AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಕಲಿ ಪನೀರ್ ಗುರುತಿಸುವುದು ಹೇಗೆ? ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ

ಪನೀರಿನಲ್ಲಿ ಹೆಚ್ಚುತ್ತಿರುವ ಕಲಬೆರಕೆಯ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಪಿಷ್ಟ, ಡಿಟರ್ಜೆಂಟ್, ಫಾರ್ಮಾಲಿನ್ ಮತ್ತು ಹಾಲಿನ ಪುಡಿಯಂತಹ ಕಲಬೆರಕೆಗಳು ಆರೋಗ್ಯಕ್ಕೆ ಹಾನಿಕಾರಕ. ನಕಲಿ ಪನೀರ್ ಅನ್ನು ಪತ್ತೆಹಚ್ಚಲು ಹಿಸುಕು ಪರೀಕ್ಷೆ, ತುರ್ ದಾಲ್ ಪರೀಕ್ಷೆ, ಸೋಯಾಬೀನ್ ಪರೀಕ್ಷೆ ಮತ್ತು ರುಚಿ ಪರೀಕ್ಷೆಗಳನ್ನು ಮಾಡಿ. ಪ್ರಮಾಣಿತ ಬ್ರ್ಯಾಂಡ್‌ಗಳನ್ನು ಆರಿಸಿ ಮತ್ತು ಪ್ಯಾಕೇಜ್‌ನಲ್ಲಿನ ವಿವರಗಳನ್ನು ಪರಿಶೀಲಿಸುವಂತೆ ಲೇಖನ ಸಲಹೆ ನೀಡುತ್ತದೆ.

Health Tips: ನಕಲಿ ಪನೀರ್ ಗುರುತಿಸುವುದು ಹೇಗೆ? ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ
Adulterated Paneer
TV9 Web
| Updated By: ಅಕ್ಷತಾ ವರ್ಕಾಡಿ|

Updated on:Jun 22, 2025 | 3:05 PM

Share

ಪನೀರ್, ವಿಶೇಷವಾಗಿ ಸಸ್ಯಾಹಾರಿ ಭಾರತೀಯ ಮನೆಯಲ್ಲೊಂದು ಪ್ರಮುಖ ಪ್ರೋಟೀನ್ ಆಧಾರಿತ ಆಹಾರ. ಇದರ ರುಚಿ, ಪೌಷ್ಟಿಕತೆ ಹಾಗೂ ಬಗೆಬಗೆಯ ಭಕ್ಷ್ಯಗಳಿಗೆ ಇದಕ್ಕೆ ಅಪಾರ ಬೇಡಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬೇಡಿಕೆಯ ಗಂಭೀರ ದುರಂತವೊಂದು ಕಂಡುಬರುತ್ತಿದೆ – ಅಂದರೆ ಪನೀರಿನ ಅತಿರೇಕದ ಕಲಬೆರಕೆ. ಲಾಭದಾಸೆಗಾಗಿ ಕೆಲ ತಯಾರಕರು ಹಾಗೂ ಪೂರೈಕೆದಾರರು ಪನೀರ್‌ನಲ್ಲಿ ಪ್ರೋಟೀನ್ ಅಂಶ ಕಡಿಮೆ ಮಾಡುವ ಮೂಲಕ ಕೃತಕ ದ್ರವ್ಯಗಳನ್ನು ಬೆರೆಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ. ಉದಾಹರಣೆಗೆ, ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಪರಿಶೀಲನೆಯಲ್ಲಿ 450 ಕೆ.ಜಿ.ಕ್ಕೂ ಹೆಚ್ಚು ನಕಲಿ ಪನೀರ್ ವಶಪಡಿಸಿಕೊಳ್ಳಲಾಯಿತು.

ಸಾಮಾನ್ಯ ಕಲಬೆರಕೆಗಳು ಮತ್ತು ಅದರ ಪರಿಣಾಮಗಳು:

ಪಿಷ್ಟ (ಸ್ಟಾರ್ಚ್):

ಪನೀರ್‌ನಲ್ಲಿ ಮೈದಾ ಅಥವಾ ಆರಾರೂಟ್ ಸೇರಿಸಿ ತೂಕ ಹೆಚ್ಚಿಸಲಾಗುತ್ತದೆ. ಇದು ಪೌಷ್ಟಿಕಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆಯನ್ನೂ ಉಂಟುಮಾಡಬಹುದು.

ಡಿಟರ್ಜೆಂಟ್:

ಕೆಲವು ಮೋಸಗಾರರು ಯೂರಿಯಾ ಅಥವಾ ಡಿಟರ್ಜೆಂಟ್ ಬೆರೆಸಿದ ಹಾಲಿನಿಂದ ಪನೀರ್ ತಯಾರಿಸುತ್ತಾರೆ. ಇದರ ಸೇವನೆಯು ವಾಂತಿ, ಹೊಟ್ಟೆನೋವು, ಹಾಗೂ ಅಂಗಾಂಗ ಹಾನಿಗೂ ಕಾರಣವಾಗಬಹುದು.

ಫಾರ್ಮಾಲಿನ್/ಸಂರಕ್ಷಕಗಳು:

shelf life ಹೆಚ್ಚಿಸಲು ಬಳಸುವ ಫಾರ್ಮಾಲಿನ್‌ನಂತಹ ರಾಸಾಯನಿಕಗಳು ಕ್ಯಾನ್ಸರ್, ಲಿವರ್ ಹಾನಿ, ತೀವ್ರ ಅಲರ್ಜಿಗಳಿಗೆ ಕಾರಣವಾಗಬಹುದು.

ಹಾಲಿನ ಪುಡಿ/ಘನವಸ್ತುಗಳು:

ತಾಜಾ ಹಾಲಿನ ಬದಲಾಗಿ ಪುಡಿ ಅಥವಾ condensed milk ಬಳಸಿ ತಯಾರಿಸಿದ ಪನೀರ್‌ನಲ್ಲಿ ಸ್ವಾಭಾವಿಕ ಗುಣಲಕ್ಷಣಗಳು ಕಡಿಮೆಯಾಗಿರುತ್ತವೆ.

ಇದನ್ನೂ ಓದಿ: ಪಾರ್ಕಿನ್ಸನ್ಸ್ ಕಾಯಿಲೆಗೆ ಆಯುರ್ವೇದ ಪರಿಹಾರ; ಪತಂಜಲಿ ಸಂಶೋಧನೆಯಲ್ಲಿ ಮಹತ್ತರ ಸಂಗತಿ ಬೆಳಕಿಗೆ

ನಕಲಿ ಪನೀರ್ ಗುರುತಿಸುವ ಸರಳ ಪರೀಕ್ಷೆಗಳು:

  • ಹಿಸುಕ ಪರೀಕ್ಷೆ (Texture Test): ಬೆರಳಿನಿಂದ ಸಣ್ಣ ತುಂಡನ್ನು ಹಿಸುಕಿದಾಗ ಶುದ್ಧ ಪನೀರ್ ತನ್ನ ರೂಪವನ್ನು ಉಳಿಸಿಕೊಳ್ಳುತ್ತದೆ. ನಕಲಿ ಪನೀರ್ ಒತ್ತಿದಾಗ ಮುರಿದು ಬೀಳುತ್ತದೆ.
  • ತುರ್ ದಾಲ್ ಪರೀಕ್ಷೆ: ಪನೀರ್ ತುಂಡನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ತುರ್ ದಾಲ್ ಪುಡಿಯಲ್ಲಿ ಬೆರೆಸಿ. ಬಣ್ಣ ಕೆಂಪಾಗಿ ತಿರುಗಿದರೆ, ಅದು ಡಿಟರ್ಜೆಂಟ್ ಅಥವಾ ಯೂರಿಯಾದ ಸೂಚನೆಯಾಗಿರಬಹುದು.
  • ಸೋಯಾಬೀನ್ ಪರೀಕ್ಷೆ: ಕುದಿಸಿ ತಣ್ಣಗಾದ ಪನೀರ್‌ಗೆ ಸೋಯಾಬೀನ್ ಪುಡಿ ಸೇರಿಸಿದಾಗ ಬಣ್ಣ ಬದಲಾದರೆ ಅಶುದ್ಧಿ ಇರುವ ಸಾಧ್ಯತೆ.
  • ರುಚಿ ಪರೀಕ್ಷೆ: ತೆರೆದ ಕೌಂಟರ್‌ಗಳಿಂದ ಖರೀದಿಸುವಾಗ ಮಾದರಿಯನ್ನು ತಿನ್ನಿ ಅಥವಾ ಮುರಿದು ನೋಡಿ. ಗಂಧ, ರುಚಿ ನಕಲಿರಬಹುದು.
  • ಗ್ರಾಹಕರಿಗೆ ಸಲಹೆ: ಪ್ರಮಾಣಿತ ಬ್ರ್ಯಾಂಡ್‌ಗಳೇ ಪನೀರ್ ಖರೀದಿಸುವುದು ಉತ್ತಮ. ಪ್ಯಾಕ್ ಮೇಲೆ ತಯಾರಿಸಿದ ದಿನಾಂಕ, ಫುಡ್ ಲೈಸೆನ್ಸ್ ಸಂಖ್ಯೆ, ಶುದ್ಧತೆಯ ಪ್ರಮಾಣಪತ್ರಗಳನ್ನು ಪರಿಶೀಲಿಸಿ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಆಯುರ್ವೇದ ವೈದ್ಯರು, ಶಿರಸಿ – 581401

ದೂರವಾಣಿ: 08384-225836

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Sun, 22 June 25

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ