AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು

ಜಪಾನಿನ ಜನರು ಯಾಕೆ 100 ವರ್ಷ ಅಥವಾ ದೀರ್ಘಾಯುಷ್ಯ ಯಾಕೆ ಗೊತ್ತಾ? ಅವರು ದೀರ್ಘಾಯುಷ್ಯ ರಹಸ್ಯ ಇಲ್ಲಿದೆ. ಅವರು ಅಳವಡಿಸಿಕೊಂಡಿರುವ ಈ 3 ಅಭ್ಯಾಸಗಳು ಅವರನ್ನು ದೀರ್ಘಾಯುಷ್ಯ ಇರುವಂತೆ ನೋಡಿಕೊಳ್ಳುತ್ತದೆ. ಭಾರತದಲ್ಲಿ ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದುವ ಪ್ರಕರಣ ನೋಡುತ್ತೀರಬಹುದು. ಆದರೆ ಜಪಾನ್​​ನಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡ ಕಾರಣ ಇದೀಗ ಅಲ್ಲಿನ ಜನ ಆರೋಗ್ಯವಾಗಿ ಹಾಗೂ ದೀರ್ಘಾಯುಷ್ಯಗಳು. ಈ ಬಗ್ಗೆ ಆಚಾರ್ಯ ಮನೀಶ್ ಜಿ ಅವರು ಕೇಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.

ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು
ಸಾಂದರ್ಭಿಕ ಚಿತ್ರImage Credit source: pinterest
ಸಾಯಿನಂದಾ
| Edited By: |

Updated on: Jun 22, 2025 | 7:44 PM

Share

ಜಪಾನ್ ಆರೋಗ್ಯದ (japanese lifestyle) ವಿಚಾರದಲ್ಲಿ ಮುಂದು, ಜಪಾನಿಯರು 40ರಲ್ಲೂ ಫಿಟ್​​ ಆಗಿರುತ್ತಾರೆ. ಅವರ ಆರೋಗ್ಯ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳಬೇಕಾ? ಈ ಲೇಖನವನ್ನು ಓದಿ. ಅವರು ಪಾಲನೆ ಮಾಡುವ ಈ 3 ನಿಯಮಗಳು ಅವರ  ಆಯಸ್ಸನ್ನು 100ರಷ್ಟು ವೃದ್ಧಿಸುತ್ತದೆ. ಜಪಾನಿಯರು ಕೆಲವು ಸರಳ ಮತ್ತು ಅದ್ಭುತ ಅಭ್ಯಾಸದಿಂದ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಉಡುಗೊರೆಯನ್ನು ಪಡೆದಿದ್ದಾರೆ. ಅದೇ ರೀತಿ  ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತ ನಾವು ಸಹ ದೀರ್ಘಾಯುಷ್ಯ ಪಡೆಯಬಹುದು. ಇಂದಿನ ಭಾರತದಲ್ಲಿ ಅನೇಕ ಯುವ ಜನರು ತಮ್ಮ ಆಹಾರ ಪದ್ಧತಿ ಕಡೆಗೆ ಗಮನ ನೀಡುತ್ತಿಲ್ಲ. ಹೊರಗಿನ ಊಟಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳು ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಜಪಾನ್​​ನಲ್ಲಿ ಸಾವಿನ ಪ್ರಾಣ ಕಡಿಮೆ, ಯಾಕೆಂದು ಆಚಾರ್ಯ ಮನೀಶ್ ಜಿ ಅವರು @chikitsaguru ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ. ಜಪಾನ್, ಕೊರಿಯಾ, ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಹೇಗೆ ಬದುಕುತ್ತಾರೆ. ಅವರು ತಮ್ಮ ದೈನಂದಿನ ಜೀವನಶೈಲಿಯನ್ನು ಎಷ್ಟು ಅದ್ಭುತ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದರೆ ಒಂದು ರೋಗವು ಅವರ ಹತ್ತಿರ ಬರುವುದಿಲ್ಲ.

ಜಪಾನಿನ ದೀರ್ಘಾಯುಷ್ಯ ರಹಸ್ಯ;

ವಜ್ರಾಸನದಲ್ಲಿ ಊಟ ಮಾಡುವುದು:

ಜಪಾನ್ ಮತ್ತು ಅನೇಕ ಏಷ್ಯಾದ ದೇಶಗಳ ಜನರು ವಜ್ರಾಸನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ಮೊಣಕಾಲುಗಳ ಮೇಲೆ ಕುಳಿತು ದೇಹದ ಭಾರವನ್ನು ಹಿಮ್ಮಡಿಯ ಮೇಲೆ ಇಟ್ಟುಕೊಳ್ಳುವುದು. ಆಯುರ್ವೇದ ಮತ್ತು ಯೋಗ ವಿಜ್ಞಾನವು ಈ ಭಂಗಿಯನ್ನು ಅತ್ಯುತ್ತಮವೆಂದು ಪರಿಗಣಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ, ಆಹಾರವು ತ್ವರಿತವಾಗಿ ಮತ್ತು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.

ಇದನ್ನೂ ಓದಿ
Image
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
Image
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
Image
ಊಟದ ನಂತರ ಯೋಗ ಮಾಡಬಹುದೇ?
Image
ಮೊದಲ ಬಾರಿಗೆ ಯೋಗ ಮಾಡುವವರು ಈ ವಿಷಯಗಳನ್ನು ಮರೆಯಬೇಡಿ

ವಜ್ರಾಸನದ ಪ್ರಯೋಜನ:

  • ಆಹಾರವು ಬೇಗನೆ ಮತ್ತು ಸರಿಯಾಗಿ ಜೀರ್ಣವಾಗುತ್ತದೆ.
  • ಗ್ಯಾಸ್, ಆಮ್ಲೀಯತೆ, ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಚಯಾಪಚಯ ಕ್ರಿಯೆ ಸುಧಾರಿಸುತ್ತದೆ, ಇದು ಬೊಜ್ಜು ಕಡಿಮೆ ಮಾಡುತ್ತದೆ.
  • ಬೆನ್ನುಮೂಳೆಯು ನೇರವಾಗಿರುತ್ತದೆ, ಇದು ದೇಹದ ಭಂಗಿಯನ್ನು ಸುಧಾರಿಸುತ್ತದೆ.

ಜಪಾನಿನ ಜನರ ಜೀವನಶೈಲಿ ಹೇಗಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ:

ಸೂರ್ಯಾಸ್ತದ ನಂತರ ಊಟ ಮಾಡಬಾರದು;

ಸೂರ್ಯ ಮುಳುಗಿದ ತಕ್ಷಣವೇ ಈ ದೇಶಗಳಲ್ಲಿ ಜನರು ತಮ್ಮ ದಿನದ ಊಟವನ್ನು ಮುಗಿಸುತ್ತಾರೆ. ರಾತ್ರಿ ಊಟ ಮಾಡದಿರುವುದರಿಂದ, ದೇಹವು ತನ್ನಲ್ಲಿರುವ ವಿಷದ ಅಂಶಗಳನ್ನು ನಿವಾರಣೆ ಮಾಡಲು ಹಾಗೂ ಜೀರ್ಣಕ್ರಿಯೆಯನ್ನು ಪ್ರಾರಂಭಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದು ರೋಗಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯು ಬಲಪಡಿಸುತ್ತದೆ. ಆಯುರ್ವೇದದಲ್ಲಿ ಕೂಡ ಇದನ್ನು ‘ರಾತ್ರೌ ಭೋಜನಂ ತ್ಯಜೇತ್’ ಎಂದು ಹೇಳಲಾಗುತ್ತದೆ, ಅಂದರೆ, ರಾತ್ರಿ ಊಟವನ್ನು ಬಿಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೇಗ ಊಟ ಮಾಡುವುದರಿಂದಾಗುವ ಪ್ರಯೋಜನ:

  • ಸೂರ್ಯಾಸ್ತದ ನಂತರ, ದೇಹದ ಜೀರ್ಣಕ್ರಿಯೆಯ ಶಕ್ತಿ ಕಡಿಮೆಯಾಗುತ್ತದೆ, ಇದರಿಂದಾಗಿ ಆಹಾರ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಕೊಬ್ಬಾಗಿ ಬದಲಾಗಬಹುದು.
  • ರಾತ್ರಿ ತಿನ್ನುವುದನ್ನು ತಪ್ಪಿಸುವುದರಿಂದ ದೇಹವು ಆಟೋಫ್ಯಾಜಿ ಪ್ರಕ್ರಿಯೆಗೆ ಸಮಯ ನೀಡುತ್ತದೆ, ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ.
  • ನಿಮ್ಮ ಹೊಟ್ಟೆ ಖಾಲಿಯಾಗಿರುವುದರಿಂದ ನೀವು ಚೆನ್ನಾಗಿ ನಿದ್ರೆ ಮಾಡುತ್ತೀರಿ.
  • ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂಓದಿ: ಹೆರಿಗೆಯ ನಂತರ 90 ಕೆಜಿಯಿಂದ 57 ಕೆಜಿ ತೂಕ ಇಳಿಸಿದ ಮಹಿಳೆ, ಈ ಪದ್ಧತಿಯಿಂದ ಎಲ್ಲವೂ ಸಾಧ್ಯ

ಸರಿಯಾದ ಆಹಾರ ಕ್ರಮ:

ಅಲ್ಲಿನ ಜನರ ಆಹಾರದಲ್ಲಿ ಪಿಜ್ಜಾ ಇಲ್ಲ, ರಾಸಾಯನಿಕಗಳಿಲ್ಲ, ಪ್ರೋಟೀನ್ ಶೇಕ್‌ಗಳಿಲ್ಲ ಮತ್ತು ಔಷಧಿಗಳಿಲ್ಲ. ಅವರದ್ದು ಸರಳ, ದೇಸಿ, ನೈಸರ್ಗಿಕ ಮತ್ತು ಸಮತೋಲಿತ ಆಹಾರಗಳು ಅವರ ಜೀವನದ ಸರಿಯಾದ ಮಂತ್ರವಾಗಿದ್ದು, ಇದು ಅವರಿಗೆ ದೀರ್ಘಾಯುಷ್ಯವನ್ನು ನೀಡುತ್ತದೆ. ಜಪಾನಿನ ಜನರು ಗಡಿಬಿಡಿಯಿಂದ ದೂರವಿರುತ್ತಾರೆ. ಅವರ ಜೀವನ ಸರಳ ಆದರೆ ಶಿಸ್ತುಬದ್ಧ. ಉದ್ವೇಗ ಮುಕ್ತ ದಿನಚರಿ ಮತ್ತು ಯೋಗ ಅವರ ಜೀವನದ ಒಂದು ಭಾಗವಾಗಿದೆ.

ಜೀವನಶೈಲಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು

  • ಪ್ರತಿದಿನ ಸ್ವಲ್ಪ ಸಮಯ ವಜ್ರಾಸನದಲ್ಲಿ ಕುಳಿತುಕೊಳ್ಳಿ.
  • ಸೂರ್ಯಾಸ್ತದ ಮೊದಲು ಊಟ ಮಾಡಿ
  • ಹೊರಗಿನ ಆಹಾರದಿಂದ ದೂರವಿರಿ.
  • ಯೋಗ ಮತ್ತು ಧ್ಯಾನವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವುದು
  • ಸಾಕಷ್ಟು ನಿದ್ರೆ ಪಡೆಯಿರಿ ಮತ್ತು ಒತ್ತಡದಿಂದ ಮುಕ್ತವಾಗಿರಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ