AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ

ಬಾಳೆ ಗಿಡದ ಪ್ರತಿಯೊಂದು ಭಾಗವೂ ಕೂಡ ಬಳಕೆಗೆ ಬರುತ್ತದೆ. ಅಲ್ಲದೆ ಇದರಲ್ಲಾಗುವ ಬಾಳೆಕಾಯಿ, ಬಾಳೆದಿಂಡಿನಿಂದ ಮಾಡುವ ಖಾದ್ಯಗಳನ್ನು ಸವಿದಿರಬಹುದು. ಆದರೆ ಬಾಳೆ ಹೂವನ್ನು ಎಂದಾದರೂ ತಿಂದಿದ್ದೀರಾ? ನೀವೇನಾದರೂ ಒಮ್ಮೆ ಇದರ ರುಚಿ ನೋಡಿದರೆ ಮತ್ತೆಂದೂ ಬಿಡುವುದಿಲ್ಲ. ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಇದನ್ನು ಬಳಸಿಕೊಂಡು ಹಲವು ರೀತಿಯ ಅಡುಗೆಗಳನ್ನು ಮಾಡಲಾಗುತ್ತಿದ್ದು, ತಜ್ಞರು ಕೂಡ ಇವುಗಳನ್ನು ಸೇವನೆ ಮಾಡಿ ಎನ್ನುತ್ತಿದ್ದಾರೆ. ಈ ಒಂದು ಹೂವಿನಲ್ಲಿ ಸಾಕಷ್ಟು ಪ್ರಯೋಜನಗಳಿದ್ದು ನೀವು ಕೂಡ ಇದರ ಸೇವನೆ ಮಾಡಬಹುದಾಗಿದೆ. ಇದನ್ನು ಯಾವ ರೀತಿಯ ಸಮಸ್ಯೆ ಇರುವವರು ಬಳಕೆ ಮಾಡಬೇಕು? ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ
ಬಾಳೆ ಹೂವುImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 25, 2025 | 8:25 PM

Share

ಬಾಳೆ ಹೂವು (Banana Flower) ಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಒಮ್ಮೆ ಇದರಿಂದ ಮಾಡಿದ ಅಡುಗೆಯ ರುಚಿ ನೋಡಿದರೆ ಇದನ್ನು ಎಲ್ಲಿ ಕಂಡರೂ ಬಿಡುವುದಿಲ್ಲ. ಇದರಿಂದ ತಯಾರಾದ ಆಹಾರದ ರುಚಿ ಅಷ್ಟು ಚೆನ್ನಾಗಿರುತ್ತದೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಈ ಬಾಳೆ ಹೂವನ್ನು ವೈಜ್ಞಾನಿಕವಾಗಿ ಮೂಸಾ ಅಕ್ಯುಮಿನಾಟಾ (Musa acuminata) ಎಂದು ಕರೆಯಲಾಗುತ್ತದೆ. ಇವುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಏಕೆಂದರೆ ಇವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಫೈಬರ್, ಪ್ರೋಟೀನ್ ಗಳು, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಇದೆ. ಅದಕ್ಕಾಗಿಯೇ ಹಳ್ಳಿಗಳಲ್ಲಿ ಇದನ್ನು ನಿಯಮಿತವಾಗಿ ಒಂದು ರೀತಿಯ ತರಕಾರಿಯಾಗಿ ಬಳಸುತ್ತಾರೆ. ಮಾತ್ರವಲ್ಲ ಆರೋಗ್ಯ ತಜ್ಞರು ಹೇಳುವ ಪ್ರಕಾರ ಇದನ್ನು ವರ್ಷದಲ್ಲಿ ಒಮ್ಮೆಯಾದರೂ ಸೇವನೆ ಮಾಡಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಅನೇಕ ರೀತಿಯ ಕಾಯಿಲೆಗಳನ್ನು ತಡೆಯುವ ಶಕ್ತಿ ಹೊಂದಿದೆ. ಹಾಗಾಗಿ ಇದನ್ನು ನಮ್ಮ ಆಹಾರದಲ್ಲಿ ಬಳಕೆ ಮಾಡುವುದು ಬಹಳ ಒಳ್ಳೆಯದು. ಹಾಗಾದರೆ ಇದನ್ನು ಯಾವ ರೀತಿಯ ಸಮಸ್ಯೆ ಇರುವವರು ಬಳಕೆ ಮಾಡಬೇಕು? ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಾಳೆ ಹೂವಿನ ಉಪಯೋಗಗಳು;

  • ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತದೆ. ಬಾಳೆ ಹೂವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.
  • ಬಾಳೆ ಹೂವುಗಳಲ್ಲಿರುವ ವಿಟಮಿನ್ ಎ ಮತ್ತು ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವು ರೋಗಗಳು ಮತ್ತು ಕಾಲೋಚಿತ ಕಾಯಿಲೆಗಳನ್ನು ತಡೆಯುತ್ತವೆ.
  • ಬಾಳೆ ಹೂವುಗಳಲ್ಲಿರುವ ಮೆಗ್ನೀಸಿಯಮ್ ಅಂಶ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತಂಕ ಅಥವಾ ಖಿನ್ನತೆಯ ಭಾವನೆಗಳು ಬರದಂತೆ ತಡೆಯುತ್ತದೆ.
  • ಬಾಳೆ ಹೂವಿನಲ್ಲಿರುವ ವಿಟಮಿನ್ ಬಿ 6, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳನ್ನು ತಡೆಯುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
  • ಬಾಳೆ ಹೂವು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೀರ್ಘಕಾಲದ ಕಾಯಿಲೆಗಳು ಸಹ ಕಡಿಮೆಯಾಗುತ್ತವೆ.
  • ಬಾಳೆ ಹೂವುಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಅವು ನೋವು, ಉರಿಯೂತ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ.
  • ಹಾಲುಣಿಸುವ ತಾಯಂದಿರು ಬಾಳೆ ಹೂವುಗಳನ್ನು ಸೇವಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಮಗು ಆರೋಗ್ಯವಾಗಿರುತ್ತದೆ.
  • ಬಾಳೆಹಣ್ಣಿನ ಹೂವುಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಅವು ನೋವು, ಉರಿಯೂತ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ.
  • ಇದರಲ್ಲಿರುವ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
  • ಬಾಳೆ ಹೂವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೂ ಕೂಡ ಮಧುಮೇಹ ಇರುವವರು ಇದನ್ನು ಮಿತವಾಗಿ ಸೇವಿಸಬೇಕು.
  • ಬಾಳೆ ಹೂವಿನಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
  • ಬಾಳೆ ಹೂವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.
  • 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ದುರ್ಬಲ ಮೂತ್ರದ ಹರಿವು, ಮೂತ್ರ ಸೋರಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಅಂತವರು ತಮ್ಮ ಆಹಾರದಲ್ಲಿ ಈ ಹೂವನ್ನು ಬಳಸುವುದರಿಂದ ಈ ರೀತಿಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: Banana Flower: ಈ ರೋಗಗಳು ಬರದಂತೆ ತಡೆಯಲು ಬಾಳೆ ಹೂವನ್ನು ಸೇವನೆ ಮಾಡಿ

ಬಳಸುವ ಮೊದಲು ಈ ಸಲಹೆ ಪಾಲಿಸಿ

ಬಾಳೆ ಹೂವುಗಳನ್ನು ಬೇಯಿಸಿ ಅಥವಾ ಹುರಿದು ಪಲ್ಯ, ಸಾರು ಹೀಗೆ ಬೇರೆ ಬೇರೆ ರೀತಿಯ ಅಡುಗೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕರಿ, ಸಲಾಡ್ ಗಳಲ್ಲಿಯೂ ಬಳಸುತ್ತಿದ್ದಾರೆ. ಇನ್ನು ಕೆಲವು ಭಾಗದಲ್ಲಿ ಬಾಳೆ ಹೂವಿನಿಂದ ಚಹಾವನ್ನು ಕೂಡ ತಯಾರಿಸಿ ಕುಡಿಯುತ್ತಾರೆ. ಆದರೆ ನೆನೆಪಿಟ್ಟುಕೊಳ್ಳಿ ಇದನ್ನು ಬಳಸುವ ಮೊದಲು, ದಳಗಳ ನಡುವಿನ ರಸವನ್ನು ತೆಗೆದುಹಾಕಿ, ಇಲ್ಲವಾದಲ್ಲಿ ಅದು ಕಹಿ ರುಚಿಯನ್ನು ನೀಡುತ್ತದೆ. ಈ ಹೂವುಗಳನ್ನು ನಿಂಬೆ ನೀರಿನಲ್ಲಿ ನೆನೆಸುವುದರಿಂದಲೂ ಕೂಡ ಕಹಿ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ
Image
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
Image
ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ
Image
ರಾತ್ರಿ ಈ ರೀತಿ ಲಕ್ಷಣ ಕಂಡು ಬರುವುದು ಕಿಡ್ನಿ ಫೇಲ್ಯೂರ್ ಆಗುವ ಮುನ್ಸೂಚನೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ