ಹೆಚ್ಚು ಹೊತ್ತು ಜಿಮ್‌ನಲ್ಲಿ ಸಮಯ ಕಳೆಯಬೇಡಿ, ಹೃದಯ ಸ್ತಂಭನ ಅಪಾಯದ ಬಗ್ಗೆ ಬೆಂಗಳೂರಿನ ಡಾ. ದೀಪಕ್ ಕೃಷ್ಣಮೂರ್ತಿ ಹೇಳೋದೇನು?
ಹೃದಯ ದೇಹದ ಸೂಕ್ಷ್ಮ ಭಾಗ, ಅದನ್ನು ಯಾವಾಗಲೂ ಕಾಳಜಿಯಿಂದ ನೋಡಿಕೊಳ್ಳಬೇಕು. ಹೃದಯ ಸ್ತಂಭನಕ್ಕೆ ಅಥವಾ ಹೃದಯಾಘಾತಕ್ಕೆ ಈ ವರ್ಕ್ಔಟ್ ಕೂಡ ಕಾರಣವಾಗಬಹುದು. ಈ ಬಗ್ಗೆ ಬೆಂಗಳೂರಿನ ಡಾ. ದೀಪಕ್ ಕೃಷ್ಣಮೂರ್ತಿ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೃದಯ ಆರೋಗ್ಯಕ್ಕೆ ಎಷ್ಟು ಹೊತ್ತು ವರ್ಕ್ ಔಟ್ ಮಾಡಬೇಕು? ಹೃದಯ ಸ್ತಂಭನ ಅಪಾಯಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

ಫಿಟ್ನೆಸ್ಗಾಗಿ ಜಿಮ್ಗೆ ಹೋಗುವುದು ಸಹಜ, ಇದು ಆರೋಗ್ಯಕ್ಕೂ ಒಳ್ಳೆಯದು, ಆದರೆ ಜಿಮ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವುದು ಸರಿಯಲ್ಲ, ಎಷ್ಟು ಬೇಕು ಅಷ್ಟೇ ವರ್ಕ್ ಔಟ್ ಮಾಡುವುದು ಒಳ್ಳೆಯದು. ವರ್ಕ್ಔಟ್ ಹೆಚ್ಚು ಹೊತ್ತು ಮಾಡಿದ್ರೆ ಇದು ಹೃದಯ ಆರೋಗ್ಯಕ್ಕೆ (heart attack causes) ಹೆಚ್ಚು ಅಪಾಯವನ್ನು ಉಂಟು ಮಾಡುತ್ತಿದೆ. ಹಿಮಾಚಲ ಪ್ರದೇಶದ 35 ವರ್ಷದ ವ್ಯಕ್ತಿಯೊಬ್ಬ ಜಿಮ್ ಮಾಡಿ ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿತ್ತು. ವ್ಯಾಯಾಮದ ತೀವ್ರತೆ , ಪೂರಕ ಬಳಕೆ ಮತ್ತು ಸ್ನಾಯುಗಳ ಮೈಕಟ್ಟುಗಳ ಹಿಂದೆ ಒಂದು ಮೌನವಾದ ಅಪಾಯ ಇದೆ ಎಂಬುದು ಯಾರಿಗೂ ಗೊತ್ತಿಲ್ಲ.
ಬೆಂಗಳೂರು ಮೂಲದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಈ ಬಗ್ಗೆ ಕೆಲವೊಂದು ಸಲಹೆಗಳನ್ನು ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಡಾ. ದೀಪಕ್ ಕೃಷ್ಣಮೂರ್ತಿ ಅವರು ತಮ್ಮ ಎಕ್ಸ್ ಖಾತೆ ಬಗ್ಗೆ ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಮರಣದ ಅಕಾಲಿಕ ಅಥವಾ ಹೃದಯಾಘಾತದ ನಂತರ ಮರಣೋತ್ತರ ಪರೀಕ್ಷೆಯ ಮಾಡಲಾಗುತ್ತದೆ. ಅಲ್ಲಿ ಯಾವ ಕಾರಣದಿಂದ ಈ ಮರಣ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಹಠಾತ್ ಸಾವು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಹಿಡಿದು ಕಾರ್ಡಿಯೊಮಯೋಪತಿ ಅಥವಾ ಚಾನೆಲೋಪತಿಯಂತಹ ಆಧಾರ ಮೇಲೆ ಹೇಳಲಾಗುತ್ತದೆ. ಸ್ಟೀರಾಯ್ಡ್ ಬಳಕೆ, ಮನರಂಜನಾ ಔಷಧಗಳು, ಧೂಮಪಾನ ಅಥವಾ ಮದ್ಯ ಸೇವನೆಯಂತಹ ಅಂಶಗಳಿಂದಲೂ ಕೂಡ ಈ ಹೃದಯಾಘಾತ ಸಂಭವಿಸಬಹುದು.
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
Unless a postmortem is performed and toxicology test reports are made available, everything we speak is speculative. There could be numerous reasons. Was it a heart attack? Was it a cardiac arrest? Was it a heart attack that led to cardiac arrest? Was it a genetic condition like… https://t.co/n9Z7gd5jx9
— Dr Deepak Krishnamurthy (@DrDeepakKrishn1) June 16, 2025
ಇನ್ನು ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಅನೇಕರು ಕಮೆಂಟ್ನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು, ಅತಿಯಾದ ವ್ಯಾಯಾಮವು ನಿಜಕ್ಕೂ ಸಮಸ್ಯೆಯಾಗಬಹುದು, ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಅವರು ಉತ್ತರಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಪ್ರೋಟೀನ್ ಶೇಕ್‌ಗಳ ಬಗ್ಗೆ ಕೇಳಿದ್ದು,, ಇದಕ್ಕೆ ಉತ್ತರಿಸಿದ ಅವರು ವಿಷಕಾರಿ ವಸ್ತುಗಳಿಂದ ಕಲಬೆರಕೆಯಾದಾಗ ಮಾತ್ರ ಈ ಘಟನೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಊಟದ ನಂತರ ಯೋಗ ಮಾಡಬಹುದೇ? ಯೋಗದ ಮೊದಲು ಹಾಗೂ ನಂತರ ಯಾವ ಆಹಾರ ಸೇವಿಸಬೇಕು
ಅನೇಕ ಸೆಲೆಬ್ರಿಟಿಗಳು ಜಿಮ್‌ನಲ್ಲಿ ವರ್ಕ್ಔಟ್ ಮಾಡಿಯೇ ಸಾವನ್ನಪ್ಪಿದ್ದಾರೆ. ವ್ಯಾಯಾಮದ ಸಮಯದಲ್ಲಿ ಅವರು ಕುಸಿದು ಬಿದ್ದ ಸಾವನ್ನಪ್ಪಿದ್ದಾರೆ. ಹಾಸ್ಯನಟ ರಾಜು ಶ್ರೀವಾಸ್ತ, ಸಲ್ಮಾನ್ ಖಾನ್ ಅವರು ಸ್ನೇಹಿತ ಸಾಗರ್ ಪಾಂಡೆ ಕೂಡ ವರ್ಕ್ಔಟ್ ಮಾಡುವ ವೇಳೆಯೇ ಸಾವನ್ನಪ್ಪಿದ್ದಾರೆ. ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ನಟರಾದ ದೀಪೇಶ್ ಭನ್ ಮತ್ತು ಅಬೀರ್ ಗೋಸ್ವಾಮಿ ಕೂಡ ಈ ವರ್ಕ್ ಔಟ್ ಮಾಡುವ ವೇಳೆಯೇ ಸಾವನ್ನಪ್ಪಿದ್ದಾರೆ. ಇದು ಹೆಚ್ಚು ಹೊತ್ತು ವ್ಯಾಯಮ ಮಾಡಿದ ಕಾರಣ ಈ ಸಾವುನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ