದ ವಿಷವನ್ನು ತ್ವರಿತವಾಗಿ ತೆಗೆದುಹಾಕುತ್ತದೆ. ಇದು ಯಕೃತ್ತನ್ನು ಶುದ್ಧೀಕರಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದು ಪ್ರಯೋಜನಕಾರಿ.
ಸೊಪ್ಪು ತರಕಾರಿ: ಪಾಲಕ್, ಮೆಂತ್ಯ, ಸಾಸಿವೆ ಮುಂತಾದ ಹಸಿರು ಎಲೆಗಳ ತರಕಾರಿಗಳಲ್ಲಿ ಕಂಡುಬರುವ ಕ್ಲೋರೊಫಿಲ್ ನೈಸರ್ಗಿಕವಾಗಿ ಲಿವರ್ನಲ್ಲಿ ಉಂಟಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ. ಇದರ ಹೊರತಾಗಿ, ಈ ತರಕಾರಿಗಳು ಪಿತ್ತರಸ ಉತ್ಪಾದನೆಯನ್ನು ಹೆಚ್ಚಿಸುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ವಾರಕ್ಕೆ ಕನಿಷ್ಠ 3-4 ಬಾರಿ ಹಸಿರು ಎಲೆಗಳ ತರಕಾರಿಗಳನ್ನು ತಿನ್ನಿ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ: ಮಧುಮೇಹ ಇದ್ಯಾ? ಹಾಗಿದ್ರೆ ಈ ಹಣ್ಣಿನ ಎಲೆ ಸೇವಿಸಿ ನೋಡಿ, ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ
ನಿಂಬೆಹಣ್ಣು : ನಿಂಬೆಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಇದು ಯಕೃತ್ತಿಗೆ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ನಿಂಬೆಹಣ್ಣು ದೇಹದಿಂದ ವಿಷವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








