AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಕಿನ್ಸನ್ಸ್ ಕಾಯಿಲೆಗೆ ಆಯುರ್ವೇದ ಪರಿಹಾರ; ಪತಂಜಲಿ ಸಂಶೋಧನೆಯಲ್ಲಿ ಮಹತ್ತರ ಸಂಗತಿ ಬೆಳಕಿಗೆ

Patanjali's treatment for Parkinson's disease: ಪತಂಜಲಿ ಸಂಶೋಧನಾ ಸಂಸ್ಥೆಯು ಪಾರ್ಕಿನ್ಸನ್ ರೋಗಕ್ಕೆ ಸಂಬಂಧಿಸಿದ ನ್ಯೂರೋಗ್ರಿಟ್ ಗೋಲ್ಡ್ ಔಷಧದ ಸಂಶೋಧನೆಯನ್ನು ನಡೆಸಿದೆ. ಈ ಔಷಧವು ಪಾರ್ಕಿನ್ಸನ್‌ನಿಂದ ಉಂಟಾಗುವ ಸ್ಮರಣಾಶಕ್ತಿ ನಷ್ಟವನ್ನು ಸುಧಾರಿಸುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಸಂಯೋಜನೆಯಾಗಿರುವ ಈ ಔಷಧವು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿದೆ ಮತ್ತು ಪಾರ್ಕಿನ್ಸನ್ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಪಾರ್ಕಿನ್ಸನ್ಸ್ ಕಾಯಿಲೆಗೆ ಆಯುರ್ವೇದ ಪರಿಹಾರ; ಪತಂಜಲಿ ಸಂಶೋಧನೆಯಲ್ಲಿ ಮಹತ್ತರ ಸಂಗತಿ ಬೆಳಕಿಗೆ
ಪತಂಜಲಿ ಸಂಸ್ಥೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 20, 2025 | 2:12 PM

Share

ಪಾರ್ಕಿನ್ಸನ್ ರೋಗದಿಂದ (Parkinson’s disease) ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ನರದೌರ್ಬಲ್ಯಕ್ಕೆ ಸಂಬಂಧಿಸಿದ ಈ ಕಾಯಿಲೆಗೆ ಈಗಲೂ ಕೂಡ ನಿರ್ದಿಷ್ಟ ಚಿಕಿತ್ಸೆ ಕಂಡುಬಂದಿಲ್ಲ. ಈ ರೋಗವನ್ನು ನಿಯಂತ್ರಿಸಲು ಮಾತ್ರ ಸಾಧ್ಯವೇ ಹೊರತು ಪೂರ್ಣ ಗುಣಮುಖವಾಗಿಸಲು ಆಗಲ್ಲ. ಇದೇ ವೇಳೆ, ಪತಂಜಲಿ ಸಂಶೋಧನಾ ಸಂಸ್ಥೆಯು (Patanjali Anusandhan Sansthan) ಪಾರ್ಕಿನ್ಸನ್ ಬಗ್ಗೆ ರಿಸರ್ಚ್ ನಡೆಸಿದೆ. ಪತಂಜಲಿಯ ನ್ಯೂರೋಗ್ರಿಟ್ ಗೋಲ್ಡ್ (Neurogrit Gold) ಔಷಧವು ಪಾರ್ಕಿನ್ಸನ್ ಕಾಯಿಲೆಯಿಂದ ಉಂಟಾಗುವ ಸ್ಮರಣಶಕ್ತಿ ನಷ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ವಿಜ್ಞಾನಿಗಳೂ ಕೂಡ ಇದನ್ನು ದೃಢಪಡಿಸಿದ್ದಾರೆ. ಪತಂಜಲಿ ಅನುಸಂಧಾನ ಸಂಸ್ಥೆಯ ಈ ಸಂಶೋಧನೆಯು ವೈಲಿ ಪಬ್ಲಿಕೇಶನ್‌ನ ಸಿಎನ್‌ಎಸ್ ನ್ಯೂರೋಸೈನ್ಸ್ ಅಂಡ್ ಥೆರಪ್ಯೂಟಿಕ್ಸ್ ಜರ್ನಲ್​​ನಲ್ಲಿ ಪ್ರಕಟವಾಗಿದೆ.

ಪತಂಜಲಿ ಅನುಸಂಧಾನ ಸಂಸ್ಥೆಯ ಸಂಶೋಧನೆಯ ಕುರಿತು ಆಚಾರ್ಯ ಬಾಲಕೃಷ್ಣ (Acharya Balakrishna) ಅವರು, ಪಾರ್ಕಿನ್ಸನ್ ಕಾಯಿಲೆಯು ವ್ಯಕ್ತಿಯನ್ನು ಮಾನಸಿಕವಾಗಿ ಅಸ್ವಸ್ಥರನ್ನಾಗಿ ಮಾಡುವುದಲ್ಲದೆ, ಅವರ ಸಾಮಾಜಿಕ ವಲಯವೂ ಕುಗ್ಗಲು ಪ್ರಾರಂಭಿಸುತ್ತದೆ ಎಂದು ಹೇಳುತ್ತಾರೆ. ನ್ಯೂರೋಗ್ರಿಟ್ ಗೋಲ್ಡ್ ಔಷಧವು ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ವಿಶಿಷ್ಟ ಸಂಯೋಜನೆಯಾಗಿದೆ. ನೈಸರ್ಗಿಕ ಗಿಡಮೂಲಿಕೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದರೆ ಇಂದಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ಈ ಸಂಶೋಧನೆ ತೋರಿಸುತ್ತದೆ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: ಬಂಜೆತನ ಸಮಸ್ಯೆಗೆ ಸುರಕ್ಷಿತ ಪರಿಹಾರ; ಗಂಡು ಮತ್ತು ಹೆಣ್ಣು ಇಬ್ಬರಿಗೂ ಉಪಯುಕ್ತ ಈ ಪತಂಜಲಿ ಔಷಧಗಳು

ಇದನ್ನೂ ಓದಿ
Image
ಖಾದ್ಯ ಎಣ್ಣೆ ಬೆಲೆ ಇಳಿಸಲಿದೆ ಪತಂಜಲಿಯ ಈ ನಡೆ
Image
ಬಂಜೆತನ ಸಮಸ್ಯೆಗೆ ಪತಂಜಲಿ ಪರಿಹಾರ
Image
ಥೈರಾಯ್ಡ್ ಕಾಯಿಲೆಗೆ ರಾಮಬಾಣ ಈ ಪತಂಜಲಿ ಔಷಧಿ
Image
ಪತಂಜಲಿ ದಿವ್ಯ ಕೇಶ್ ಕಾಂತಿ: ಕೂದಲು ಉದುರುವಿಕೆಗೆ ಪರಿಹಾರ

ನ್ಯೂರೋಗ್ರಿಟ್ ಗೋಲ್ಡ್ ತಯಾರಿಕೆಗೆ ಈ ಗಿಡಮೂಲಿಕೆಗಳ ಬಳಕೆ

ಆಚಾರ್ಯ ಬಾಲಕೃಷ್ಣ ಅವರ ಪ್ರಕಾರ, ನ್ಯೂರೋಗ್ರಿಟ್ ಗೋಲ್ಡ್ ಅನ್ನು ಜ್ಯೋತಿಷ್ಮತಿ ಮತ್ತು ಗಿಲೋಯ್‌ನಂತಹ ನೈಸರ್ಗಿಕ ಗಿಡಮೂಲಿಕೆಗಳ ಜೊತೆಗೆ ಏಕಾಂಗವೀರ್ ರಸ, ಮೋತಿ ಪಿಷ್ಟಿ, ರಜತ್ ಭಸ್ಮ, ವಸಂತ್ ಕುಸುಮಾಕರ್ ರಸ, ರಸರಾಜ್ ರಸಗಳಿಂದ ತಯಾರಿಸಲಾಗುತ್ತದೆ. ಇದು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆಗೆ ಪರಿಣಾಮಕಾರಿ ಎನಿಸಿದೆ. ಪತಂಜಲಿ ಸಂಶೋಧನಾ ಸಂಸ್ಥೆಯ ಉಪಾಧ್ಯಕ್ಷ ಮತ್ತು ಮುಖ್ಯ ವಿಜ್ಞಾನಿ ಡಾ. ಅನುರಾಗ್ ವರ್ಷ್ಣಿ ಅವರು, ಮೊದಲ ಬಾರಿಗೆ ಸಿ. ಎಲೆಗನ್ಸ್ ಮೇಲೆ ಆಯುರ್ವೇದ ಔಷಧದೊಂದಿಗೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಕೂಡ ನೀಡಿದೆ ಎನ್ನುತ್ತಾರೆ.

ಪಾರ್ಕಿನ್ಸನ್ ಕಾಯಿಲೆ ನಿಯಂತ್ರಣಕ್ಕೆ ಸಹಾಯಕ

ಪತಂಜಲಿ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ವರ್ಷ್ಣಿಯವರ (Dr Anurag Varshney) ಪ್ರಕಾರ, ಈ ಸಂಶೋಧನೆಯು ಮಾನವರನ್ನು ಆರೋಗ್ಯವಂತರನ್ನಾಗಿ ಮಾಡಲು ಸಹಾಯವಾಗಬಲ್ಲುದು. ನಮ್ಮ ಮೆದುಳಿನಲ್ಲಿ ಇರುವ ಡೋಪಮೈನ್ ಎಂಬ ಹಾರ್ಮೋನ್ ನಮ್ಮ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಆದರೆ ಕೆಲವು ಕಾರಣಗಳಿಂದ ಡೋಪಮೈನ್ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗದಿದ್ದರೆ ದೇಹ ತನ್ನ ಸಮತೋಲನ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ನಾವು ಚೆನ್ನಾಗಿ ಮಾಡುತ್ತಿದ್ದ ಕೆಲಸಗಳನ್ನು ನಮ್ಮ ಮೆದುಳು ಮರೆಯಲು ಆರಂಭಿಸುತ್ತದೆ. ಈ ಸ್ಥಿತಿಯನ್ನೇ ಪಾರ್ಕಿನ್ಸನ್ ಸಿಂಡ್ರೋಮ್ ಎನ್ನುವುದು ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಥೈರಾಯ್ಡ್ ಕಾಯಿಲೆಗೆ ಪರಿಣಾಮಕಾರಿ ಔಷಧಿ ಪತಂಜಲಿ ದಿವ್ಯ ಥೈರೋಗ್ರಿಟ್; ಇದರ ಉಪಯೋಗ, ಸೇವನೆ ಕ್ರಮ, ಮುನ್ನೆಚ್ಚರಿಕೆ ವಿವರ

ಪತಂಜಲಿ ಸಂಶೋಧನೆ; ಪಾರ್ಕಿನ್ಸನ್ ಪೀಡಿತರಿಗೆ ಹೊಸ ಆಶಾಕಿರಣ

ನ್ಯೂರೋಗ್ರಿಟ್ ಗೋಲ್ಡ್‌ನೊಂದಿಗೆ ಮಾಡಿದ ಸಂಶೋಧನೆಯ ಫಲಿತಾಂಶಗಳು ಪಾರ್ಕಿನ್ಸನ್ ರೋಗಿಗಳಿಗೆ ಹೊಸ ಭರವಸೆಯ ಕಿರಣವನ್ನು ತಂದಿವೆ. ಪಾರ್ಕಿನ್ಸನ್ ಚಿಕಿತ್ಸೆಯಲ್ಲಿ ಒಂದು ಕ್ರಾಂತಿಯಾಗುವುದಲ್ಲದೆ, ರೋಗಿಗಳ ನರವ್ಯೂಹಕ್ಕೆ ಸಂಬಂಧಿಸಿದ ದೋಷಗಳನ್ನು ಸರಿಪಡಿಸಲು ಮತ್ತು ಅದನ್ನು ಮತ್ತೆ ಬಲಪಡಿಸಲು ಸಹಾಯ ಮಾಡುತ್ತದೆ. ರೋಗಿಗಳ ಸಮತೋಲನ, ಆಲೋಚನಾ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಹೇಳಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ