AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ

ಕೆಲವರಿಗೆ ಊಟ, ತಿಂಡಿ ಮಾಡಿದ ತಕ್ಷಣ ಶೌಚಾಲಯಕ್ಕೆ ಹೋಗುವ ಅಭ್ಯಾಸವಿರುತ್ತದೆ. ಈ ರೀತಿ ಆಗುವುದಕ್ಕೆ ಅವರಿಗೆ ಸರಿಯಾದ ಕಾರಣ ತಿಳಿದಿರುವುದಿಲ್ಲ. ಆದರೆ ಈ ಸಮಸ್ಯೆ ಕಂಡು ಬರುವುದಕ್ಕೆ ಕಾರಣವಿದೆ. ಇದು ಒಬ್ಬರದ್ದೋ, ಇಬ್ಬರದ್ದೋ ಸಮಸ್ಯೆಯಲ್ಲ. ಇಂತಹ ಸಮಸ್ಯೆ ಅನುಭವಿಸುತ್ತಿರುವವರು ನಮ್ಮ ಮಧ್ಯೆಯೇ ಇದ್ದಾರೆ. ಆದರೆ ಅವರು ಈ ರೀತಿಯ ಸಮಸ್ಯೆಗೆ ಹೆಚ್ಚು ಒತ್ತು ಕೊಡದೆಯೇ ಅದನ್ನು ನಿರ್ಲಕ್ಷ್ಯ ಮಾಡಿರುತ್ತಾರೆ. ನಿಮಗೂ ಈ ರೀತಿಯ ಸಮಸ್ಯೆ ಕಂಡು ಬರುತ್ತಿದ್ದರೆ ಅದನ್ನು ನೆಗ್ಲೆಕ್ಟ್ ಮಾಡ್ಬೇಡಿ. ವೈದ್ಯರು ಇದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ಸಲಹೆಗಳನ್ನು ನೀಡಿದ್ದಾರೆ ಅವುಗಳನ್ನು ತಿಳಿದುಕೊಳ್ಳಿ.

ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ
ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 28, 2025 | 5:07 PM

Share

ಊಟ ಮಾಡಿದ ತಕ್ಷಣ ಶೌಚಾಲಯಕ್ಕೆ ಹೋಗಬೇಕು ಅಂತ ಅನಿಸುತ್ತಾ? ಹೊಟ್ಟೆ ತುಂಬಾ ತಿಂದಾಗ ಒಂದು ಸಲ ಟಾಯ್ಲೆಟ್ ಗೆ ಹೋಗಿ ಬರೋಣ ಅನ್ನಿಸುತ್ತಾ? ಈ ರೀತಿ ಪದೇ ಪದೇ ಮಲವಿಸರ್ಜನೆ ಮಾಡಬೇಕು ಅಂತಾ ಯಾಕೆ ಅನಿಸುತ್ತೆ? ಎಂದಾದರೂ ಯೋಚಿಸಿದ್ದೀರಾ? ಚಿಂತಿಸಬೇಡಿ.. ಈ ರೀತಿ ಸಮಸ್ಯೆ ನಿಮಗೆ ಮಾತ್ರವಲ್ಲ ನಮ್ಮ ಮಧ್ಯೆ ಇರುವ ಅನೇಕರದ್ದು ಇದೆ ಸಮಸ್ಯೆ. ಕೆಲವರು ಇದನ್ನು ಹಗುರವಾಗಿ ತೆಗದುಕೊಳ್ಳುತ್ತಾರೆ. ಊಟ ಮಾಡಿದ ತಕ್ಷಣ ಮಲವಿಸರ್ಜನೆ (Poop) ಮಾಡುವ ಹಂಬಲ ಇರುವುದನ್ನು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ (Gastrocolic reflex) ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದ ನೈಸರ್ಗಿಕ ಜೀರ್ಣಕ್ರಿಯೆಯ (Digestion) ಪ್ರಕ್ರಿಯೆಯ ಭಾಗವಾಗಿದೆ. ಹಾರ್ವರ್ಡ್ ವೈದ್ಯ ಸೌರಭ್ ಸೇಥಿ ಪ್ರಕಾರ, ಈ ರೀತಿ ಆಗುವುದಕ್ಕೆ ಹಲವು ರೀತಿಯ ಕಾರಣಗಳಿದ್ದು ಇವುಗಳನ್ನು ತಡೆಯುವುದಕ್ಕೂ ಅವರು ಸಲಹೆಗಳನ್ನು ನೀಡಿದ್ದಾರೆ. ಇದರ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಎಂದರೇನು?

ಸಾಮಾನ್ಯವಾಗಿ, ನಾವು ಯಾವುದೇ ರೀತಿಯ ಆಹಾರ ಸೇವನೆ ಮಾಡಿದಾಗ, ಹೊಟ್ಟೆಯನ್ನು ತಲುಪುವ ಆಹಾರವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಹೊಟ್ಟೆ ತುಂಬಿದಾಗ, ದೇಹವು ದೊಡ್ಡ ಕರುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಈ ಸಂಕೇತಗಳು ದೊಡ್ಡ ಕರುಳನ್ನು ಸಂಕುಚಿತಗೊಳಿಸುತ್ತವೆ. ಈ ಸಂಕೋಚನಗಳ ಪರಿಣಾಮವಾಗಿ, ಹಿಂದಿನಿಂದ ಜೀರ್ಣವಾಗದ ತ್ಯಾಜ್ಯವು ಮುಂದಕ್ಕೆ ಚಲಿಸುತ್ತದೆ. ಒಂದು ರೀತಿಯಲ್ಲಿ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಖಾಲಿ ಮಾಡಲು ಪ್ರೇರೇಪಿಸುತ್ತದೆ. ಇದು ಒಂದು ಕಾರಣವಾದರೆ ಇದರ ಹೊರತಾಗಿ ಇನ್ನೂ ಹಲವು ಕಾರಣಗಳಿವೆ.

ಇತರ ಕಾರಣಗಳೇನು?

  • ಆಹಾರ ಸೇವಿಸಿದ ತಕ್ಷಣ, ಗ್ಯಾಸ್ಟ್ರಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.
  • ಹಣ್ಣು, ತರಕಾರಿ ಮತ್ತು ಧಾನ್ಯಗಳಂತಹ ಹೆಚ್ಚಿನ ಫೈಬರ್ ಅಂಶವಿರುವ ಆಹಾರವನ್ನು ಸೇವಿಸುವುದು ಸಹ ಒಂದು ಕಾರಣವಾಗಿದೆ. ಈ ಆಹಾರಗಳು ಜೀರ್ಣಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
  • ಕೆಲವರಲ್ಲಿ ಜೀರ್ಣಾಂಗ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ, ಕರುಳು ಬೇಗನೆ ಪ್ರತಿಕ್ರಿಯಿಸುತ್ತವೆ.
  • ಇನ್ನು ಕೆಲವೊಮ್ಮೆ, ಒತ್ತಡ ಅಥವಾ ಆತಂಕವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುತ್ತದೆ.

ಯಾವಾಗ ವೈದ್ಯರ ಬಳಿ ಹೋಗಬೇಕು?

ಊಟ ಮಾಡಿದ ತಕ್ಷಣ ಮಲ ವಿಸರ್ಜನೆಯಾಗುವುದು ಸಾಮಾನ್ಯ, ಆದರೆ ಇದರ ಹೊರತಾಗಿ ಕಂಡು ಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅಂದರೆ ಮಲವನ್ನು ಹೊರಹಾಕುವಾಗ ತೀವ್ರ ಹೊಟ್ಟೆ ನೋವು ಕಂಡು ಬಂದರೆ, ಆಗಾಗ ಅತಿಸಾರ ಅಥವಾ ಮಲಬದ್ಧತೆಯ ಸಮಸ್ಯೆ ಕಂಡು ಬರುತ್ತಿದ್ದರೆ, ಮಲದಲ್ಲಿ ರಕ್ತ ಬರುತ್ತಿದ್ದರೆ ಅಥವಾ ಮಲ ಕಪ್ಪಾಗಿ ಹೋಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ
Image
ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ?
Image
ಕಣ್ಣಿನ ಆರೋಗ್ಯದಿಂದ ಕ್ಯಾನ್ಸರ್ ತಡೆಗಟ್ಟುವ ವರೆಗೆ; ಚೀನಿಕಾಯಿಯ ಉಪಯೋಗಗಳಿವು
Image
ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ
Image
ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ

ಇದನ್ನೂ ಓದಿ: Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?

ವೈದ್ಯರು ಸೂಚಿಸಿದ ಪರಿಹಾರಗಳು:

ಒಮ್ಮೆಗೇ ಅತಿಯಾಗಿ ತಿನ್ನುವುದನ್ನು ನಿಲ್ಲಿಸಿ. ಈ ರೀತಿ ಮಾಡುವುದರಿಂದ ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ. ಹಾಗಾಗಿ ದಿನನಿತ್ಯ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಅನೇಕ ಬಾರಿ ಸೇವನೆ ಮಾಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ನಿಮಗೆ ಗ್ಯಾಸ್ ಅಥವಾ ಆಮ್ಲೀಯತೆಯ ಸಮಸ್ಯೆಗಳು ಇರುವುದಿಲ್ಲ. ಇದರ ಜೊತೆಗೆ, ನಿಮ್ಮ ಆಹಾರದಲ್ಲಿ ಕರಗುವ ಫೈಬರ್ ಹೊಂದಿರುವ ಆಹಾರಗಳನ್ನು ಸೇರಿಸಿ. ಇದು ನೀರನ್ನು ಹೀರಿಕೊಂಡು ಜೆಲ್ ತರಹದ ವಸ್ತುವನ್ನು ರೂಪಿಸುತ್ತದೆ. ಇದು ಮಲವನ್ನು ಮೃದುಗೊಳಿಸುತ್ತದೆ ಮತ್ತು ಸುಲಭವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್‌ನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಓಟ್ಸ್, ಸೇಬು, ಕ್ಯಾರೆಟ್ ಮತ್ತು ದ್ವಿದಳ ಧಾನ್ಯಗಳು ಕರಗುವ ಫೈಬರ್‌ನ ಉತ್ತಮ ಮೂಲಗಳಾಗಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಹೆಚ್ಚಿಸಬಹುದಾದ ಆಹಾರಗಳ ಸೇವನೆಯನ್ನು ತಪ್ಪಿಸಿ. ಅಂದರೆ ಮಸಾಲೆಯುಕ್ತ ಆಹಾರಗಳು, ಡೈರಿ ಉತ್ಪನ್ನಗಳು, ಕೆಫೀನ್ ಮತ್ತು ಕೃತಕ ಸಕ್ಕರೆಗಳಂತಹ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Thu, 26 June 25

ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ