ಬಂಜೆತನ ಸಮಸ್ಯೆಗೆ ಸುರಕ್ಷಿತ ಪರಿಹಾರ; ಗಂಡು ಮತ್ತು ಹೆಣ್ಣು ಇಬ್ಬರಿಗೂ ಉಪಯುಕ್ತ ಈ ಪತಂಜಲಿ ಔಷಧಗಳು
Patanjali's Ayurvedic Remedies for Infertility: ಪತಂಜಲಿ ಸಂಶೋಧನೆಯು ಆಯುರ್ವೇದ ಚಿಕಿತ್ಸೆಯು ಬಂಜೆತನ ನಿವಾರಣೆಗೆ ಪರಿಣಾಮಕಾರಿ ಎಂದು ತೋರಿಸಿದೆ. ಅಶ್ವಗಂಧ, ಶತಾವರಿ, ದಿವ್ಯ ಕ್ವಾತ್, ದಿವ್ಯ ಚಂದ್ರಪ್ರಭಾ ವಟಿ ಮತ್ತು ದಿವ್ಯ ಯೌವ್ವನಾಮೃತ ವಟಿ ಮುಂತಾದ ಔಷಧಗಳು ಲಭ್ಯವಿದೆ. ಜೀವನಶೈಲಿ ಬದಲಾವಣೆಗಳು, ಯೋಗ, ಪ್ರಾಣಾಯಾಮ ಮತ್ತು ಆರೋಗ್ಯಕರ ಆಹಾರ ಕೂಡ ಬಹಳ ಮುಖ್ಯ. ಆದರೆ, ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಅನಿಯಮಿತ ಆಹಾರ ಪದ್ಧತಿ ಮತ್ತು ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಅನೇಕ ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಇವತ್ತು ಸಾಕಷ್ಟು ವೈದ್ಯಕೀಯ ಪರಿಹಾರ ಇದೆ. ನೈಸರ್ಗಿಕ ಮತ್ತು ಆಯುರ್ವೇದ ವಿಧಾನಗಳೂ ಕೂಡ ಬಂಜೆತನ ನಿವಾರಣೆಗೆ ಪರಿಣಾಮಕಾರಿ ಎನಿಸಿವೆ. ಅದರಲ್ಲೂ ಮುಖ್ಯವಾಗಿ ಯಾವುದೇ ಅಡ್ಡಪರಿಣಾಮ ಬರದಂತೆ ಸಮಸ್ಯೆಯನ್ನು ಮೂಲದಿಂದಲೇ ನಿರ್ಮೂಲನೆ ಮಾಡಲು ಸಾಧ್ಯವಿದೆ. ಹರಿದ್ವಾರದಲ್ಲಿರುವ ಪತಂಜಲಿ ರಿಸರ್ಚ್ ಸಂಸ್ಥೆಯು ನಡೆಸಿದ ಸಂಶೋಧನೆಯಲ್ಲಿ, ಬಂಜೆತನಕ್ಕೆ ಆಯುರ್ವೇದ ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎಂಬುದನ್ನು ಸಾಬೀತು ಮಾಡಿ ತೋರಿಸಿದೆ. ಪತಂಜಲಿ ಸಂಸ್ಥೆ ಈ ಆಯುರ್ವೇದ ಔಷಧವನ್ನು ತಯಾರಿಸುತ್ತದೆ. ಈ ಔಷಧಗಳು ಯಾವುವು, ಬಂಜೆತನಕ್ಕೆ ಏನು ಕಾರಣ ಇತ್ಯಾದಿ ಮಾಹಿತಿ ಇಲ್ಲಿದೆ.
ಬಂಜೆತನಕ್ಕೆ ಹಲವು ಕಾರಣಗಳಿರಬಹುದು. ಹಾರ್ಮೋನುಗಳ ಅಸಮತೋಲನವು ಒಂದು ಪ್ರಮುಖ ಕಾರಣವಾಗಿದೆ. ಮಹಿಳೆಯರು ಅನಿಯಮಿತ ಋತುಚಕ್ರ ಅಥವಾ ಪಿಸಿಒಡಿ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಇದರಿಂದಾಗಿ, ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಪುರುಷರು ಮತ್ತು ಮಹಿಳೆಯರಲ್ಲಿ ವೀರ್ಯಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅತಿಯಾದ ಒತ್ತಡ ಮತ್ತು ಖಿನ್ನತೆಯೂ ಇದಕ್ಕೆ ಕಾರಣವಾಗಬಹುದು. ಬೊಜ್ಜು ಅಥವಾ ತುಂಬಾ ಕಡಿಮೆ ತೂಕ ಇರುವುದು ಕೂಡ ಇದಕ್ಕೆ ಕಾರಣವಾಗಬಹುದು. ಥೈರಾಯ್ಡ್ ಅಥವಾ ಮಧುಮೇಹದಂತಹ ಕಾಯಿಲೆಗಳು, ಧೂಮಪಾನದಂತಹ ಚಟ, ಮದ್ಯಪಾನ ಮತ್ತು ವಯಸ್ಸು ಹೆಚ್ಚಾಗುವುದು ಸಹ ಇದಕ್ಕೆ ಪ್ರಮುಖ ಕಾರಣವಾಗಬಹುದು.
ಪತಂಜಲಿ ಔಷಧಗಳ ಪ್ರಯೋಜನಗಳು
ಅಶ್ವಗಂಧ ಚೂರ್ಣ
ಪತಂಜಲಿಯ ಸಂಶೋಧನೆಯ ಪ್ರಕಾರ, ಅಶ್ವಗಂಧ ಚೂರ್ಣವು ಬಂಜೆತನಕ್ಕೆ ಚಿಕಿತ್ಸೆ ನೀಡುವಲ್ಲಿ ಪ್ರಯೋಜನಕಾರಿ ಎಂಬುದು ಗೊತ್ತಾಗಿದೆ. ಅಶ್ವಗಂಧ ಪುರುಷರಲ್ಲಿ ವೀರ್ಯದ ಗುಣಮಟ್ಟ ಮತ್ತು ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಹಿಳೆಯರಿಗೆ ಅಂಡೋತ್ಪತ್ತಿಯನ್ನು ನಿಯಮಿತಗೊಳಿಸುತ್ತದೆ.
ಇದನ್ನೂ ಓದಿ: ಥೈರಾಯ್ಡ್ ಕಾಯಿಲೆಗೆ ಪರಿಣಾಮಕಾರಿ ಔಷಧಿ ಪತಂಜಲಿ ದಿವ್ಯ ಥೈರೋಗ್ರಿಟ್; ಇದರ ಉಪಯೋಗ, ಸೇವನೆ ಕ್ರಮ, ಮುನ್ನೆಚ್ಚರಿಕೆ ವಿವರ
ಶತಾವರಿ ಪುಡಿ
ಶತಾವರಿಯನ್ನು ಮಹಿಳೆಯರಿಗೆ ವರದಾನವೆಂದು ಪರಿಗಣಿಸಲಾಗುತ್ತದೆ. ಇದು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭಾಶಯವನ್ನು ಬಲಪಡಿಸುತ್ತದೆ. ಇದು ಹಾರ್ಮೋನುಗಳ ಅಸಮತೋಲನವನ್ನು ಸಹ ನಿಯಂತ್ರಿಸುತ್ತದೆ.
ದಿವ್ಯ ಕ್ವಾತ್
ಈ ವಿಶೇಷ ರೀತಿಯ ಕಷಾಯವು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಮುಟ್ಟಿನ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ದಿವ್ಯ ಚಂದ್ರಪ್ರಭಾ ವಟಿ
ಈ ಔಷಧಿ ಪುರುಷರು ಮತ್ತು ಮಹಿಳೆಯರಿಗೆ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಇದು ದೇಹದಿಂದ ಟಾಕ್ಸಿಕ್ ಅಥವಾ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಮೂಲಕ ದೈಹಿಕ ದೌರ್ಬಲ್ಯವನ್ನು ನಿವಾರಿಸಬಲ್ಲುದು.
ದಿವ್ಯ ಯೌವ್ವನಾಮೃತ ವಟಿ
ಇದು ವಿಶೇಷವಾಗಿ ವೀರ್ಯದ ಕೊರತೆ ಮತ್ತು ದೌರ್ಬಲ್ಯದಂತಹ ಪುರುಷ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಲ್ಲುದು.
ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ: ಇಗೋ ಇಲ್ಲಿದೆ ಪತಂಜಲಿ ಪರಿಹಾರ; ದಿವ್ಯ ಕೇಶ್ ತೈಲ ಮತ್ತು ಟ್ಯಾಬ್ಲೆಟ್
ಪತಂಜಲಿಯ ವಿಶೇಷ ಸಲಹೆಗಳು
ಪತಂಜಲಿ ಸಂಸ್ಥೆಯು ಔಷಧಿಗಳ ಮೇಲಷ್ಟೇ ಅಲ್ಲ, ಜೀವನಶೈಲಿಯ ಬದಲಾವಣೆಗಳ ಮೇಲೂ ಒತ್ತು ನೀಡುತ್ತದೆ. ಬಂಜೆತನವನ್ನು ಹೋಗಲಾಡಿಸಲು ನಿಯಮಿತ ಯೋಗ ಮತ್ತು ಪ್ರಾಣಾಯಾಮ ಬಹಳ ಮುಖ್ಯ ಎಂದು ಸ್ವತಃ ಬಾಬಾ ರಾಮದೇವ್ ಹೇಳುತ್ತಾರೆ. ಕಪಾಲಭಾತಿ, ಅನುಲೋಮ-ವಿಲೋಮ ಮತ್ತು ಭಸ್ತ್ರಿಕಾದಂತಹ ಪ್ರಾಣಾಯಾಮಗಳು ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲದೆ, ಆರೋಗ್ಯಕರ ಆಹಾರ ಸೇವಿಸಬೇಕು. ಹಸಿರು ತರಕಾರಿಗಳು, ಸೀಸನಲ್ ಫ್ರೂಟ್ಸ್, ಒಣ ಹಣ್ಣುಗಳು, ತುಪ್ಪ ಮತ್ತು ಹಾಲನ್ನು ಆಹಾರ ಕ್ರಮದಲ್ಲಿ ಒಳಗೊಳ್ಳಿ. ಹುರಿದ ಆಹಾರಗಳು, ಜಂಕ್ ಫುಡ್ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯಿರಿ ಮತ್ತು ದೇಹವನ್ನು ವಿಷಮುಕ್ತಗೊಳಿಸಿ.
ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ
ಪತಂಜಲಿ ಔಷಧಿಗಳು ನೈಸರ್ಗಿಕವಾಗಿದ್ದರೂ, ಯಾವುದೇ ಔಷಧಿಯನ್ನು ಆರಂಭಿಸುವ ಮೊದಲು ಆಯುರ್ವೇದ ವೈದ್ಯರನ್ನು ಭೇಟಿಯಾಗಿ, ನಿಮ್ಮ ಅರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿ. ಅವರ ಶಿಫಾರಸಿನ ಮೇಲೆ ಔಷಧ ಸೇವಿಸುವುದು ಯಾವಾಗಲೂ ಉತ್ತಮ ಹಾಗೂ ಸುರಕ್ಷಿತ.
ಇನ್ನಷ್ಟು ಆರೋಗ್ಯ ಇಲ್ಲಿ ಕ್ಲಿಕ್ ಮಾಡಿ




