ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು ಎನ್ನುತ್ತಾರೆ ಡಾ. ವಂದನಾ
ಮಕ್ಕಳು ಆರೋಗ್ಯವಾಗಿರಬೇಕು, ಚೆನ್ನಾಗಿ ಓದಬೇಕು ಹೀಗೆಲ್ಲಾ ಆಸೆ ಇರುವವರು ಪೋಷಕರು, ತಮ್ಮ ಮಕ್ಕಳಿಗೆ ಯೋಗ ಕಲಿಸಬೇಕು. ಆಗ ಮಾತ್ರ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಈಗಿನ ಮಕ್ಕಳು ಮೊಬೈಲ್, ಟಿವಿ, ಲ್ಯಾಪ್ಟಾಪ್ ಗಳಲ್ಲಿಯೇ ಮುಳುಗಿ ಹೋಗಿರುವುದರಂದ ಅವರ ಬೆಳವಣಿಗೆ ಎಲ್ಲಾ ರೀತಿಯಲ್ಲಿಯೂ ಕುಂಠಿತವಾಗುತ್ತದೆ. ಹಾಗಾಗಿ ಮಕ್ಕಳಿಗೆ ಯೋಗಾಸನ ಹೇಳಿಕೊಡುವುದು ಬಹಳ ಒಳ್ಳೆಯದು. ಈ ಕುರಿತು ಮತ್ತಷ್ಟು ಮಾಹಿತಿ ನೀಡಲು ಎಸ್ ಡಿ ಎಂ ಕ್ಷೇಮವನದ ಹಿರಿಯ ವೈದ್ಯಾಧಿಕಾರಿ ಡಾ. ವಂದನಾ ನಿಕ್ಕಂ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಇವರು ತಿಳಿಸಿರುವಂತಹ ಆಸನಗಳನ್ನು ಮಾಡಿಸುವ ಮೂಲಕ ಆರೋಗ್ಯದ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಬಹುದು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೀವನಶೈಲಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿರುವುದನ್ನು ನಾವು ನೋಡಬಹುದು. ಅವರ ಆಹಾರಕ್ರಮದಿಂದ ಹಿಡಿದು ಅವರ ನಡವಳಿಕೆಯ ವರೆಗೆ ಎಲ್ಲವೂ ಬದಲಾಗುತ್ತಿದೆ. ಅದರಲ್ಲಿಯೂ ಈಗೀನ ಮಕ್ಕಳು ಮೊದಲಿನವರಂತಲ್ಲ. ಏಕೆಂದರೆ ಅವರಿಗೆ ಹೊರಗೆ ಹೋಗಿ ಆಟವಾಡುವುದಕ್ಕಿಂತ ಹೆಚ್ಚು ಮನೆಯ ಒಳಗೆ ಬಂದು ಮೊಬೈಲ್, ಟಿವಿ, ಲ್ಯಾಪ್ಟಾಪ್ ನೋಡುವುದೇ ಹೆಚ್ಚು ಖುಷಿ ಕೊಡುತ್ತದೆ ಹಾಗಾಗಿ ಅವರಿಗೆ ದೈಹಿಕವಾಗಿ, ಮಾನಸಿಕವಾಗಿ ಎರಡು ರೀತಿಯಲ್ಲಿಯೂ ಬೆಳವಣಿಗೆ ಕುಂಠಿತವಾಗುತ್ತದೆ. ಏಕಾಗ್ರತೆ ಕೂಡ ಕಡಿಮೆಯಾಗುತ್ತದೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ಆಹಾರಕ್ರಮ ಮತ್ತು ದೈಹಿಕ ಚಟುವಟಿಕೆ. ಹಾಗಾಗಿ ಮಕ್ಕಳ ಬುದ್ಧಿಶಕ್ತಿ ಮತ್ತು ಅವರ ಏಕಾಗ್ರತೆ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಕಾಪಾಡಲು ಅವರಿಗೆ ಯೋಗಾಸನ (Yoga asana) ಹೇಳಿಕೊಡುವುದು ಬಹಳ ಒಳ್ಳೆಯದು. ಇದರಿಂದ ಮಕ್ಕಳಿಗೆ ಬಹಳ ಉಪಯೋಗವಿದೆ. ಹಾಗಾದರೆ ಮಕ್ಕಳು ಯಾವ ಆಸನ ಮಾಡುವುದು ಒಳ್ಳೆಯದು ಎಂಬುದರ ಕುರಿತು ಎಸ್‌ಡಿಎಂ ಕ್ಷೇಮವನದ (Kshemavana) ಹಿರಿಯ ವೈದ್ಯಾಧಿಕಾರಿ ಡಾ. ವಂದನಾ ನಿಕ್ಕಂ (Dr Vandana Nikkam) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಅವರು ತಿಳಿಸಿರುವ ಆಸನಗಳನ್ನು ಮಾಡಿಸುವ ಮೂಲಕ ಆರೋಗ್ಯದ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸಬಹುದು.
ಮಕ್ಕಳಿಗೆ ಯಾವ ಆಸನ ಒಳ್ಳೆಯದು?
ಡಾ. ವಂದನಾ ನಿಕ್ಕಂ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಪೋಷಕರು ಮಕ್ಕಳಿಗೆ ಕೆಲವೊಂದು ಆಸನಗಳನ್ನು ಹೇಳಿಕೊಡಬೇಕು. ಇವು ಮಕ್ಕಳ ಎಲ್ಲಾ ರೀತಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಇದರಿಂದ ಮಕ್ಕಳ ಬುದ್ಧಿಶಕ್ತಿ ಕೂಡ ಚುರುಕಾಗುತ್ತದೆ. ಮೊದಲನೇಯದು ವೃಕ್ಷಾಸನ. ಮಕ್ಕಳು ಪ್ರತಿನಿತ್ಯ ಈ ಆಸನವನ್ನು ಮಾಡುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಇನ್ನು ಎರಡನೇಯದು ಬಾಲಾಸನ, ಈ ಆಸನವನ್ನು ಮಕ್ಕಳು ಮಾಡುವುದರಿಂದ ರಕ್ತಪರಿಚಲನೆ ಸರಿಯಾಗಿ ಆಗುತ್ತದೆ. ಇನ್ನು ಮೂರನೇಯದು ವೀರಭದ್ರಾಸನ, ಈ ಆಸನ ಕೂಡ ಮಕ್ಕಳ ಏಕಾಗ್ರತೆ ಹೆಚ್ಚಿಸಲು ನೆರವಾಗುತ್ತದೆ. ಇನ್ನು ಬದ್ಧ ಕೋನಾಸನ ಅಥವಾ ಚಿಟ್ಟೆ ಆಸನ ಮಾಡುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಡಾ. ವಂದನಾ ನಿಕ್ಕಂ ಅವರು ಹೇಳುವ ಪ್ರಕಾರ, “ಈ ಆಸನಗಳನ್ನು ಮಾಡುವುದರ ಜೊತೆಗೆ ಮಕ್ಕಳಿಗೆ ಪ್ರಾಣಾಯಾಮ, ಬ್ರೀಥಿಂಗ್ ಪ್ಯಾಟರ್ನ್ ಗಳ ಬಗ್ಗೆಯೂ ಸರಿಯಾಗಿ ತಿಳಿಸಿಕೊಡಬೇಕಾಗುತ್ತದೆ. ಏಕೆಂದರೆ ಮಕ್ಕಳಿಗೆ ದೊಡ್ಡವರಿಗೆ ಹೇಳಿಕೊಟ್ಟಷ್ಟು ಸುಲಭದಲ್ಲಿ ಹೇಳಿಕೊಡುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗಾಗಿ ಇವುಗಳನ್ನು ನೀವು ಸಮಾಧಾನವಾಗಿ ಮತ್ತು ಕ್ರಿಯೇಟಿವ್ ಆಗಿ ಹೇಳಿಕೊಡುವುದರಿಂದ ಮಕ್ಕಳು ಇವುಗಳನ್ನು ಸರಿಯಾಗಿ ಕಲಿಯುತ್ತದೆ. ಅದರಲ್ಲಿಯೂ ಯೋಗಕ್ಕೆ ಬ್ರೀಥಿಂಗ್ ಪ್ಯಾಟರ್ನ್ ಸರಿಯಾಗಿರಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಇವುಗಳನ್ನು ಮೊದಲು ಹೇಳಿಕೊಡಿ. ನೀವು ಮಕ್ಕಳಿಗೆ ಬ್ರಾಹ್ಮರಿ ಪ್ರಾಣಾಯಾಮ ಮಾಡಲು ಹೇಳಿಕೊಡಬಹುದು. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಇದರ ಜೊತೆಗೆ ಮಕ್ಕಳಿಗೆ ರಿಲಾಕ್ಸೇಷನ್ ಅಥವಾ ವಿಶ್ರಾಂತಿ ಮತ್ತು ಧ್ಯಾನಗಳನ್ನು ಹೇಳಿಕೊಡಬಹುದು. ಮಕ್ಕಳಿಗೆ ಕುಳಿತುಕೊಂಡು ಧ್ಯಾನ ಮಾಡಿ ಎಂದರೆ ಯಾವ ಮಕ್ಕಳು ಸಹ ಮಾಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನ ಹರಿಸಿ ಎಂದು ಹೇಳಬಹುದು. ಇದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: International Day of Yoga 2025 : ಜೂನ್ 21 ರಂದೇ ಯೋಗ ದಿನಾಚರಣೆ ಆಚರಿಸುವುದರ ಹಿಂದಿದೆ ಅಚ್ಚರಿಯ ಕಾರಣ
ಮಕ್ಕಳಿಗೆ ಹೇಗೆಲ್ಲಾ ಆಸನ ಮಾಡಿಸಬಹುದು?
ಡಾ. ವಂದನಾ ನಿಕ್ಕಂ ಅವರು ಮಕ್ಕಳಿಗೆ ಸುಲಭವಾಗಿ ಆಸನಗಳನ್ನು ಹೇಳಿಕೊಡುವುದಕ್ಕೆ ಕೆಲವು ಸಲಹೆಗಳನ್ನು ನೀಡಿದ್ದು, ನೀವು ಕೂಡ ಅನುಸರಿಸಬಹುದಾಗಿದೆ. ಸಾಮಾನ್ಯವಾಗಿ ಮಕ್ಕಳಿಗೆ ಯೋಗ, ಧ್ಯಾನ ಮಾಡಿ ಎಂದರೆ ಮಾಡುವುದಿಲ್ಲ ಹಾಗಾಗಿ ಅವರಿಗೆ ಅವರ ಭಾಷೆಯಲ್ಲಿಯೇ ಅಂದರೆ ಮಕ್ಕಳಿಗೆ ಇಷ್ಟವಾಗುವ ಹಾಗೆ ಹೇಳಿಕೊಡಬೇಕು. ಪ್ರಾಣಿಗಳಂತೆ ಮಾಡಿ, ಚಿಟ್ಟಿಯಂತೆ ಮಾಡಿ ಅಥವಾ ಆಟದ ರೀತಿಯಲ್ಲಿ ಅವರಿಗೆ ಇವುಗಳನ್ನು ಹೇಳಿಕೊಡಬೇಕು. ಈ ರೀತಿ ಮಾಡುವುದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಮಾತ್ರವಲ್ಲ ಮಕ್ಕಳ ಆಸಕ್ತಿ, ಏಕಾಗ್ರತೆ ಎಲ್ಲವೂ ಹೆಚ್ಚಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ