ಹೆರಿಗೆಯ ನಂತರ 90 ಕೆಜಿಯಿಂದ 57 ಕೆಜಿ ತೂಕ ಇಳಿಸಿದ ಮಹಿಳೆ, ಈ ಪದ್ಧತಿಯಿಂದ ಎಲ್ಲವೂ ಸಾಧ್ಯ
ಹೆರಿಗೆಯ ನಂತರ ತೂಕ ಇಳಿಸುವುದೇ ಒಂದು ದೊಡ್ಡ ತಲೆನೋವು, ಮಗು, ಮನೆ ಎಂದು ದೊಡ್ಡ ಜವಾಬ್ದಾರಿಗಳ ಜತೆಗೆ ತಮ್ಮ ಆರೋಗ್ಯವನ್ನು ಕೂಡ ಈ ಮಹಿಳೆಯರು ಸಹಿಸಿಕೊಳ್ಳಬೇಕು. ಆದರೆ ಇದನ್ನೆಲ್ಲಾ ದಾಟಿ ತಮ್ಮ ಆರೋಗ್ಯದ ಬಗ್ಗೆ ಹಾಗೂ ತೂಕ ಇಳಿಸುವ ಬಗ್ಗೆ ಯೋಚನೆ ಮಾಡುವುದು ಅಗತ್ಯ. ಇದಕ್ಕಾಗಿ ಇನ್‌ಸ್ಟಾಗ್ರಾಮ್ ನಲ್ಲಿ ನಿಧಿ ಎಂಬುವವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅವರ ಈ ರೀತಿಯ ಪ್ಲಾನ್ನಿಂದ 57 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಹೆರಿಗೆಯ ನಂತರ ಈ ತಾಯಿಯಂದಿರ ತೂಕ ಹೆಚ್ಚಾಗುವುದು ಗೊತ್ತೇ ಆಗುವುದಿಲ್ಲ. ತೂಕ ಕಡಿಮೆ ಮಾಡಲು ಒಂದಲ್ಲ ಒಂದು ಸರ್ಕಸ್ ಮಾಡುತ್ತಾ ಇರುತ್ತಾರೆ. ಆದರೆ ಮಕ್ಕಳು, ಮನೆ ಎಂಬ ಜವಾಬ್ದಾರಿಯಿಂದ ಇದು ಯಾವುದು ಸಾಧ್ಯವಾಗುದಿಲ್ಲ. ಆದರೆ ನಿಧಿ ಗುಪ್ತಾ ಎಂಬವವರು 90ರಿಂದ 57 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಅವರು ಆರೋಗ್ಯ ತರಬೇತುದಾರರು ಕೂಡ ಹೌದು. ನಿಧಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ, ಗರ್ಭಧಾರಣೆಯ ನಂತರ ತಮ್ಮ ತೂಕ 90 ಕೆಜಿ ಇತ್ತು. ಆದರೆ ನಂತರದಲ್ಲಿ ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದ ಸಂಯೋಜನೆಯಿಂದ 57 ಕೆಜಿಗೆ ಇಳಿದಿದೆ ಎಂದು ಹೇಳಿದ್ದಾರೆ. ಗರ್ಭಧಾರಣೆಯ ನಂತರ ಮೂರು ವರ್ಷಗಳ ಕಾಲ ವ್ಯಾಯಾಮ ಮತ್ತು ಸರಿಯಾದ ಆಹಾರದಿಂದ ಈ ಫಲಿತಾಂಶ ಬರಲು ಸಾಧ್ಯ ಎಂದು ಹೇಳಿದ್ದಾರೆ. ಈ ತೂಕ ಇಳಿಯುವವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ಹೇಳಿದ್ದಾರೆ.
ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ನಿಧಿ ಮನೆಯಲ್ಲೇ ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ. ಬೆಳಿಗ್ಗೆ 5 ಗಂಟೆಗೆ ತನ್ನ ಮಗ ಮಲಗಿದ್ದಾಗ ಡಂಬೆಲ್ಸ್ ಎತ್ತುವುದು ಮತ್ತು ಕೆಲವು ಕಾರ್ಡಿಯೋ ವ್ಯಾಯಾಮಗಳನ್ನು ಮಾಡಿದ್ದಾರೆ. ಇದರ ಜತೆಗೆ ಆಹಾರಕ್ರಮದ ಬದಲಾವಣೆಗಳನ್ನು ಕೂಡ ಹೇಳಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
- ಊಟದ ಕ್ರಮ ಬಗ್ಗೆ ಗಮನ ನೀಡಿದರು. ಯಾವುದೇ ಸಂಸ್ಕರಿಸಿದ ಆಹಾರವನ್ನು ಸೇವಿಸಲಿಲ್ಲ.
- ಯಾವುದೇ ಪಾರ್ಟಿಗಳಿಲ್ಲ ಮತ್ತು ರಾತ್ರಿಯ ಸುತ್ತಾಟವಿಲ್ಲ
- ಒಂದೊಂದು ಬಾರಿ ಹೊರಗಡೆ ಮನೆ ಊಟ ಸಿಗಲ್ಲ ಎಂದು, ಮನೆಯಿಂದಲೇ ಊಟ ತಯಾರಿಸಿ ತೆಗೆದುಕೊಂಡು ಹೋಗುತ್ತಿದ್ದರು.
ಇದು ಕಷ್ಟಕರವಾಗಿತ್ತು ಆದರೆ ಕೊನೆ.. ಕೊನೆಗೆ ಈ ಆಹಾರ ಕ್ರಮಕ್ಕೆ ಒಗ್ಗಿಕೊಂಡೆ ಎಂದು ಹೇಳಿದ್ದಾರೆ. ಹೀಗೆ ಈ ಆಹಾರ ಪದ್ಧತಿಯನ್ನು ಮುಂದೆ ಮುಂದೆ ತೆಗೆದುಕೊಂಡು ಹೋಗಿ, ಎರಡು ವರ್ಷಗಳ ಕಾಲ ಹೀಗೆ ನಡೆಯಿತು. ಬಳಿಕ 64 ಕೆಜಿಗೆ ತೂಕ ಇಳಿಸಿಕೊಂಡ, ನಿಧಿ ತನ್ನ ಆಹಾರದಲ್ಲಿ ಹಾಲು, ಮೊಟ್ಟೆ, ಕೋಳಿ ಕೂಡ ಸೇವನೆ ಮಾಡುತ್ತಿದ್ದರು. ಇದರ ಜತೆಗೆ ಹೆವಿವೇಯ್ಟ್ ತರಬೇತಿಯನ್ನು ಕೂಡ ಮಾಡಿದ್ರು, ಅಲ್ಲಿಂದ ಅವರು 57 ಕೆಜಿಗೆ ಇಳಿಯಲು 4 ತಿಂಗಳ ಕಾಲ ಬೇಕಾಯಿತು. ಇದೀಗ ನಿಧಿ 60 ಕೆಜಿಗೆ ತಮ್ಮ ತೂಕವನ್ನು ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಮಾಂಸಕ್ಕೆ ಪರ್ಯಾಯ ಹಲಸಿನ ಗುಜ್ಜೆ, ಸೆಲೆಬ್ರಿಟಿಗಳಿಗೂ ಇದುವೇ ಬೇಕು
ನಿಧಿ ಹೇಳೋದೇನು?
ನಾವೆಲ್ಲರೂ ವಿಭಿನ್ನ ದೇಹ ಪ್ರಕಾರಗಳನ್ನು ಹೊಂದಿರುವ ವಿಭಿನ್ನ ಜನರು ಎಂದು ನಾನು ಹೇಳುತ್ತೇನೆ. ನಾವು ಏನು ಕೆಲಸ ಮಾಡುತ್ತೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಬೇಕು. ಅಲ್ಲದೆ, ಫಿಟ್ ಆಗಿರಲು ಪ್ರತಿದಿನ ಸಾಕಷ್ಟು ತ್ಯಾಗ, ಸಮರ್ಪಣೆ ಮತ್ತು ಬದ್ಧತೆಯನ್ನು ಹೊಂದಿರಬೇಕು ಎಂದು ನಿಧಿ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sun, 22 June 25








