AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ನಿದ್ರೆ ಸರಿಯಾಗಿ ಆಗಿಲ್ಲ ಅಂದರೆ ಎಷ್ಟು ಸಮಸ್ಯೆಗಳಾಗುತ್ತವೆ ಎಂಬುದು ರಾತ್ರಿ ನಿದ್ರೆ ಬರದೇ ಒದ್ದಾಡುವವರಿಗೆ ಮಾತ್ರ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಎಷ್ಟೇ ಸುಸ್ತಾಗಿ ಮಲಗಿದ್ರು ನಿದ್ರೆ ಬರಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಈ ಮಧ್ಯೆ ನಿದ್ರೆ ಚೆನ್ನಾಗಿ ಮಾಡುವವನೇ ಭಾಗ್ಯವಂತ ಎನ್ನುವ ಪರಿಸ್ಥಿತಿ ಬಂದಿದೆ. ಅದರಲ್ಲಿಯೂ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು ಆರಂಭದಲ್ಲಿಯೇ ಇದನ್ನು ಪತ್ತೆ ಹಚ್ಚಿ ಗುಣಪಡಿಸಿಕೊಳ್ಳುವುದು ಬಹಳ ಒಳ್ಳೆಯದು ಇಲ್ಲವಾದಲ್ಲಿ ಇದು ನಾನಾ ರೀತಿಯ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ
ಸ್ಲೀಪ್ ಅಪ್ನಿಯImage Credit source: Getty Images
ಪ್ರೀತಿ ಭಟ್​, ಗುಣವಂತೆ
| Updated By: ಮಾಲಾಶ್ರೀ ಅಂಚನ್​|

Updated on: Jun 22, 2025 | 8:25 PM

Share

ನಿದ್ರೆ (sleep) ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಯಾರನ್ನೇ ಕೇಳಿ ಸರಿಯಾಗಿ ನಿದ್ರೇನೇ ಬರಲ್ಲ, ರಾತ್ರಿ 2 ಗಂಟೆ ಆದ್ರೂ ಕಣ್ಣಿಗೆ ನಿದ್ದೆ ಹತ್ತಲ್ಲ. ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ಮಲಗೋದು ಬಹಳ ಕಷ್ಟ, ಹೀಗೆ ನಿದ್ರೆ ಸರಿಯಾಗಿ ಆಗದಿರುವವರ ಲಿಸ್ಟ್ ದೊಡ್ಡದಾಗಿರುತ್ತದೆ. ಹತ್ತರಲ್ಲಿ ಏಳು ಮಂದಿ ಈ ರೀತಿ ಸಮಸ್ಯೆಗಳಿಂದ ಒದ್ದಾಡುತ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದಿಲ್ಲ ಅಂದ್ರೆ ಏನು? ನಾಳೆ ನಿದ್ದೆ ಮಾಡಿದ್ರೆ ಆಯ್ತ ಬಿಡು ಅಂತ ಅಲಕ್ಷ್ಯ ಮಾಡಬೇಡಿ. ಏಕೆಂದರೆ ಇದು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಎಂಬುದು ಒಂದು ಗಂಭೀರ ಆರೋಗ್ಯ (health) ಸಮಸ್ಯೆಯಾಗಿದ್ದು ಇದು ನಿದ್ರೆಯಲ್ಲಿ ಉಸಿರಾಟ ಸರಿಯಾಗಿ ಆಗದೇ ಗೊರಕೆ ಬರುದ ಕಾಯಿಲೆ. ಈ ರೀತಿ ಆಗುವುದರಿಂದ ವ್ಯಕ್ತಿಗೆ ನಿದ್ದೆ ಸರಿಯಾಗಿ ಆಗುವುದಿಲ್ಲ ಇದು ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಚಯಾಪಚಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ವಿಷಯದ ಕುರಿತು ಕೆಐಎಂಎಸ್ ಆಸ್ಪತ್ರೆಯಲ್ಲಿ ಲೀಡ್ ಕನ್ಸಲ್ಟೆಂಟ್ ಮತ್ತು ಸೀನಿಯರ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ದೀಪಕ್ ಕೃಷ್ಣಮೂರ್ತಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು ಅವರು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತವೆ? ಯಾವ ಕಾರಣಗಳಿಂದ ಈ ರೀತಿಯ ಸಮಸ್ಯೆ ಬರಬಹುದು ಎಂಬುದನ್ನು ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಸುಮಾರು 10 ಕೋಟಿ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 5 ಕೋಟಿ ಜನರು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ತೀವ್ರ ಲಕ್ಷಣ ಹೊಂದಿದ್ದಾರೆ ಅಂದ್ರೆ ನಿಮಗೆ ಅಚ್ಚರಿ ಆಗಬಹುದು ಆದರೆ ಇದು ಸತ್ಯ. ಕಳೆದ ಎರಡು ದಶಕಗಳಲ್ಲಿ ಈ ಬಗ್ಗೆ 6 ಸಂಶೋಧನೆ ನಡೆದಿದೆ. ಅವುಗಳ ಪ್ರಕಾರ ಈ ರೀತಿಯ ಸಮಸ್ಯೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಸ್ಥೂಲಕಾಯತೆ ಇರುವವರಲ್ಲಿಯೂ ಹೆಚ್ಚಾಗಿ ಕಂಡುಬರಬಹುದು. ಆದರೆ ಇವುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದು ಸಾಮಾನ್ಯ ಸಮಸ್ಯೆ ಅಲ್ಲವೇ ಅಲ್ಲ. ಇದರಿಂದ ಅನೇಕ ರೀತಿಯ ಗಂಭೀರ ಸಮಸ್ಯೆಗಳು ಬರಬಹುದು. ಹಾಗಾಗಿ ಇವುಗಳ ಲಕ್ಷಣ ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ
Image
ಬಿ12 ಅಂಶ ಕಡಿಮೆ ಆಗಿದ್ಯಾ? ಈ ಒಂದು ಹಣ್ಣನ್ನು ಸೇವನೆ ಮಾಡಿ
Image
ಈ ಆಹಾರ ಹೃದಯಕ್ಕೆ ಒಳ್ಳೆಯದಲ್ಲ ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ
Image
ನಗುವಾಗ ಡಿಂಪಲ್ ಬೀಳೋದು ಅದೃಷ್ಟ ಅಲ್ಲ, ಇದಕ್ಕೆ ಈ ಆರೋಗ್ಯ ಸಮಸ್ಯೆಯೇ ಕಾರಣ
Image
ರಾತ್ರಿ ಪದೇ ಪದೇ ಎಚ್ಚರವಾಗುತ್ತಾ? ಈ ರೀತಿ ಆಗುವುದಕ್ಕೆ ಇದೇ ಕಾರಣ

ಡಾ. ದೀಪಕ್ ಕೃಷ್ಣಮೂರ್ತಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ ನೋಡಿ;

ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು

  • ಗೊರಕೆ
  • ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಅಥವಾ ಉಸಿರುಗಟ್ಟುವಿಕೆ
  • ಆಯಾಸ
  • ತಲೆನೋವು
  • ಸ್ಮರಣಶಕ್ತಿ ಕಡಿಮೆಯಾಗುವುದು

ಇದನ್ನೂ ಓದಿ: ಪ್ರತಿದಿನ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ?

ಇದನ್ನು ತಡೆಯುವುದು ಹೇಗೆ?

ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಏಕೆಂದರೆ ಈ ರೀತಿಯ ಸಮಸ್ಯೆಗಳು ಬರುವುದು ನಮ್ಮ ಅನಾರೋಗ್ಯಕರ ಅಭ್ಯಾಸಗಳಿಂದ, ಹಾಗಾಗಿ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಜೊತೆಗೆ ಬೆಳಗ್ಗಿನ ಸಮಯದಲ್ಲಿ ನಿದ್ದೆ ಮಾಡುವುದನ್ನು ಕಡಿಮೆ ಮಾಡಿ. ಪ್ರತಿನಿತ್ಯ ವ್ಯಾಯಾಮ ಮಾಡಿ. ಕುಳಿತು ಕೆಲಸ ಮಾಡುವವರು ಪ್ರತಿನಿತ್ಯ ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಧ್ಯಾನ ಮಾಡಿ ಇದರಿಂದ ನಿದ್ರೆ ಸರಿಯಾಗಿ ಬರುತ್ತದೆ. ಮಧುಮೇಹ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆ ತೆಗೆದುಕೊಂಡು ವ್ಯಾಯಾಮ ಮಾಡಿ. ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ