International Yoga Day 2025 : ಊಟದ ನಂತರ ಯೋಗ ಮಾಡಬಹುದೇ? ಯೋಗದ ಮೊದಲು ಹಾಗೂ ನಂತರ ಯಾವ ಆಹಾರ ಸೇವಿಸಬೇಕು
ಅಂತಾರಾಷ್ಟ್ರೀಯ ಯೋಗ ದಿನದಂದು ವಿಶೇಷವಾಗಿ ಹಾಗೂ ಆರೋಗ್ಯ ಕ್ರಮವಾಗಿ ಆಚರಣೆಯನ್ನು ಮಾಡಬೇಕು. ಯೋಗವನ್ನು ಊಟದ ನಂತರ ಮಾಡಬಹುದೇ? ಅಥವಾ ಯೋಗಕ್ಕೂ ಮೊದಲು ಹಾಗೂ ನಂತರದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು. ಯೋಗದಿಂದ ಯಾವೆಲ್ಲ ಪ್ರಯೋಜಗಳಿವೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ (International Yoga Day 2025)ಭಾರತ ಈ ವಿಶೇಷ ಆಚರಣೆಯನ್ನು ಪರಿಚಯಿಸಿ, ವಿಶ್ವದ ಎಲ್ಲಾ ಕಡೆ ವಿಶ್ವ ಯೋಗ ದಿನವನ್ನು ಆಚರಣೆ ಮಾಡುವಂತೆ ವಿಶ್ವ ಸಂಸ್ಥೆ ಆದೇಶವನ್ನು ನೀಡಿದೆ. ಯೋಗ ಕೇವಲ ಯೋಗ ದಿನಕ್ಕೆ ಮಾತ್ರ ಸಿಮೀತವಾಗದೇ, ಪ್ರತಿದಿನದ ಚಟುವಟಿಕೆಯಲ್ಲಿ ಇದನ್ನು ಅಳವಡಿಸಬೇಕು. ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಶ್ವಸಂಸ್ಥೆಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಬೇಕು ಎಂದು ಪ್ರಸ್ತಾಪಿಸಿದರು. ಮೊದಲ ಯೋಗ ದಿನವನ್ನು 21 ಜೂನ್ 2015 ರಂದು ಪ್ರಪಂಚದಾದ್ಯಂತ ಆಚರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಜೂನ್ 21 ಅನ್ನು ಪ್ರಪಂಚದಾದ್ಯಂತ ಯೋಗ ದಿನವೆಂದು ಆಚರಿಸಲಾಗುತ್ತದೆ.
ಯೋಗವು ದೇಹದ ನಮ್ಯತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದಲ್ಲದೆ, ಒಟ್ಟಾರೆ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಯೋಗ ಮಾಡುವವನಿಗೆ ಯಾವುದೇ ರೋಗವಿಲ್ಲ ಎಂಬಂತೆ, ಯೋಗ ಆರೋಗ್ಯಕ್ಕೆ ಪರಶಕ್ತಿ ಎಂದು ಹೇಳಲಾಗಿದೆ. ಯೋಗದ ಜತೆಗೆ ಆಹಾರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಯೋಗ ಮಾಡುವವರ ಆಹಾರ ಪದ್ಧತಿ ಹೇಗಿರಬೇಕು ಮತ್ತು ಆಹಾರ ಸೇವಿಸುವುದು ಮತ್ತು ಯೋಗ ಮಾಡುವುದರ ನಡುವೆ ಎಷ್ಟು ಸಮಯದ ಅಂತರ ಇರಬೇಕು ಎಂಬ ಬಗ್ಗೆ ತಜ್ಙರೊಬ್ಬರು ಹೇಳಿದ್ದಾರೆ. NDTV ಜೊತೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಆಹಾರ ತಜ್ಞೆ ಮತ್ತು ಮಧುಮೇಹ ತಜ್ಞೆ ಡಾ. ನಿಶಾ ಜೈನ್ ಯೋಗ ಮಾಡುವ ಮೊದಲು ನಿಮ್ಮ ಹೊಟ್ಟೆ ಖಾಲಿಯಾಗಿರಬೇಕು. ಪ್ರತಿ ಬಾರಿಯೂ ನೀವು 8 ರಿಂದ 10 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಇದಕ್ಕಾಗಿ, ನೀವು ರಾತ್ರಿ ಬೇಗನೆ ಊಟ ಮಾಡಿ ಮರುದಿನ ಬೆಳಿಗ್ಗೆ ಯೋಗ ಮಾಡಬಹುದು. ಇಲ್ಲವೆಂದರೆ ಹಗಲಿನಲ್ಲಿ ಯೋಗ ಮಾಡುತ್ತಿದ್ದರೆ, ಊಟ ಮತ್ತು ಯೋಗದ ನಡುವೆ ಕನಿಷ್ಠ 1 ಗಂಟೆಯ ಅಂತರ ಅಗತ್ಯ. ಅಂದರೆ, ಊಟ ಮಾಡಿದ 1 ಗಂಟೆಯೊಳಗೆ ಯೋಗ ಮಾಡುವುದನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.
ಯೋಗ ಮಾಡುವ ಮೊದಲು ಏನು ತಿನ್ನಬೇಕು?
ಆಹಾರ ತಜ್ಞರು ಹೇಳುವ ಪ್ರಕಾರ ಯೋಗಕ್ಕೂ ಮೊದಲು ಲೈಟ್ ಆಹಾರಗಳನ್ನು ಸೇವನೆ ಮಾಡಬಹುದು. ಯೋಗ ಮಾಡುವ ಮೊದಲು ಗ್ರೀನ್ ಟೀ, ಕಪ್ಪು ಕಾಫಿ, ಬಾಳೆಹಣ್ಣು ಮತ್ತು ಸೇಬು ಹಣ್ಣುಗಳನ್ನು ತಿನ್ನಬಹುದು, ಬೀಜದಂತಹ ಆಹಾರಗಳನ್ನು ಸೇವನೆ ಮಾಡಬಹುದು. ಈ ಆಹಾರಗಳು ದೇಹದಲ್ಲಿ ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ, ಇದು ಯೋಗದ ಸಮಯದಲ್ಲಿ ದೇಹವನ್ನು ಸಕ್ರಿಯವಾಗಿರಿಸುತ್ತದೆ.
ಇನ್ನು ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸಂಪೂರ್ಣವಾಗಿ ಸೇವಿಸುವುದನ್ನು ತಪ್ಪಿಸಿ. ವಿಶೇಷವಾಗಿ ಯೋಗ ಮಾಡುವ ಮೊದಲು ಅಂತಹ ಯಾವುದೇ ಆಹಾರವನ್ನು ಸೇವಿಸಬೇಡಿ. ಇದು ನಿಮಗೆ ಉಬ್ಬುವುದು, ಹೊಟ್ಟೆಯಲ್ಲಿ ಭಾರವಾದ ಭಾವನೆ ಅಥವಾ ವಾಕರಿಕೆ ತೊಂದರೆಗಳನ್ನು ಉಂಟು ಮಾಡಬಹುದು.
ಇದನ್ನೂ ಓದಿ: ಯೋಗ ಅಂದ್ರೆ ಆಸನಗಳಲ್ಲ ಬದಲಿಗೆ ಕಲ್ಪನೆ, ನಿದ್ದೆ ಮತ್ತು ಸ್ಮೃತಿ: ಹೇಗಂತೀರಾ? ಇಲ್ಲಿದೆ ನೋಡಿ
ಯೋಗ ಮಾಡಿದ ನಂತರ ಎಷ್ಟು ಹಾಗೂ ಏನು ತಿನ್ನಬೇಕು?
ಯೋಗ ಮಾಡಿದ 30 ನಿಮಿಷಗಳ ನಂತರ ನೀವು ಸಾಕಷ್ಟು ನೀರು ಕುಡಿಯಬೇಕು. ಇದು ನಿಮ್ಮ ದೇಹಕ್ಕೆ ಮತ್ತೆ ಜಲಸಂಚಯನವನ್ನು ನೀಡುತ್ತದೆ. ಇದರ ಹೊರತಾಗಿ, ನೀವು ತೆಂಗಿನಕಾಯಿ ನೀರು ಅಥವಾ ನಿಂಬೆ ನೀರನ್ನು ಕುಡಿಯಬಹುದು. ಯೋಗದ ನಂತರ ಪ್ರೋಟೀನ್ ಆಹಾರಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ಬೇಯಿಸಿದ ಮೊಟ್ಟೆ, ಆಮ್ಲೆಟ್ ಇತ್ಯಾದಿಗಳನ್ನು ತಿನ್ನಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Fri, 20 June 25