AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ? ಇಲ್ಲಿದೆ ನೋಡಿ

ಪಿಸಿಓಡಿ (PCOD) ಮತ್ತು ಪಿಸಿಓಎಸ್ (PCOS) ಬಗ್ಗೆ ನೀವೂ ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ ಎಷ್ಟೋ ಹೆಣ್ಣು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿರ್ಲಕ್ಷ್ಯ ಮಾಡುವಂತದ್ದು ಅಲ್ಲವೇ ಅಲ್ಲ. ಆದರೆ ಇವುಗಳಿಗೆ ಔಷಧಗಳ ಮೊರೆ ಹೋಗುವ ಬದಲು ಯೋಗ ಮಾಡುವ ಮೂಲಕ ಈ ರೀತಿ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಆದರೆ ಯಾವ ರೀತಿಯ ಆಸನಗಳು ಈ ಸಮಸ್ಯೆಗೆ ಒಳ್ಳೆಯದು? ಈ ಬಗ್ಗೆ ಎಸ್‌ಡಿಎಂ ಕ್ಷೇಮವನದ ಹಿರಿಯ ವೈದ್ಯಾಧಿಕಾರಿ ಡಾ. ವಂದನಾ ನಿಕ್ಕಂ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ತಿಳಿಸಿರುವ ಸಲಹೆಗಳನ್ನು ಪಾಲಿಸುವ ಮೂಲಕ ಪಿಸಿಓಡಿ ಮತ್ತು ಪಿಸಿಓಎಸ್ ನಿಂದ ಮುಕ್ತಿ ಪಡೆಯಬಹುದಾಗಿದೆ.

ಪ್ರೀತಿ ಭಟ್​, ಗುಣವಂತೆ
|

Updated on: Jun 21, 2025 | 8:23 AM

Share

ಇತ್ತೀಚಿನ ದಿನಗಳಲ್ಲಿ ಪಿಸಿಓಡಿ (PCOD) ಮತ್ತು ಪಿಸಿಓಎಸ್ (PCOS) ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ನೀವು ಕೇಳಿರಬಹುದು. ಪಿಸಿಓಡಿ ಎಂದರೆ ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ ಮತ್ತು ಪಿಸಿಓಎಸ್ ಎಂದರೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್. ಇವೆರಡು ಹೆಣ್ಣು ಮಕ್ಕಳಲ್ಲಿ ತುಂಬಾ ಹೆಚ್ಚಾಗುತ್ತಿದ್ದು ಇದಕ್ಕೆ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ ಮತ್ತು ಹಾರ್ಮೋನ್ ನಲ್ಲಿ ಆಗಿರುವಂತಹ ವ್ಯತ್ಯಾಸಗಳು ಕಾರಣವಾಗಿರಬಹುದು. ಆದರೆ ಇದರಿಂದ ಮುಕ್ತಿ ಪಡೆಯಲು ನಾವು ಏನು ಮಾಡಬಹುದು ಎಂಬ ಪ್ರಶ್ನೆ ಬರುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳು ಬಂದಾಗ ಇವುಗಳಿಂದ ಮುಕ್ತಿ ಪಡೆಯಲು ಸುಲಭ ಮತ್ತು ಆರೋಗ್ಯಕರ ವಿಧಾನಗಳಿವೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಹಾಗಾದರೆ ಈ ಆರೋಗ್ಯ ಸಮಸ್ಯೆಯನ್ನು ಹೇಗೆ ತಡೆಯಬೇಕು ಎಂಬುದರ ಬಗ್ಗೆ ಎಸ್‌ಡಿಎಂ ಕ್ಷೇಮವನದ (Kshemavana) ಹಿರಿಯ ವೈದ್ಯಾಧಿಕಾರಿ ಡಾ. ವಂದನಾ ನಿಕ್ಕಂ (Dr Vandana Nikkam) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆಗೆ ಯೋಗ ಮಾಡುವ ಮೂಲಕ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಬಗ್ಗೆ ತಿಳಿಯಬಹುದಾಗಿದೆ.

ಡಾ. ವಂದನಾ ನಿಕ್ಕಂ ಅವರು ಹೇಳುವ ಪ್ರಕಾರ, ಪಿಸಿಓಡಿ ಮತ್ತು ಪಿಸಿಓಎಸ್ ಎಂಬ ಆರೋಗ್ಯ ಸಮಸ್ಯೆ ನಾವು ಅಲಕ್ಷ್ಯ ಮಾಡುವಂತದ್ದಲ್ಲ. ಹಾಗಾದರೆ ಇದರಿಂದ ಮುಕ್ತಿ ಪಡೆಯಲು ಮುಖ್ಯವಾಗಿ ನಮ್ಮ ಆಹಾರಕ್ರಮ, ನಮ್ಮ ಜೀವಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಮತ್ತು ಯೋಗಾಸನ ಮಾಡಬೇಕಾಗುತ್ತದೆ. ಅದಕ್ಕೂ ಮೊದಲು ಇವುಗಳ ಲಕ್ಷಣ ಬಗ್ಗೆ ತಿಳಿದುಕೊಳ್ಳಿ. ಕೆಲವರಲ್ಲಿ ಕುತ್ತಿನ ಸುತ್ತಲಿನ ಚರ್ಮದ ಕಪ್ಪಾಗುವಿಕೆ. ಪಿಸಿಓಡಿ ಮತ್ತು ಪಿಸಿಓಎಸ್ ಎರಡರಲ್ಲೂ, ಮುಟ್ಟಿನ ಚಕ್ರಗಳು ಅನಿಯಮಿತವಾಗಿರಬಹುದು ಅಥವಾ ಸಂಪೂರ್ಣವಾಗಿ ನಿಂತುಹೋಗಬಹುದು. ಮೊಡವೆಗಳು ಕಂಡು ಬರುವಂತದ್ದು. ಪಿಸಿಓಎಸ್ ನಲ್ಲಿ, ದೇಹವು ಇನ್ಸುಲಿನ್ ಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಅನಗತ್ಯ ಕೂದಲು ಬೆಳೆಯುವುದು ಇವೆಲ್ಲಾ ಈ ಸಮಸ್ಯೆಯ ಲಕ್ಷಣವಾಗಿದೆ. ಹಾಗಾಗಿ ಪಿಸಿಓಡಿ ಮತ್ತು ಪಿಸಿಓಎಸ್ ಇರುವವರು ತಾವು ಸೇವನೆ ಮಾಡುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅಂಶವನ್ನು ಕಡಿಮೆ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ಡಾ. ವಂದನಾ ನಿಕ್ಕಂ ಟಿವಿ9ಗೆ ನೀಡಿದ ಮಾಹಿತಿ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
Image
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
Image
ಊಟದ ನಂತರ ಯೋಗ ಮಾಡಬಹುದೇ?
Image
ಮೊದಲ ಬಾರಿಗೆ ಯೋಗ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ

ಇದನ್ನೂ ಓದಿ: ಬೆನ್ನು ನೋವು ಬರುವುದಕ್ಕೆ ಕಾರಣವೇನು? ಯೋಗದ ಮೂಲಕ ಅದನ್ನು ಪರಿಹರಿಸಿಕೊಳ್ಳುವುದು ಹೇಗೆ?

ಪಿಸಿಓಡಿ ಮತ್ತು ಪಿಸಿಓಎಸ್ ನಿಂದ ಮುಕ್ತಿ ಪಡೆಯಲು ಯೋಗ ಹೇಗೆ ಸಹಕಾರಿ?

ಡಾ. ವಂದನಾ ನಿಕ್ಕಂ ಅವರು ನೀಡಿರುವ ಮಾಹಿತಿ ಪ್ರಕಾರ, ಯೋಗ ಮಾಡುವರಿಂದ ಹಾರ್ಮೋನ್ ಸಮತೋಲನವಾಗುತ್ತದೆ. ಹಾಗಾಗಿ ಪಿಸಿಓಡಿ ಮತ್ತು ಪಿಸಿಓಎಸ್ ಇರುವವರು ಪಶ್ಚಿಮೋತ್ಥಾನಾಸ (Seated Forward Bend) ಮತ್ತು ಸೇತುಬಂಧಾಸನವನ್ನು (Bridge Pose) ಮಾಡಬಹುದು. ಇದು ಖಿನ್ನತೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ, ರಕ್ತ ಸಂಚಾರ ಸುಗಮವಾಗುವಂತೆ ಮಾಡುತ್ತದೆ. ಇನ್ನು ಇದರ ಜೊತೆಗೆ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ, ಪ್ರಾಣಾಯಾಮಗಳನ್ನು ಕೂಡ ಮಾಡಬೇಕು. ಇದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಅಲ್ಲದೆ ಯೋಗದ ಜೊತೆ ಜೊತೆಗೆ ನಾವು ಸೇವನೆ ಮಾಡುವ ಆಹಾರದ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಇದು ಯೋಗದಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಕಟ್ಟುನಿಟ್ಟಾದ ಆಹಾರ ಪದ್ದತಿಯ ಜೊತೆಗೆ ಯೋಗಾಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಪಿಸಿಓಡಿ ಮತ್ತು ಪಿಸಿಓಎಸ್ ನಿಂದ ಮುಕ್ತಿ ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ